ರಸ್ತೆ ಬದಿ ನಿಂತಿದ್ದ ಬಾಲಕಿಯ ಎತ್ತಿ ಕುಕ್ಕಿದ ದುರುಳ: ವಿಡಿಯೋ ವೈರಲ್ ಆರೋಪಿ ಅಂದರ್

ರಸ್ತೆ ಬದಿ ತನ್ನ ಚಿಕ್ಕಪ್ಪನ ಬರುವಿಕೆಗಾಗಿ ಕಾಯುತ್ತಾ ನಿಂತಿದ್ದ ಪುಟ್ಟ ಬಾಲಕಿಯೊರ್ವಳನ್ನು ಅಲ್ಲೇ ಇದ್ದ ದುರುಳನೋರ್ವ ಕುತ್ತಿಗೆಯಲ್ಲಿ ಹಿಡಿದು ಮೇಲೆತ್ತಿ ಕೆಳಗೆಸೆದ ಘಟನೆ ನಡೆದಿದ್ದು, ಇದರಿಂದ ಬಾಲಕಿ ಅಕ್ಷರಶಃ ಶಾಕ್‌ಗೆ ಒಳಗಾಗಿದ್ದಾಳೆ.

Kasaragod horrifying incident in Manjeshwara, man lifting a minor and flinging her into road, watch cctv footage akb

ರಸ್ತೆ ಬದಿ ತನ್ನ ಚಿಕ್ಕಪ್ಪನ ಬರುವಿಕೆಗಾಗಿ ಕಾಯುತ್ತಾ ನಿಂತಿದ್ದ ಪುಟ್ಟ ಬಾಲಕಿಯೊರ್ವಳನ್ನು ಅಲ್ಲೇ ಇದ್ದ ದುರುಳನೋರ್ವ ಕುತ್ತಿಗೆಯಲ್ಲಿ ಹಿಡಿದು ಮೇಲೆತ್ತಿ ಕೆಳಗೆಸೆದ ಘಟನೆ ನಡೆದಿದ್ದು, ಇದರಿಂದ ಬಾಲಕಿ ಅಕ್ಷರಶಃ ಶಾಕ್‌ಗೆ ಒಳಗಾಗಿದ್ದಾಳೆ. ಕೇರಳದ ಕಾಸರಗೊಡು ಜಿಲ್ಲೆಯ ಮಂಜೇಶ್ವರದಲ್ಲಿ (Manjeshwar) ಈ ಘಟನೆ ನಡೆದಿದ್ದು ಈ ಆಘಾತಕಾರಿ ದೃಶ್ಯ ಅಲ್ಲೇ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಘಟನೆಗೆ ಸಂಬಂಧಿಸಿದಂತೆ 31 ವರ್ಷ ಅಬ್ಬುಬಕ್ಕರ್ ಸಿದ್ಧಿಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಇಂದು ಮುಂಜಾನೆ  8 ವರ್ಷದ ಬಾಲಕಿ ಮದರಸಾಕ್ಕೆ ತೆರಳಿ ಶಾಲೆ ಬಿಟ್ಟ ನಂತರ ಕರೆದುಕೊಂಡು ಹೋಗಲು ಬರುವ ತನ್ನ ಚಿಕ್ಕಪ್ಪನಿಗಾಗಿ ಮದರಸಾದ ಮುಂದೆ ಕಾಯುತ್ತ ನಿಂತಿದ್ದಾಗ ಈ ಘಟನೆ ನಡೆದಿದೆ. ಹಿಜಾಬ್ (Hijab) ಧರಿಸಿರುವ ಪುಟ್ಟ ಬಾಲಕಿ ಕಾಯುತ್ತಾ ನಿಂತಿದ್ದು, ಈ ವೇಳೆ ಸೀದಾ ಬಾಲಕಿಯತ್ತ ಬಂದ ದುರುಳನೋರ್ವ ಬಾಲಕಿಯನ್ನು ಎರಡು ಕೈಯಲ್ಲಿ ಗಬ್ಬಕ್ಕನೆ ಹಿಡಿದು ಮೇಲೆತ್ತಿ ಕಸ ಎಸೆಯುವಂತೆ ದೂರ ಎಸೆದಿದ್ದಾನೆ.  ನಂತರ ಅಲ್ಲಿಂದ ಹೊರಟು ಹೋಗಿದ್ದಾನೆ. ಆದರೆ ಅದೃಷ್ಟವಶಾತ್ ಬಾಲಕಿಗೆ ದೈಹಿಕವಾಗಿ ದೊಡ್ಡ ಹಾನಿಯಾಗಿಲ್ಲ. ಕೂಡಲೇ ಮೇಲೆಳುವ ಆಕೆ ತನ್ನ ಕೈಯಿಂದ ಬಿದ್ದ ಪುಸ್ತಕದ ತುಣಕನ್ನು ಮೇಲೆತ್ತಿಕೊಂಡು ಅಲ್ಲೇ ಗಾಬರಿಯಾಗಿ ನಿಂತಿದ್ದಾಳೆ. 

