Asianet Suvarna News Asianet Suvarna News

ಗಂಗಾವತಿ: ಸ್ವಾತಂತ್ರ್ಯ ಹೋರಾಟಗಾರ ರಾಮಾಚಾರ ಇನ್ನಿಲ್ಲ

ಸ್ವಾತಂತ್ರ್ಯ ಹೋರಾಟಗಾರ, ನ್ಯಾಯವಾದಿ ರಾಮಾಚಾರ ಅಯೋಧ್ಯೆ ನಿಧನ| ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಇಹಲೋಕ ತ್ಯಜಿಸಿದ ರಾಮಾಚಾರ ಅಯೋಧ್ಯೆ| ರಾಮಾಚಾರ ಅಯೋಧ್ಯೆ ನಿಧನಕ್ಕೆ ಗಣ್ಯರ ಸಂತಾಪ| 

Freedom Fighter Ramachar Ayodhye Passes Away in Gangavati in Koppal District grg
Author
Bengaluru, First Published Oct 9, 2020, 10:05 AM IST

ಗಂಗಾವತಿ(ಅ.09): ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ನ್ಯಾಯವಾದಿ ರಾಮಾಚಾರ ಅಯೋಧ್ಯೆ (87)ನಿನ್ನೆ(ಗುರುವಾರ) ಬೆಳಗ್ಗೆ ನಿಧನರಾಗಿದ್ದಾರೆ. ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಗಳು ​ಇದ್ದಾರೆ. 1948ರಲ್ಲಿ ನಿಜಾಮರ ವಿರುದ್ಧ ನಡೆದ ಹೋರಾಟದಲ್ಲಿ ಇವರ ಸೇವೆ ಅವಿಸ್ಮರಣೀಯವಾಗಿತ್ತು.

ರಾಮಾಚಾರ ಅಯೋಧ್ಯೆ ಕನ್ನಡ ಸಂಘವನ್ನು ಕಟ್ಟಿ ಕನ್ನಡ ಭಾಷೆ ಮತ್ತು ಕನ್ನಡ ಪರ ಚಳವಳಿಗಾರರಾಗಿದ್ದರು. ಪ್ರತಿ ವರ್ಷ ನಗರದಲ್ಲಿ ನಡೆಯುತ್ತಿರುವ ಹೈದರಾಬಾದ್‌ ಕರ್ನಾಟಕ ವಿಮೋಚನೆ ದಿನಾಚರಣೆ ಸಂದರ್ಭದಲ್ಲಿ ತಾಲೂಕು ಆಡಳಿತದಿಂದ ಅವ​ರ​ನ್ನು ಸನ್ಮಾನಿಸಲಾಗುತ್ತಿತ್ತು.

Freedom Fighter Ramachar Ayodhye Passes Away in Gangavati in Koppal District grg

ಕಾಂಗ್ರೆಸ್ ಮಾಜಿ ಸಚಿವ ಬಿಜೆಪಿ ಸೇರ್ತಾರಾ?

ಸಂತಾಪ:

ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಶಿವರಾಮಗೌಡ, ನಗರಸಭೆ ಮಾಜಿ ಅಧ್ಯಕ್ಷ ಶ್ಯಾಮೀದ್‌ ಮಣಿಯಾರ, ಬಿಜೆಪಿ ಮುಖಂಡ ತಿಪ್ಪೇರುದ್ರಸ್ವಾಮಿ, ಸೈಯದ್‌ ಅಲಿ, ಕೆ. ಚೆನ್ನಬಸಯ್ಯಸ್ವಾಮಿ, ಸಿರಿಗೇರಿ ಪಂಪಣ್ಣ, ಜಿ. ಸಿದ್ದಪ್ಪ , ನವಲಿ ಗುರುರಾಜ್‌ ರಾವ್‌, ಕೆ. ನಿಂಗಜ್ಜ, ಮಾಜಿ ಸಂಸದ ಎಚ್.ಜಿ.ರಾಮೂಲು,ಮಾಜಿ ಸಚಿವ ಇಕ್ಬಾಲ್ ಅನ್ಸಾರಿ. ಮಾಜಿ ಎಂಲ್ಸಿ ಎಚ್.ಆರ್.ಶ್ರೀನಾಥ್, ಕೊಪ್ಪಳ ಜಿಲ್ಲಾ ಕನ್ನಡ  ಸಾಹಿತ್ಯ ಪರಿಷತ್ತು  ಜಿಲ್ಲಾ ಪ್ರತಿನಿಧಿ ರಾಮಮೂರ್ತಿ ನವಲಿ ಅವರು ಸಂತಾಪ ವ್ಯಕ್ತಪಡಿಸಿದರು. 

ಇದೇ ಸಂದರ್ಭದಲ್ಲಿ ತಹಸೀಲ್ದಾರ್‌ ರೇಣುಕಾ ಅವರು ಮೃತರ ನಿವಾಸಕ್ಕೆ ತೆರಳಿ ತಾಲೂಕು ಆಡಳಿತದಿಂದ ಗೌರವ ಸಲ್ಲಿಸಿದರು. ಕಂದಾಯ ಅಧಿಕಾರಿ ಮಂಜುನಾಥ ಸ್ವಾಮಿ ಸಂತಾಪ ಸೂಚಿಸಿದ್ದಾರೆ. 
 

Follow Us:
Download App:
  • android
  • ios