ಮರಳು ನೀತಿ ವಿಚಾರದಲ್ಲಿ ಸರ್ಕಾರ ದಿಟ್ಟ ಹೆಜ್ಜೆ: ಸಚಿವ ಮಾಧುಸ್ವಾಮಿ

ಸಣ್ಣ ನೀರಾವರಿ ಇಲಾಖೆ ಮಾತಿನಲ್ಲಿ ಸಣ್ಣದು, ಕೃತಿಯಲ್ಲಿ ದೊಡ್ಡದು ಮತ್ತು ಮಹತ್ವದ್ದಾಗಿದೆ. ಎತ್ತಿನಹೊಳೆ ಜಾರಿಯಾದಲ್ಲಿ ನಾವು ಫಲಾನುಭವಿಗಳಾಗಿದ್ದು, ಹಾಗಾಗಿ ಈ ಜಿಲ್ಲೆಯ ಋುಣ ನಮ್ಮ ಮೇಲಿದೆ: ಸಚಿವ ಜೆ.ಸಿ. ಮಾಧುಸ್ವಾಮಿ 

Minister JC Madhuswamy Talks Over Sand Policy grg

ಬಂಟ್ವಾಳ(ನ.19): ಕಳೆದ ನಾಲ್ಕು ವರ್ಷದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ 262 ಕೋ.ರೂ.ಅನುದಾನ ಒದಗಿಸಲಾಗಿದ್ದು, ಕರಾವಳಿಯ ಪ್ರಮುಖ ಸಮಸ್ಯೆಗಳಾದ ಡೀಮ್‌್ಡ ಅರಣ್ಯ, ಇ-ಸೊತ್ತು, ಕುಮ್ಕಿ, ಮರಳು ನೀತಿ ಸುಧಾರಣೆಯ ವಿಚಾರದಲ್ಲಿಯೂ ಬಿಜೆಪಿ ಸರ್ಕಾರ ದಿಟ್ಟಹೆಜ್ಜೆ ಇರಿಸಿದೆ ಎಂದು ಕಾನೂನು, ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಇಲಾಖಾ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.

ಜಿಲ್ಲೆಯ ಜೀವನದಿ ನೇತ್ರಾವತಿ ನದಿಗೆ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಸುಮಾರು 135 ಕೋಟಿ ರು. ವೆಚ್ಚದಲ್ಲಿ ಬಂಟ್ವಾಳಕ್ಕೆ ಸಮೀಪದ ಜಕ್ರಿಬೆಟ್ಟುವಿನಿಂದ ನರಿಕೊಂಬು ಗ್ರಾಮವನ್ನು ಸಂಪರ್ಕ ಬೆಸೆಯುವ ನಿಟ್ಟಿನಲ್ಲಿ ಅಣೆಕಟ್ಟು ಜತೆಗೆ ಸೇತುವೆ ನಿರ್ಮಾಣ ಕಾಮಗಾರಿಗೆ ಶುಕ್ತವಾರ ನೇತ್ರಾವತಿ ನದಿ ಕಿನಾರೆಯಲ್ಲಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

Dharmasthala Laksha Deepotsava: ಸಮೀಪದಲ್ಲಿರೋ ಸುಂದರ ತಾಣಗಳಿಗೂ ವಿಸಿಟ್ ಮಾಡಿ

ಸಣ್ಣ ನೀರಾವರಿ ಇಲಾಖೆ ಮಾತಿನಲ್ಲಿ ಸಣ್ಣದು, ಕೃತಿಯಲ್ಲಿ ದೊಡ್ಡದು ಮತ್ತು ಮಹತ್ವದ್ದಾಗಿದೆ. ಎತ್ತಿನಹೊಳೆ ಜಾರಿಯಾದಲ್ಲಿ ನಾವು ಫಲಾನುಭವಿಗಳಾಗಿದ್ದು, ಹಾಗಾಗಿ ಈ ಜಿಲ್ಲೆಯ ಋುಣ ನಮ್ಮ ಮೇಲಿದೆ. ಅವಿಭಜಿತ ದ.ಕ. ಜಿಲ್ಲೆಯ ಅಂರ್ತಜಲ ವೃದ್ಧಿಗೆ ಸರ್ಕಾರ 3975 ಸಾವಿರ ಕೋಟಿ ರು. ಮೀಸಲಿಟ್ಟು, ಪ್ರತಿ ವರ್ಷ 500 ಕೋಟಿ ರು.ವನ್ನು ಬಿಡುಗಡೆಗೊಳಿಸಲಾಗುತ್ತದೆ. ಕಳೆದ ಬಾರಿಯಂತೆ ಈ ವರ್ಷವೂ ಬಜೆಟ್‌ನಲ್ಲಿ ಮೀಸಲಿರಿಸಿ ಮಂಜೂರುಗೊಳಿಸಿದೆ ಎಂದರು.
ಅಂತರ್ಜಲ ವೃದ್ಧಿಯ ಜೊತೆಗೆ ಕೃಷಿ ಚಟುವಟಿಕೆ ಮತ್ತು ಕುಡಿಯುವ ನೀರಿಗೆ ಡ್ಯಾಂ ಸಹಾಯಕ ವಾಗಲಿದೆ ಎಂದ ಸಚಿವರು, ಸಮುದ್ರಕ್ಕೆ ಹರಿದು ಹೋಗುವ ವ್ಯರ್ಥ ನೀರನ್ನು ಸಂಗ್ರಹಿಸಿ ಬಳಸುವ ನಿಟ್ಟಿನಲ್ಲಿ ಯೋಜನೆ ರೂಪಿಸುವ ಯೋಜನೆಗೆ ಪ್ರಾಥಮಿಕ ತಯಾರಿಗಳು ನಡೆಯುತ್ತಿದೆ ಎಂದರು.