ಘಟನೆಯಿಂದ ಮಾನಸಿಕ ಆಘಾತಕ್ಕೊಳಗಾದ ಬಾಲಕಿ ಮನೆಯಲ್ಲಿ ಯಾರು ನನ್ನನ್ನು ಹೊಡೆದರು ಎಂದಷ್ಟೇ ಹೇಳಿ ಏನು ಹೇಳಲಾಗದೇ ತರ ತರ ನಡುಗುತ್ತಿರುವುದನ್ನು ಗಮನಿಸಿದ ಮನೆ ಮಂದಿ, ಮದರಾಸದ ಬಳಿ ಬಂದು ಸಿಸಿಟಿವಿಯನ್ನು (cctv) ಗಮನಿಸಿದಾಗ ಆಘಾತಕ್ಕೊಳಗಾಗಿದ್ದಾರೆ. ಬಾಲಕಿಯನ್ನು(Little Girl) ಯಾರು ಹಿಡಿದು ಎಸೆದ ಆಘಾತಕಾರಿ ದೃಶ್ಯ ಅಲ್ಲಿ ಸೆರೆ ಆಗಿದೆ. 

ಈ ಬಗ್ಗೆ ಮಾತನಾಡಿದ ಬಾಲಕಿಯ ಚಿಕ್ಕಪ್ಪ (uncle) ಆಕೆ ಸಂಪೂರ್ಣವಾಗಿ ನಡುಗುತ್ತಿದ್ದು, ಕುಟುಂಬ ಸದಸ್ಯರಿಗೆ ಏನು ಹೇಳಲು ಆಕೆಗೆ ಸಾಧ್ಯವಾಗುತ್ತಿರಲಿಲ್ಲ. ಸುಮಾರು ಹೊತ್ತಿನ ನಂತರ ಆಕೆ ತಾನು ರಸ್ತೆಬದಿ ನಿಂತಿದ್ದಾಗ ತನ್ನನ್ನು ಯಾರು ಹೊಡೆದಿದ್ದಾಗಿ ಹೇಳಿದ್ದಾಳೆ. ಇದಾದ ಬಳಿಕ ನಾನು ಬಂದು ಸಿಸಿಟಿವಿ ದೃಶ್ಯಾವಳಿಯನ್ನು (CCTV visuals) ಗಮನಿಸಿದಾಗ ಆಘಾತವಾಯಿತು ಎಂದು ಹೇಳಿದ್ದಾರೆ. 

10ಕ್ಕೂ ಹೆಚ್ಚು ಮಕ್ಕಳ ಅತ್ಯಾಚಾರ, ಒಬ್ಬಳ ಕೊಲೆ: ಮುರುಘಾ ಶ್ರೀ ಚಾರ್ಜ್‌ಶೀಟ್‌ನಲ್ಲಿದೆ ಎದೆ ಝಲ್ಲೆನಿಸುವ ಅಂಶಗಳು

ಅಲ್ಲದೇ ಈ ದೃಶ್ಯ ಸಾಮಾಜಿಕ ಜಾಲಾತಾಣದಲ್ಲಿ (social media) ಹರಿದಾಡಲು ಆರಂಭಿಸಿದ ಬಳಿಕ ಹಾಗೂ ಸ್ಥಳೀಯ ಚಾನೆಲ್‌ಗಳು ಈ ಘಟನೆಯ ದೃಶ್ಯವನ್ನು ಪ್ರಸಾರ ಮಾಡಿದ ಬಳಿಕ ಪೊಲೀಸರು ಆರೋಪಿ ಅಬ್ಬುಬಕ್ಕರ್ ಸಿದ್ಧಿಕ್‌ನನ್ನು (Aboobacker Siddique) ವಶಕ್ಕೆ ಪಡೆದಿದ್ದಾರೆ. ಆದರೆ ಆತ ಯಾಕೆ ಈ ರೀತಿ ಬಾಲಕಿ ಮೇಲೆ ಕ್ರೌರ್ಯ ತೋರಿದ ಎಂಬುದು ತಿಳಿದು ಬಂದಿಲ್ಲ. 

Islam in China: ಚೀನಾದಲ್ಲಿ ಮುಸ್ಲಿಂ ದೌರ್ಜನ್ಯದ ರಕ್ತಸಿಕ್ತ ಇತಿಹಾಸ!

ಪೊಲೀಸರು ಈ ಬಗ್ಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆಗೆ ಯತ್ನ) ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣಾ ಕಾಯ್ದೆ(POCSO) ಅಡಿ ಪ್ರಕರಣ ದಾಖಲಿಸಲಾಗಿದೆ. ಬಾಲಕಿಗೆ ದೈಹಿಕವಾಗಿ ಯಾವುದೇ ಹಾನಿಯಾಗಿಲ್ಲ. ಆದಾಗ್ಯೂ ಮಂಗಳೂರಿನ (Mangalore) ಆಸ್ಪತ್ರೆಗೆ (hospital) ಆ ಬಾಲಕಿಯನ್ನು ದಾಖಲಿಸಿ ದೈಹಿಕ ತಪಾಸಣೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

9 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ 92ರ ಮುದುಕನಿಗೆ 3 ವರ್ಷ ಜೈಲು!

Latest Videos
Follow Us:
Download App:
  • android
  • ios