Asianet Suvarna News Asianet Suvarna News

'ಜೈಲಿಗೆ ಹೋಗಿ ಬಂದ್ರು ಡಿ.ಕೆ.ಶಿವಕುಮಾರ್‌ಗೆ ಬುದ್ಧಿ ಬಂದಿಲ್ಲ'

ಮಾಜಿ ಸಚಿವ ವಿನಯ ಕುಲ​ಕ​ರ್ಣಿ ಅವರನ್ನ ಬಿಜೆಪಿಗೆ ಕರೆ​ದು​ಕೊ​ಳ್ಳು​ವು​ದಿ​ಲ್ಲ| ಕೊರೋನಾ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತಿರುವುದರಿಂದ ಶಾಲೆ ಪ್ರಾರಂಭ ಮಾಡಲ್ಲ| ಕಾಂಗ್ರೆಸ್‌ ವಿಪಕ್ಷವಾಗಿರಲು ಅಯೋಗ್ಯ| ಪ್ರತಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಈಶ್ವರಪ್ಪ| 

Minister K S Eshwarappa Slams on D K Shivakumar grg
Author
Bengaluru, First Published Oct 9, 2020, 1:16 PM IST

ಕೊಪ್ಪಳ(ಅ.09): ರಾಜ್ಯದಲ್ಲಿ ಇನ್ನು ಮುಂದೆ ಯಾವುದೇ ಚುನಾವಣೆ ನಡೆಯಲಿ, ಅಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ. ಬೆಂಕಿ ಹಚ್ಚುವ ಕೆಲಸ ಮಾಡುವ ಕಾಂಗ್ರೆಸ್‌ ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವುದಕ್ಕೂ ಅಯೋಗ್ಯ ಎಂದು ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.

ನಗರದ ಶಿವಶಾಂತ ಮಂಗಲಭವನದಲ್ಲಿ, ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಚಾರ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಅಧಿಕಾರದಲ್ಲಿ ಇರುವಾಗ ಮುಸ್ಲಿಂರು, ಹಿಂದೂಗಳು ಸಹೋದರರಂತೆ ಬದುಕುತ್ತೇವೆ. ಆದರೆ, ಕಾಂಗ್ರೆಸ್‌ ಅಧಿಕಾರದಲ್ಲಿ ಇದ್ದಾಗ ಏನಾಗುತ್ತಿತ್ತು? ಪದೇ ಪದೆ ಗಲಾಟೆಯಾಗುತ್ತಿತ್ತು. ಕೋಮುಗಲಭೆ ಆಗುತ್ತಿದ್ದವು. ಆದರೆ, ಈಗ ಮಾತ್ರ ಎಲ್ಲಿಯೂ ಅಂಥ ಗಲಾಟೆಯಾಗುವುದೇ ಇಲ್ಲ ಎಂದರು.

ಡಿಜೆ ಹಳ್ಳಿಯಲ್ಲಿ ಕಾಂಗ್ರೆಸ್‌ ಮಾಡಿದ್ದು ಏನು? ಅಲ್ಲಿ ಶೇಕಡಾ 70ರಷ್ಟುಮುಸ್ಲಿಂರು ಇದ್ದಾರೆ. ಅಲ್ಲಿ ಕಾಂಗ್ರೆಸ್‌ನಿಂದ ಯಾರೇ ನಿಂತರೂ ಜಯ ಸಾಧಿಸುತ್ತಾರೆ. ಜೆಡಿಎಸ್‌ ಪಕ್ಷದಿಂದ ಬಂದಿದ್ದ ಅಖಂಡ ಶ್ರೀನಿವಾಸ ಮೂರ್ತಿ ಗೆಲವು ಸಾಧಿಸಿದರು. ಕಾಂಗ್ರೆಸ್‌ನಲ್ಲಿಯೇ ಗುಂಪು ಜಗಳ ನಡೆಯಿತು. ತಮ್ಮಲ್ಲಿ ಭಿನ್ನಾಭಿಪ್ರಾಯಕ್ಕೆ ಡಿಜೆ ಹಳ್ಳಿ ಧ್ವಂಸ ಮಾಡಿದರು. ಅಲ್ಲಿ ಕೇವಲ ನವೀನ್‌ ಎನ್ನುವ​ವ​ರು ಹಾಕಿದ ಪೋಸ್ಟ್‌ನಿಂದ ಅಷ್ಟು ಗಲಾಟೆಯಾಯಿತೇ? ಖಂಡಿತ ಇಲ್ಲ. ಕೇವಲ 1 ಗಂಟೆಯಲ್ಲಿ 40 ಸಾವಿರ ಜನರು ಸೇರಿದ್ದಾದರೂ ಹೇಗೆ? ಇದರ ಹಿಂದೆ ದೊಡ್ಡ ಕುತಂತ್ರ ಇದೆ. ಅಲ್ಲಿ ಘಟನೆಗೂ ಉಗ್ರಗಾಮಿ ನಂಟಿದೆ. ಒಂದು ಪೂರ್ವನಿಯೋಜಿತ ಕೃತ್ಯ ಇದಾಗಿದ್ದು, ಇದನ್ನು ಸರಿಯಾಗಿ ತನಿಖೆ ಮಾಡಿಸಿದರೆ ಎಲ್ಲರೂ ಗೊತ್ತಾಗುತ್ತದೆ ಎಂದರು.

