MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ನಕಲಿ ಪತ್ರಕರ್ತರ ಮೊಬೈಲ್‌ನಲ್ಲಿ ಮಹಿಳಾ ಅಧಿಕಾರಿಗಳ 100+ ಬೆ*ತ್ತಲೆ ವಿಡಿಯೋ; ಬಲ್ಬ್ ಓಲ್ಡರ್‌ನಲ್ಲಿ ಹಿಡನ್ ಕ್ಯಾಮೆರಾ!

ನಕಲಿ ಪತ್ರಕರ್ತರ ಮೊಬೈಲ್‌ನಲ್ಲಿ ಮಹಿಳಾ ಅಧಿಕಾರಿಗಳ 100+ ಬೆ*ತ್ತಲೆ ವಿಡಿಯೋ; ಬಲ್ಬ್ ಓಲ್ಡರ್‌ನಲ್ಲಿ ಹಿಡನ್ ಕ್ಯಾಮೆರಾ!

ಬೆಳಗಾವಿಯಲ್ಲಿ ಮಹಿಳಾ ಅಧಿಕಾರಿಯೊಬ್ಬರ ಮನೆಯಲ್ಲಿ ಹಿಡನ್ ಕ್ಯಾಮರಾ ಇಟ್ಟು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ನಕಲಿ ಪತ್ರಕರ್ತರ ಗ್ಯಾಂಗ್ ಅನ್ನು ಬಂಧಿಸಲಾಗಿದೆ. ಆರೋಪಿಗಳ ಮೊಬೈಲ್‌ನಿಂದ 100ಕ್ಕೂ ಹೆಚ್ಚು ಖಾಸಗಿ ವಿಡಿಯೋಗಳನ್ನು ವಶಪಡಿಸಿಕೊಳ್ಳಲಾಗಿದೆ.

2 Min read
Author : Sathish Kumar KH
Published : Feb 21 2026, 04:45 PM IST
Share this Photo Gallery
  • FB
  • TW
  • Linkdin
  • Whatsapp
16
ನಕಲಿ ಪತ್ರಕರ್ತರ ಗ್ಯಾಂಗ್‌ ಮೊಬೈಲ್‌ನಲ್ಲಿ ರಾಶಿ ರಾಶಿ ವಿಡಿಯೋ
Image Credit : Asianet News

ನಕಲಿ ಪತ್ರಕರ್ತರ ಗ್ಯಾಂಗ್‌ ಮೊಬೈಲ್‌ನಲ್ಲಿ ರಾಶಿ ರಾಶಿ ವಿಡಿಯೋ

ಬೆಳಗಾವಿ (ಫೆ.21): ಕುಂದಾನಗರಿ ಬೆಳಗಾವಿಯಲ್ಲಿ ಸಂಚಲನ ಮೂಡಿಸಿದ್ದ ಮಹಿಳಾ ಅಧಿಕಾರಿಯ ಮನೆಯಲ್ಲಿ ‘ಹಿಡನ್ ಕ್ಯಾಮರಾ’ ಇಟ್ಟಿದ್ದ ಪ್ರಕರಣ ಇದೀಗ ಮತ್ತಷ್ಟು ಭೀಕರ ತಿರುವು ಪಡೆದುಕೊಂಡಿದೆ. ಬಂಧಿತ ನಕಲಿ ಪತ್ರಕರ್ತರ ಗ್ಯಾಂಗ್‌ನ ಮೊಬೈಲ್ ಡೇಟಾವನ್ನು ಪೊಲೀಸರು ರಿಟ್ರೀವ್ (Data Restore) ಮಾಡಿದಾಗ, ಕೇವಲ ಒಬ್ಬರಲ್ಲ, ಬದಲಿಗೆ ನೂರಕ್ಕೂ ಹೆಚ್ಚು ಬೆತ್ತಲೆ ವಿಡಿಯೋಗಳು ಮತ್ತು ಮತ್ತೋರ್ವ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಯ ಖಾಸಗಿ ಜೀವನವನ್ನು ಹರಾಜು ಹಾಕಿದ ಭಯಾನಕ ಸತ್ಯ ಹೊರಬಿದ್ದಿದೆ.

26
ಬಲ್ಬ್ ಹೋಲ್ಡರ್ ಒಳಗೆ 'ರಹಸ್ಯ ಕಣ್ಣು'
Image Credit : Asianet News

ಬಲ್ಬ್ ಹೋಲ್ಡರ್ ಒಳಗೆ 'ರಹಸ್ಯ ಕಣ್ಣು'

ಈ ಖತರ್ನಾಕ್ ಗ್ಯಾಂಗ್ ಅಧಿಕಾರಿಗಳ ಮನೆಯೊಳಗೆ ನುಗ್ಗಿ ಯಾರಿಗೂ ಅನುಮಾನ ಬಾರದಂತೆ ಶೌಚಾಲಯ ಮತ್ತು ಬೆಡ್‌ರೂಮ್‌ಗಳ ವಿದ್ಯುತ್ ಬಲ್ಬ್‌ನ ಹೋಲ್ಡರ್‌ಗಳಲ್ಲಿ ಅತ್ಯಾಧುನಿಕ ರಹಸ್ಯ ಕ್ಯಾಮರಾಗಳನ್ನು ಅಳವಡಿಸುತ್ತಿದ್ದರು. ಈ ಹಿಂದೆ ಓರ್ವ ಮಹಿಳಾ ಅಧಿಕಾರಿಯ ಖಾಸಗಿ ದೃಶ್ಯಗಳನ್ನು ಸೆರೆಹಿಡಿದು 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಈ ಕಿರಾತಕರು, ಈಗ ಮತ್ತೊಬ್ಬ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಯನ್ನೂ ಇದೇ ರೀತಿ ಬಲೆಗೆ ಕೆಡವಿರುವುದು ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ.

