*  ಐಟಿ ಅಕ್ರಮ ಹಣ ಹುಡುಕುತ್ತದೆಯೇ ಹೊರತು ಯಾವ ಪಾರ್ಟಿ ಎಂಬುದನ್ನಲ್ಲ*  ಐಟಿ ದಾಳಿಗೊಳಗಾದವರು ಅಕ್ರಮವನ್ನು ಕಡಿಮೆ ಮಾಡಲಿ *  ಶ್ರೀನಿವಾಸ ಪ್ರಸಾದ್‌ ಅವರನ್ನು ಬಿಜೆಪಿ ಗೌರವದಿಂದ ನಡೆಸಿಕೊಂಡಿದೆ  

ಮಡಿಕೇರಿ(ಆ.07): ಐಟಿ ಸರ್ಕಾರೇತರ ಸ್ವಾಯತ್ತ ಸಂಸ್ಥೆಯಾಗಿದ್ದು, ಅಕ್ರಮ ಇದ್ದರೆ ಬಿಜೆಪಿಯವರ ಮೇಲೂ ದಾಳಿ ಮಾಡುತ್ತದೆ. ಕಾಂಗ್ರೆಸ್‌ನ ಮೇಲೂ ದಾಳಿ ಮಾಡುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. 

ಜಮೀರ್‌ ಅಹ್ಮದ್‌, ರೋಷನ್‌ ಬೇಗ್‌ ಅವರ ಮನೆ ಮೇಲೆ ಐಟಿ ರೇಡ್‌ ರಾಜಕೀಯ ಪ್ರೇರಿತ’ ಎಂಬ ಕಾಂಗ್ರೆಸ್‌ ಆರೋಪದ ಬಗ್ಗೆ ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಸಚಿವರು, ಐಟಿ ಅಕ್ರಮ ಹಣ ಹುಡುಕುತ್ತದೆಯೇ ಹೊರತು ಯಾವ ಪಾರ್ಟಿ ಎಂಬುದನ್ನಲ್ಲ. ಕೆಲವರು ಸಿಟ್ಟು ಬಂದಾಗ ಇನ್ನೊಬ್ಬರನ್ನು ದೂರುತ್ತಾರೆ. ಕಾಂಗ್ರೆಸ್‌ನವರಿಗೆ ಬೇರೆ ದಾರಿ ಇಲ್ಲ. ತಪ್ಪನ್ನು ಸಮರ್ಥನೆ ಮಾಡುವುದು ಸರಿಯಲ್ಲ. ಐಟಿ ದಾಳಿಗೊಳಗಾದವರು ಅಕ್ರಮವನ್ನು ಕಡಿಮೆ ಮಾಡಲಿ ಎಂದರು.

ಜಮೀರ್‌ ಮೇಲೆ 'ಆಕ್ರಮಣ': ಇ.ಡಿ. ದಾಳಿಯ ಹಿಂದಿನ ಕಾರಣ ಮತ್ತು ರಾಜಕಾರಣ

ಸಂಸದ ವಿ. ಶ್ರೀನಿವಾಸ ಪ್ರಸಾದ್‌ ರಾಜಕೀಯ ನಿವೃತ್ತಿ ಘೋಷಣೆ ಬಗ್ಗೆ ಮಾತನಾಡಿದ ಸಚಿವ ಕೋಟ, ಅವರು ಹಿರಿಯ ಮುತ್ಸದ್ದಿ. ಅವರನ್ನು ನಮ್ಮ ಪಕ್ಷದಲ್ಲಿ ಗೌರವದಿಂದ ನಡೆಸಿಕೊಂಡಿದ್ದೇವೆ. ಅವರು ಇನ್ನೂ ಮುಂದುವರಿಯಬೇಕು. ಹಿರಿಯರು ನಮ್ಮ ಜತೆಗಿರಬೇಕು, ಮಾರ್ಗದರ್ಶನ ಮಾಡಬೇಕು. ಅವರ ಅನುಭವ ದೇಶಕ್ಕೆ, ಸಮಾಜಕ್ಕೆ ಸಿಗಬೇಕು ಎಂದು ಹೇಳಿದರು.