ಕೊಪ್ಪಳ: ಕರ್ನಾಟಕ ಗ್ರಾಮೀಣ ಬ್ಯಾಂಕ್‌ ದರೋಡೆ, ಇಬ್ಬರು ಆರೋಪಿಗಳ ಬಂಧನ

ಡಿಕೆಶಿ ಮನೆ ಮೇಲೆ ದಾಳಿ ನಡೆದಿದ್ದನ್ನೇ ಮುಂದಿಟ್ಟುಕೊಂಡು ಉಪ ಚುನಾವಣೆ ಎದುರಿಸುತ್ತೇವೆ ಎಂದು ಕಾಂಗ್ರೆ​ಸ್‌​ನ​ವರು ಹೇಳು​ತ್ತಾ​ರೆ. ಚುನಾವಣೆ ಇರುವುದಕ್ಕಾಗಿಯೇ ಸಿಬಿಐ ದಾಳಿ ಮಾಡಿಸಲಾಗಿದೆ ಎನ್ನಲಾಗುತ್ತಿದೆ. ಆದರೆ, ಈ ಹಿಂದೆ ನಡೆದ ಅಷ್ಟುಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತಲ್ಲ, ಅವಾಗ ಯಾವ ದಾಳಿ ಮಾಡಿಸಲಾಗಿತ್ತು ಎಂದು ನಾನು ಪ್ರಶ್ನೆ ಮಾಡುತ್ತೇನೆ.

ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇನೆ ಎಂದು ಅಖಾಡಕ್ಕೆ ಇಳಿದಿದ್ದ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲಲು ಆಗಲಿಲ್ಲ. ಇವರು ಈಗ ಬಂದಿರುವ ಉಪ ಚುನಾವಣೆ ಇನ್ನೇನು ಗೆಲ್ಲುತ್ತಾರೆ ಎಂದು ಪ್ರಶ್ನೆ ಮಾಡಿದರು.
ರಾಜ್ಯ ಪ್ರಧಾನಕಾರ್ಯದರ್ಶಿ ಅಶ್ವತ್ಥ ನಾರಾಯಣ್‌, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ, ಸಂಸದ ಸಂಗಣ್ಣ ಕರಡಿ, ಶಾಸಕ ಹಾಲಪ್ಪ ಆಚಾರ್‌, ಪರಣ್ಣ ಮುನವಳ್ಳಿ, ಈಶಾನ್ಯ ಶಿಕ್ಷಕರ ಮತ ಕ್ಷೇತ್ರದ ಅಭ್ಯರ್ಥಿ ಶಶಿಲ್‌ ನಮೋಶಿ ಅವರು ಮಾತನಾಡಿದರು.

ರಾಜ್ಯ ಕಾರ್ಯದರ್ಶಿ ಹೇಮಲತಾ ನಾಯಕ್‌, ನೇಮಿರಾಜ್‌ ನಾಯಕ್‌, ಈಶಪ್ಪ ಹಿರೇಮನಿ, ಅಮರೇಶ ಕರಡಿ, ವಿರೂಪಾಕ್ಷಪ್ಪ ಸಿಂಗನಾಳ, ಸಿ.ವಿ. ಚಂದ್ರಶೇಖರ, ಮಹಾಂತೇಶ ಪಾಟಿಲ್‌ ಇದ್ದರು.

ಗಂಗಾವತಿ: ಸ್ವಾತಂತ್ರ್ಯ ಹೋರಾಟಗಾರ ರಾಮಾಚಾರ ಇನ್ನಿಲ್ಲ

ಜೈಲಿಗೆ ಹೋಗಿ ಬಂದ್ರು ಡಿಕೆಶಿಗೆ ಬುದ್ಧಿ ಬಂದಿಲ್ಲ: ಈಶ್ವರಪ್ಪ

ಈಗಾಗಲೇ ಹವಾಲಾ, ಅಕ್ರಮ ಆಸ್ತಿಯ ಸಂಬಂಧ ಜೈಲಿಗೆ ಹೋಗಿ ಬಂದರೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರಿಗೆ ಬುದ್ಧಿ ಬಂದಿಲ್ಲ ಎಂದು ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.
ಕೊಪ್ಪಳದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಬಗ್ಗಲ್ಲ ಎಂದು ಹೇಳಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ, ಡಿಕೆಶಿಯನ್ನು ನಾವ್ಯಾಕೆ ಬಗ್ಗಿಸುತ್ತೇವೆ, ಬಿಜೆಪಿ ಬಗ್ಗಿಸುವ ಪ್ರಶ್ನೆಯೇ ಇಲ್ಲ. ಅದೇನಿದ್ದರೂ ಸಿಬಿಐ ಬಗ್ಗಿಸುತ್ತಿದೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.