Related Articles

Related image1
ಮೂರನೇ ಬಾರಿ ಲಕ್ಕಿ, ಮೂರನೇ ಮದುವೆಯಲ್ಲೂ IAS ಅಫೀಸರ್ ಕೈಹಿಡಿದ IAS ಅಧಿಕಾರಿ ಅವಿ ಪ್ರಸಾದ್
Related image2
ರಾಸಲೀಲೆ ರಾಮಚಂದ್ರ ರಾವ್ ಸಸ್ಪೆಂಡ್ ಬೆನ್ನಲ್ಲೇ ಮತ್ತೊಬ್ಬ ಪೊಲೀಸ್ ಅಧಿಕಾರಿ ಅಮಾನತು; ಈ ಬಾರಿ ಕಾರಣವನ್ನೇ ತಿಳಿಸಿಲ್ಲ!
36
ಮೊಬೈಲ್‌ನಲ್ಲಿ ಸಿಕ್ಕಿತು ನೂರಾರು ವಿಡಿಯೋಗಳ ರಾಶಿ
Image Credit : Asianet News

ಮೊಬೈಲ್‌ನಲ್ಲಿ ಸಿಕ್ಕಿತು ನೂರಾರು ವಿಡಿಯೋಗಳ ರಾಶಿ

ಬಂಧಿತ ಆರೋಪಿಗಳಾದ ಸಮೀರ್ ಶೇಖ್, ಅಬ್ದುಲ್ ರಶೀದ್ ಮಕಾಂದಾರ್ ಹಾಗೂ ಮೊಹಮ್ಮದ್ ಬಾಳೇಕುಂದ್ರಿ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಮತ್ತೆ ಕಸ್ಟಡಿಗೆ ಪಡೆದಿದ್ದಾರೆ. ಮಾಳಮಾರುತಿ ಠಾಣೆಯ ಪೊಲೀಸರು ಆರೋಪಿಗಳ ಮೊಬೈಲ್ ಫೋನ್‌ಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿ ಡೇಟಾ ಮರುಪಡೆದಾಗ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಅದರಲ್ಲಿ ಬೇರೆ ಬೇರೆ ಸಮಯಗಳಲ್ಲಿ ಚಿತ್ರೀಕರಿಸಲಾದ 100ಕ್ಕೂ ಹೆಚ್ಚು ನಗ್ನ ವಿಡಿಯೋಗಳು ಪತ್ತೆಯಾಗಿವೆ. ಈ ವಿಡಿಯೋಗಳನ್ನು ಇಟ್ಟುಕೊಂಡು ಕಿರಾತಕರು ಅಧಿಕಾರಿಗಳಿಂದ ಲಕ್ಷ ಲಕ್ಷ ಹಣ ಪೀಕುತ್ತಿದ್ದರು.

46
ಬ್ಲ್ಯಾಕ್‌ಮೇಲ್‌ಗೆ ಹೆದರಿ ಲಕ್ಷಾಂತರ ಹಣ ಲೂಟಿ
Image Credit : Asianet News

ಬ್ಲ್ಯಾಕ್‌ಮೇಲ್‌ಗೆ ಹೆದರಿ ಲಕ್ಷಾಂತರ ಹಣ ಲೂಟಿ

ನಕಲಿ ಪತ್ರಕರ್ತರ ಈ ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಹೆದರಿದ ಹಿರಿಯ ಅಧಿಕಾರಿಯೊಬ್ಬರು ತಮ್ಮ ಮರ್ಯಾದೆ ಉಳಿಸಿಕೊಳ್ಳಲು ಆರೋಪಿಗಳು ಕೇಳಿದಷ್ಟು ಹಣ ನೀಡುತ್ತಾ ಬಂದಿದ್ದರು. 'ಹಣ ನೀಡದಿದ್ದರೆ ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತೇವೆ ಅಥವಾ ಮೇಲಧಿಕಾರಿಗಳಿಗೆ ಕಳುಹಿಸುತ್ತೇವೆ' ಎಂದು ಆರೋಪಿಗಳು ಬೆದರಿಕೆ ಹಾಕುತ್ತಿದ್ದರು. ಮಹಿಳಾ ಅಧಿಕಾರಿಯ ಪ್ರಕರಣ ಬೆಳಕಿಗೆ ಬರುವ ಮುನ್ನವೇ ಈ ಗ್ಯಾಂಗ್ ಮತ್ತೋರ್ವ ಅಧಿಕಾರಿಯನ್ನು ಕಾಡಿತ್ತು ಎಂಬುದು ಈಗ ಬಯಲಾಗಿದೆ.

