Asianet Suvarna News Asianet Suvarna News

ಕೊಪ್ಪಳ: ಕರ್ನಾಟಕ ಗ್ರಾಮೀಣ ಬ್ಯಾಂಕ್‌ ದರೋಡೆ, ಇಬ್ಬರು ಆರೋಪಿಗಳ ಬಂಧನ

10 ಆರೋಪಿಗಳ ಪೈಕಿ ಇಬ್ಬರನ್ನು ಬಂಧನ, 13.81 ಲಕ್ಷ ರುಪಾಯಿ ಮೌಲ್ಯದ ನಗದು, ಚಿನ್ನಾಭರಣ ವಶ| ಸೆ.24 ರಂದು ಬ್ಯಾಂಕ್‌ ದರೋಡೆ ಮಾಡಿದ್ದ ಖದೀಮರು| ನಾಪತ್ತೆಯಾಗಿರುವ ಇನ್ನುಳಿದ 8 ಆರೋಪಿಗಳ ಬಂಧನಕ್ಕಾಗಿ ಜಾಲ ಬೀಸಿದ ಪೊಲೀಸರು|
 
 

Two Accused Arrest on Karnataka Grameena Bank Robbery Case in Koppal grg
Author
Bengaluru, First Published Oct 9, 2020, 12:53 PM IST
  • Facebook
  • Twitter
  • Whatsapp

ಕೊಪ್ಪಳ(ಅ.09): ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದ ಪೊಲೀಸ್‌ ಠಾಣೆಯ ಕೂಗಳತೆಯಲ್ಲಿದ್ದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ದರೋಡೆ ಪ್ರಕರಣವನ್ನು ಕೊಪ್ಪಳ ಪೊಲೀಸರು ಭೇದಿಸಿದ್ದಾರೆ. 10 ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಿದ್ದು, 13.81 ಲಕ್ಷ ರುಪಾಯಿ ಮೌಲ್ಯದ ನಗದು, ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಕಳೆದ ಸೆ.24 ರಂದು ಬೆಳಗಿನಜಾವ ಬ್ಯಾಂಕನ್ನು ದರೋಡೆ ಮಾಡಲಾಗಿತ್ತು.

ಪೊಲೀಸ್‌ ವರಿಷ್ಠಾಧಿಕಾರಿ ಜಿ.ಸಂಗೀತ ಅವರು ಗುರುವಾರು ಸುದ್ದಿಗೋಷ್ಠಿಯಲ್ಲಿ ಘಟನೆಯನ್ನು ವಿವರಿಸಿ, ತಮ್ಮ ಸಿಬ್ಬಂದಿ ಮತ್ತು ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಕೊಂಡಾಡಿದರು. ಆರೋಪಿಗಳಾದ ಪ್ರಶಾಂತ ಗೋಟು, ಹರಿದಾಶ ಹರ್ಷರಾಜ ಎನ್ನುವವರನ್ನು ಮಹಾರಾಷ್ಟ್ರದಲ್ಲಿ ಬಂಧಿಸಿ ಜೈಲಿಗೆ ಅಟ್ಟಲಾಗಿದೆ. ಆರೋಪಿಗಳನ್ನು ಇನ್ನಷ್ಟುವಿಚಾರಣೆಗೆ ಒಳಪಡಿಸಬೇಕಾಗಿತ್ತಾದರೂ ತಪ್ಪಿಸಿಕೊಳ್ಳುವ ಹುನ್ನಾರ ನಡೆಸಿದ್ದರಿಂದ ತಕ್ಷಣ ಅವರನ್ನು ನ್ಯಾಯಾಧೀಶರ ಮುಂದೆ ಹಾಜರು ಮಾಡಿ, ಜೈಲಿಗೆ ಕಳುಹಿಸಲಾಯಿತು ಎಂದರು.

ಕೊಪ್ಪ​ಳ​ದಲ್ಲಿ ಬ್ಯಾಂಕ್‌ಗೆ ಕನ್ನ: ಖದೀಮರಿಂದ 1.46 ಕೋಟಿ ಲೂಟಿ

ಆರೋಪಿತರಿಂದ 13.16 ಲಕ್ಷ ಮೌಲ್ಯದ 370 ಗ್ರಾಮ ಬಂಗಾರದ ಆಭರಣ ಹಾಗೂ 65000 ನಗದು ವಶಪಡಿಸಿಕೊಳ್ಳಲಾಗಿದೆ. ಉಳಿದ ಹಣ ನಾಪತ್ತೆಯಾಗಿರುವ ಇನ್ನುಳಿದ 8 ಆರೋಪಿಗಳ ಬಳಿ ಇದ್ದು ಅವರ ಬಂಧನಕ್ಕಾಗಿ ಜಾಲ ಬೀಸಲಾಗಿದೆ ಎಂದರು.

ಗ್ಯಾಸ್‌ ಕಟರ್ಸ್‌ ಬಳಸಿ ಬ್ಯಾಂಕಿನ ಶಟರ್ಸ್‌ ಮುರಿದಿದ್ದ ದರೋಡೆಕೋರರು ಅಲ್ಲಿನ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ ಸಿಸಿ ಕ್ಯಾಮೆರಾ ಒಯ್ದಿದ್ದರು. 3761 ಗ್ರಾಮ್‌ ಚಿನ್ನಾಭರಣ ಮತ್ತು 2175572 ರು. ನಗದು ಸಹ ದೋಚಿದ್ದರು.
 

Follow Us:
Download App:
  • android
  • ios