ರಾಜ್ಯದಲ್ಲಿ ಶಾಲೆಯನ್ನು ಪ್ರಾರಂಭಿಸಲಾಗುತ್ತದೆ ಎಂದು ಯಾರು ಹೇಳಿದ್ದಾರೆ? ಇಲ್ಲ ಇಲ್ಲ, ಶಾಲೆಯನ್ನು ಈಗಿನ ಸ್ಥಿತಿಯಲ್ಲಂತೂ ಪ್ರಾರಂಭಿಸುವುದಿಲ್ಲ. ಕೊರೋನಾ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತಿರುವುದರಿಂದ ಶಾಲೆ ಪ್ರಾರಂಭ ಮಾಡಲ್ಲ ಎಂದರು. ಬಿಜೆಪಿ ಈಗ ಗೆಲ್ಲುವ ಪಕ್ಷವಾಗಿ ಬಿಟ್ಟಿದೆ. ಹೀಗಾಗಿ, ಇಲ್ಲಿ ಸಹಜವಾಗಿಯೇ ಪೈಪೋಟಿ ಇದ್ದೇ ಇರುತ್ತದೆ. ಇದರಿಂದ ಈಗ ಟಿಕೆಟ್‌ ಘೋಷಣೆ ವಿಳಂಬವಾಗಿದೆ ಎಂದರು.

ವಿನಯ ಕುಲಕರ್ಣಿ ಇಲ್ಲ

ಈಗ ಸಿಬಿಐ ಎದುರಿಸುತ್ತಿರುವ ಮಾಜಿ ಸಚಿವ ಕುಲಕರ್ಣಿ ಅವರನ್ನು ಯಾವುದೇ ಕಾರಣಕ್ಕೂ ಬಿಜೆಪಿಗೆ ಕರೆದುಕೊಳ್ಳುವುದಿಲ್ಲ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಸ್ಪಷ್ಟವಾಗಿ ಹೇಳಿದರು. ಅವರನ್ನು ಕರೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಈಗ ಆರೋಪಿ ಸಹ ಆಗಿದ್ದಾರೆ. ಅಲ್ಲದೆ ಸಿಬಿಐ ಎದುರಿಸುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ ಅವರು ಬಿಜೆಪಿ ಕರೆದುಕೊಳ್ಳುತ್ತಾರೆ ಎನ್ನುವುದು ಶುದ್ಧಸುಳ್ಳು. ಪ್ರಕರಣವನ್ನು ಎದುರಿಸುವುದಕ್ಕಾಗಿ ಬಿಜೆಪಿಗೆ ಸೇರುತ್ತಾರೆ ಎನ್ನುವ ಸುದ್ದಿ ಇರಬಹುದು. ಆದರೆ, ಅದು ಸದ್ಯಕ್ಕಂತೂ ಸಾಧ್ಯವೇ ಇಲ್ಲ ಎಂದರು. ಹಾಗೊಂದು ವೇಳೆ ಅವರು, ಸಿಬಿಐಯಲ್ಲಿ ಖುಲಾ​ಸೆಯಾಗಿ ಬಂದು, ಆರೋಪಗಳಿಂದ ಮುಕ್ತವಾದರೆ ಆಗ ಅವರು ಬರುವುದಾದರೆ ನೋಡಬಹುದು. ಆದರೆ, ಈಗ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ಕಡ್ಡಿತುಂಡು ಮಾಡಿದಂತೆ ಹೇಳಿದರು.

ಅತೀರೇಕದ ಪರಮಾವಧಿ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವ​ರು ಮಾತನಾಡಲು ಹೋದಾಗ ಆತನ ಮೇಲೆ ಹಲ್ಲೆ ಮಾಡುವ ಯತ್ನ ಮಾಡಲಾಗಿದೆ. ಬಾಂಬ್‌ ಹಾಕಲು ಷಡ್ಯಂತ್ರ ನಡೆಸಿದ್ದಾರೆ. ಅಲ್ಲಿ ಮಾತನಾಡುವುದಕ್ಕೆ ಬಿಡುತ್ತಿಲ್ಲವಂತೆ. ಇದು ಅತಿರೇಕದ ಪರಮಾವಧಿಯಾಗಿದೆ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಕಿಡಿಕಾ​ರಿದ್ದಾರೆ.

ಇಂಥ ಬೆದರಿಕೆಗೆ ಬಿಜೆಪಿ ಹೆದರುವುದಿಲ್ಲ. ಬಿಜೆಪಿ ಅಧಿಕಾರದಲ್ಲಿ ಇಲ್ಲದ ಕೆಲವೊಂದು ರಾಜ್ಯದಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ಮೇಲೆ ದಬ್ಬಾಳಿಕೆ, ದೌರ್ಜನ್ಯ ಮಾಡುತ್ತಿದ್ದಾರೆ. ಆದರೆ, ಇದರಿಂದ ಬಿಜೆಪಿ ಅಲ್ಲಿ ವೇಗವಾಗಿ ಬೆಳೆಯುತ್ತದೆ ಎಂದರು.
 

Follow Us:
Download App:
  • android
  • ios