ಋುಣ ತೀರಿಸಲು ಸಾಧ್ಯವಿಲ್ಲ:

ನಮ್ಮ ಪಕ್ಷಕ್ಕೆ ದ.ಕ.ಮತ್ತು ಉಡುಪಿ ಜಿಲ್ಲೆ ಜನತೆ ಶಕ್ತಿ ತುಂಬಿದ್ದಾರೆ ಮತ್ತು ಆಶೀರ್ವಾದ ನೀಡುತ್ತಿದ್ದಾರೆ. ಇಲ್ಲಿಗೆ ಎಷ್ಟುಯೋಜನೆ ಕೊಟ್ಟರೂ, ಋುಣ ತೀರಿಸಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ಮೊದಲ ಆದ್ಯತೆ ದ.ಕ.ಜಿಲ್ಲೆಗೆ ಎಂದು ಮಾಧುಸ್ವಾಮಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್‌ ನಾಯ್‌್ಕ ಮಾತನಾಡಿ, ಎತ್ತಿನ ಹೊಳೆ ವಿರುದ್ಧದ ಹೋರಾಟದ ಫಲವೇ ಪಶ್ಚಿಮ ವಾಹಿನಿ ಯೋಜನೆಯಾಗಿದ್ದು, ಜಿಲ್ಲೆಯ ನೀರಿನ ಹಾಹಾಕಾರ ತಡೆಯುವ ಕೆಲಸ ಎಂದೋ ಆಗಬೇಕಿತ್ತು, ಆದರೆ ಈಗ ಕಾಲ ಕೂಡಿ ಬಂದಿದೆ. ಈ ಡ್ಯಾಂ ನಿರ್ಮಾಣದಿಂದ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಮುಕ್ತಿ ಸಿಗಲಿದೆ ಎಂದರು.

ರಸ್ತೆ ಬದಿ ನಿಂತಿದ್ದ ಬಾಲಕಿಯ ಎತ್ತಿ ಕುಕ್ಕಿದ ದುರುಳ: ವಿಡಿಯೋ ವೈರಲ್ ಆರೋಪಿ ಅಂದರ್

ತುಂಬೆ ವೆಂಟೆಡ್‌ ಡ್ಯಾಂನಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಕುಡಿಯುವ ನೀರಿನ ಕೊರತೆಯಾದಲ್ಲಿ ಈ ಡ್ಯಾಂನಿಂದ ನೀರು ಪೂರೈಸುವ ಸಾಮರ್ಥ್ಯ ಹೊಂದಲಿದೆ ಎಂದರು.

ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್‌ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿದರು. ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಗೋಕುಲ್‌ದಾಸ್‌ ಸೇತುವೆ ಹಾಗೂ ಅಣೆಕಟ್ಟು ಯೋಜನೆಯ ಮಾಹಿತಿ ನೀಡಿದರು.

ಇಲಾಖಾ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ತಹಸೀಲ್ದಾರ್‌ ಡಾ.ಸ್ಮಿತಾ ರಾಮು, ಸುಲೋಚನಾ ಜಿ.ಕೆ.ಭಟ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ವಿಷ್ಣು ಕಾಮತ್‌, ನರಿಕೊಂಬು ಗ್ರಾ.ಪಂ.ಅಧ್ಯಕ್ಷೆ ವಿನುತಾ ಪುರುಷೋತ್ತಮ್‌, ಗುತ್ತಿಗೆದಾರ ರಾಜೇಂದ್ರ ಕಾರಂತ್‌ ಹಾಜರಿದ್ದರು. ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ್‌ ಶೆಟ್ಟಿ ಸ್ವಾಗತಿಸಿದರು.ದಿನೇಶ್‌ ಸುವರ್ಣ ರಾಯಿ ನಿರೂಪಿಸಿದರು.
 

Latest Videos
Follow Us:
Download App:
  • android
  • ios