56
ಪೊಲೀಸ್ ತನಿಖೆ ತೀವ್ರ
Image Credit : Asianet News

ಪೊಲೀಸ್ ತನಿಖೆ ತೀವ್ರ

ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಮತ್ತು ಡಿಸಿಪಿ ನಾರಾಯಣ ಭರಮನಿ ಅವರ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದೆ. ಸೋಕೋ (SOCO) ತಂಡವು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದು, ಈ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಯುತ್ತಿದೆ. ನಕಲಿ ಪತ್ರಕರ್ತರ ಸೋಗಿನಲ್ಲಿ ಅಧಿಕಾರಿಗಳ ಖಾಸಗಿ ಜೀವನಕ್ಕೆ ಕನ್ನ ಹಾಕುತ್ತಿದ್ದ ಈ ತಂಡದ ವಿರುದ್ಧ ಬೆಳಗಾವಿ ಜನರು ಮತ್ತು ಅಧಿಕಾರಿಗಳ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

66
ಸಾರ್ವಜನಿಕರಿಗೆ ಎಚ್ಚರಿಕೆ
Image Credit : Asianet News

ಸಾರ್ವಜನಿಕರಿಗೆ ಎಚ್ಚರಿಕೆ

ಈ ಘಟನೆ ಅಧಿಕಾರಿಗಳ ವಲಯದಲ್ಲಿ ಮಾತ್ರವಲ್ಲದೆ ಸಾರ್ವಜನಿಕರಲ್ಲೂ ಭೀತಿ ಹುಟ್ಟಿಸಿದೆ. ಅಪರಿಚಿತ ವ್ಯಕ್ತಿಗಳು ಅಥವಾ ಸೇವಾ ಸಿಬ್ಬಂದಿ ಮನೆಯೊಳಗೆ ಬಂದಾಗ ಎಚ್ಚರದಿಂದಿರಬೇಕು ಮತ್ತು ಇಲೆಕ್ಟ್ರಾನಿಕ್ ಉಪಕರಣಗಳಲ್ಲಿ ಅಸಹಜ ಬದಲಾವಣೆಗಳಿವೆಯೇ ಎಂದು ಪರಿಶೀಲಿಸುವುದು ಅಗತ್ಯ ಎಂದು ಪೊಲೀಸರು ಸಲಹೆ ನೀಡಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಬೆಳಗಾವಿ
ಸರ್ಕಾರಿ ಉದ್ಯೋಗ

Latest Videos
Recommended Stories
Recommended image1
₹5 ಲಕ್ಷ ಲಂಚದ ಸಮೇತ ಲೋಕಾಯುಕ್ತ ಬಲೆಗೆ ಬಿದ್ದ ಬಿಜೆಪಿ ಶಾಸಕ ಚಂದ್ರು ಲಮಾಣಿ: ಮನೆ, ಆಸ್ಪತ್ರೆ ಮೇಲೆ ಏಕಕಾಲಕ್ಕೆ ದಾಳಿ!
Recommended image2
ದೃಶ್ಯ ಸಿನಿಮಾ ಮೀರಿಸುವಂತೆ ಕಥೆ ಕಟ್ಟಿದ್ದ ಕಿರಾತಕ! ಹೆಂಡತಿಯನ್ನು ಬಡಿದು ಕೊಂ*ದ ಆಸಾಮಿ ಸಿಕ್ಕಿಬಿದ್ದಿದ್ದೇ ಇಂಟ್ರೆಸ್ಟಿಂಗ್ ಕಹಾನಿ!
Recommended image3
ಸ್ನೇಹಮಯಿ ಕೃಷ್ಣ ಸಿಸಿಬಿಯಿಂದ ರಿಲೀಸ್; ಸಿಎಸ್ ಶಾಲಿನಿ ರಜನೀಶ್‌ಗೆ ಕ್ಷಮೆ, ದಾರಿ ತಪ್ಪಿಸಿದ ವಿನೋದ್ ಹೆಸರು ರಿವೀಲ್!
Related Stories
Recommended image1
ಮೂರನೇ ಬಾರಿ ಲಕ್ಕಿ, ಮೂರನೇ ಮದುವೆಯಲ್ಲೂ IAS ಅಫೀಸರ್ ಕೈಹಿಡಿದ IAS ಅಧಿಕಾರಿ ಅವಿ ಪ್ರಸಾದ್
Recommended image2
ರಾಸಲೀಲೆ ರಾಮಚಂದ್ರ ರಾವ್ ಸಸ್ಪೆಂಡ್ ಬೆನ್ನಲ್ಲೇ ಮತ್ತೊಬ್ಬ ಪೊಲೀಸ್ ಅಧಿಕಾರಿ ಅಮಾನತು; ಈ ಬಾರಿ ಕಾರಣವನ್ನೇ ತಿಳಿಸಿಲ್ಲ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved