1 ವರ್ಷದಲ್ಲಿ ಬಯಲು ಸೀಮೆಗೆ ಎತ್ತಿನಹೊಳೆ ನೀರು: ಮುನಿಯಪ್ಪ
ಈ ಭಾಗದ ರೈತರು ರೇಷ್ಮೆ ಬೆಳೆಯಿಂದಲೇ ಜೀವನ ನಡೆಸುತ್ತಿದ್ದಾರೆ. ಮಳೆ ಆಧಾರದಲ್ಲಿಯೇ ರಾಗಿ ಬೆಳೆಯುತ್ತಿದ್ದಾರೆ. ಹಾಗಾಗಿ ಎತ್ತಿನ ಹೊಳೆ ಜವಾಬ್ದಾರಿಯನ್ನು ಉಪಮುಖ್ಯಮಂತ್ರಿಗಳು ಹೊತ್ತಿದ್ದು, ತಾಲೂಕಿನ ಕುಂದಾಣದಲ್ಲಿ ದೊಡ್ಡ ಟ್ಯಾಂಕ್ ಕಟ್ಟಿ ಈ ಭಾಗದ ಎಲ್ಲರಿಗೂ ಕುಡಿಯುವ ನೀರು ಪೂರೈಸಲಾಗುವುದು. ಬಯಲು ಸೀಮೆಯ ಎಲ್ಲ ಕೆರೆಗಳು ತುಂಬಲಿವೆ: ಸಚಿವ ಕೆ.ಎಚ್. ಮುನಿಯಪ್ಪ
ದೇವನಹಳ್ಳಿ(ಜ.14): ಇನ್ನು ಒಂದು ವರ್ಷದಲ್ಲಿ ಎತ್ತಿನ ಹೊಳೆ ಯೋಜನೆ ಪೂರ್ಣಗೊಂಡು ಬಯಲು ಸೀಮೆ ಜನರಿಗೆ ಕುಡಿಯುವ ನೀರು ದೊರಕಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಅಷ್ಟೇ ಅಲ್ಲ ಮೇಕೆದಾಟು ಯೋಜನೆಯೂ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದರು.
ಎತ್ತಿನಹೊಳೆ ಯೋಜನೆ ತ್ವರಿತಗೊಳಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ
ಈ ಭಾಗದ ರೈತರು ರೇಷ್ಮೆ ಬೆಳೆಯಿಂದಲೇ ಜೀವನ ನಡೆಸುತ್ತಿದ್ದಾರೆ. ಮಳೆ ಆಧಾರದಲ್ಲಿಯೇ ರಾಗಿ ಬೆಳೆಯುತ್ತಿದ್ದಾರೆ. ಹಾಗಾಗಿ ಎತ್ತಿನ ಹೊಳೆ ಜವಾಬ್ದಾರಿಯನ್ನು ಉಪಮುಖ್ಯಮಂತ್ರಿಗಳು ಹೊತ್ತಿದ್ದು, ತಾಲೂಕಿನ ಕುಂದಾಣದಲ್ಲಿ ದೊಡ್ಡ ಟ್ಯಾಂಕ್ ಕಟ್ಟಿ ಈ ಭಾಗದ ಎಲ್ಲರಿಗೂ ಕುಡಿಯುವ ನೀರು ಪೂರೈಸಲಾಗುವುದು. ಬಯಲು ಸೀಮೆಯ ಎಲ್ಲ ಕೆರೆಗಳು ತುಂಬಲಿವೆ ಎಂದು ಹೇಳಿದರು.