Karnataka Politcs: ಅಧಿಕಾರ ಕೊಡುವಾಗ ಕಾಂಗ್ರೆಸ್‌ ಅನ್ಯಾಯ ಮಾಡುತ್ತೆ: ಸಚಿವ ಕಾರಜೋಳ

*  ಇಬ್ರಾಹಿಂ ತತ್ವ ಸಿದ್ಧಾಂತದ ಮೇಲೆ ರಾಜಕಾರಣ ಮಾಡಿದವರು
*  ಕಾಂಗ್ರೆಸ್‌ ವರ್ತನೆಗೆ ಪಕ್ಷ ಬಿಡುತ್ತಿರುವುದು ನೋವಿನ ಸಂಗತಿ
*  ಎಸ್‌.ಆರ್‌.ಪಾಟೀಲರಿಗೂ ಪರಿಷತ್ತಿಗೆ ಟಿಕೆಟ್‌ ನೀಡದೆ ನೋವು ಮಾಡಿದೆ 
 

Minister Govind Karjol Slams on Congress grg

ಬಾಗಲಕೋಟೆ(ಫೆ.01): ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ವಿವಿಧ ಹಂತದಲ್ಲಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಜಲಸಂಪನ್ಮೂಲ ಸಚಿವ ಗೋವಿಂದ(Govind Karjol) ಕಾರಜೋಳ ಅಧಿ​ಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿ​ಕಾರಿಗಳ ಸಭಾಂಗಣದಲ್ಲಿ ಸೋಮವಾರ ಜರುಗಿದ ಕೃಷ್ಣಾ ಮೇಲ್ದಂಡೆ ಯೋಜನೆ(Upper Krishna Project) ಅಡಿಯಲ್ಲಿ ಬರುವ ಭೂಸ್ವಾಧೀನ(Land Acquisition), ಪುನರ್ವಸತಿ ಮತ್ತು ಪುನರ್‌ ನಿರ್ಮಾಣದ ವಿಷಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಳುಗಡೆಯಾಗುವ 4871 ಎಕರೆ, ಪುನರ್ವಸತಿಗಾಗಿ 2394 ಎಕರೆ, ಕಾಲುವೆಗಾಗಿ 9173 ಎಕರೆ ಸೇರಿ ಒಟ್ಟು 16438 ಕ್ಷೇತ್ರಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಿದ್ದು, ಪ್ರಕ್ರಿಯೆ ಚುರುಕಾಗಬೇಕು. ಬಾಕಿ ಭೂಸ್ವಾಧೀನ ಪ್ರಕ್ರಿಯೆ ಸಹ ಪ್ರಾರಂಭಿಸಲು ಅಧಿ​ಕಾರಿಗಳಿಗೆ ಸೂಚಿಸಿದರು.

'ಚಾಮುಂಡೇಶ್ವರಿ ಜನ ಕೈ ಹಿಡಿಯಲಿಲ್ಲ, ಬಾದಾಮಿಯಲ್ಲಿ ಬೀಳ್ಕೊಡಲು ಸಜ್ಜು, ನೀವು ಸಲ್ಲುವ ಜಾಗ ಯಾವುದು'?

ಜಿಲ್ಲೆಗೆ ಆಗಮಿಸಿದ ಪ್ರೊಬೇಷನರಿ ಕೆಎಎಸ್‌ ಅಧಿ​ಕಾರಿಗಳಿಗೆ ತರಬೇತಿ ನೀಡಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಬಳಸಿಕೊಳ್ಳಲು ಕಾರಜೋಳ ತಿಳಿಸಿದರು. ಈಗಾಗಲೇ ಒಟ್ಟು 1,33,867 ಎಕರೆ ಜಮೀನು(Land) ಪೈಕಿ 23,341 ಎಕರೆ ಭೂಸ್ವಾಧೀನ ಪಡಿಸಿಕೊಂಡಿದ್ದು, 2716.51 ಕೋಟಿ ಪರಿಹಾರ ವಿತರಿಸಲಾಗಿದೆ. ಭೂಸ್ವಾಧೀನ ಐತೀರ್ಪುಗೊಂಡ ಪ್ರಕರಣಗಳಲ್ಲಿ ಇನ್ನೂ .250.44 ಕೋಟಿ ರೂ. ಪರಿಹಾರ ಹಣ ವಿತರಿಸಲು ಬಾಕಿ ಉಳಿದಿದ್ದು, ರೈತರಿಂದ(Farmers) ವೋಚರ್‌ ಪಡೆದು ಪರಿಹಾರ(compensation) ವಿತರಣೆ ಕ್ರಮಜರುಗಿಸಲು ಸೂಚಿಸಿದರು.

ವಿವಿಧ ಹಂತದಲ್ಲಿರುವ ಭೂಸ್ವಾಧೀನ, ಪುನರ್ವಸತಿ ಸೌಲಭ್ಯದ ಕಾಮಗಾರಿ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿ​ಕಾರ ಒಳಗೊಂಡಂತೆ ಸುಮಾರು 3000 ಕೋಟಿ ರೂ. ಅನುದಾನ ಮಾರ್ಚ ಅಂತ್ಯಕ್ಕೆ ಅವಶ್ಯಕತೆ ಇದ್ದು, ಕ್ರಮವಹಿಸುವುದಾಗಿ ತಿಳಿಸಿದರು.

ಉದಗಟ್ಟಿ ಪುನರ್ವಸತಿ ಕೇಂದ್ರದ ಅಭಿವೃದ್ಧಿಗೆ 1 ಕೋಟಿ ನೀಡಲು ತಿಳಿಸಿದ ಕಾರಜೋಳ ಅವರು ಮುಳುಗಡೆ ಪ್ರದೇಶದಲ್ಲಿ ಸರ್ಕಾರಿ ಗೌಂಟನ್‌ ಜಾಗದಲ್ಲಿ ಮನೆ, ಗುಡಿಸಲು ಕಟ್ಟಿಕೊಂಡವರಿಗೂ ಪರಿಹಾರ ನೀಡಲು ತಿಳಿಸಿದರು. ಪುನರ್ವಸತಿ ನಿರ್ಮಾಣದ ನಂತರ ಉಳಿದ ಜಮೀನನ್ನು ಸರ್ಕಾರಿ ಶಾಲೆ, ಕಾಲೇಜು, ವಸತಿ ನಿಲಯಗಳಿಗೆ ಅವಕಾಶವಿದ್ದಲ್ಲಿ ಈ ಕುರಿತು ಸಭೆ ನಡೆಸಿ ತೀರ್ಮಾನಿಸಲು ತಿಳಿಸಿದರು.

3ನೇ ಹಂತದ ಗ್ರಾಮೀಣ ಮತ್ತು ನಗರ ಸೇರಿ ಒಟ್ಟು 25,550 ಕಟ್ಟಡಗಳ ಪೈಕಿ 2,383 ಕಟ್ಟಡಗಳಿಗೆ ಸ್ವಾ​ಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗಿದ್ದು, ಸದ್ಯ 4 ಗ್ರಾಮಗಳ 3739 ಕಟ್ಟಡಗಳ ಐತೀರ್ಪು ಹಂತದಲ್ಲಿವೆ. ಪುನರ್ವಸತಿಗಾಗಿ 1821.23 ಎಕರೆ, ನ್ಯಾಯಾಲಯದಿಂದ ತಡೆಯಾಜ್ಞೆ 487.14 ಎಕರೆ, ಅಧಿಸೂಚನೆ ಹಂತದಲ್ಲಿರುವ 99.01 ಎಕರೆ, ಪ್ರಸ್ತಾವನೆ ಹಂತದಲ್ಲಿ 2295.13 ಎಕರೆ ಇರುವುದಾಗಿ ಯುಕೆಪಿಯ ವಿಶೇಷ ಜಿಲ್ಲಾಧಿ​ಕಾರಿ ಸೋಮಲಿಂಗ ಗೆನ್ನೂರ ಸಭೆಗೆ ತಿಳಿಸಿದರು.

ಯುಕೆಪಿ ಹಂತ 1 ಮತ್ತು 2ರಲ್ಲಿ ಕೃಷ್ಣಾ ಕಣಿವೆಯ ಸ್ಕೀಮ್‌-1ನೇ ತೀರ್ಪಿನನ್ವಯ 173 ಟಿ.ಎಂಸಿ ನೀರು ಹಂಚಿಕೆಯಾಗಿದ್ದು, ಎಫ್‌ಆರ್‌ಎಲ್‌ 519.600 ಮೀಟರ್‌ವರೆಗೆ ನೀರನ್ನು ಸಂಗ್ರಹಿಸಿ 11 ಯೋಜನೆಗಳಿಂದ ಯೋಜಿತ 6.20 ಲಕ್ಷ ಹೆಕ್ಟೇರ್‌ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಿದೆ. ನಾರಾಯಣಪುರ ಜಲಾಶಯ ವ್ಯಾಪ್ತಿಯ 37010 ಎಕರೆ, ಆಲಮಟ್ಟಿ ಜಲಾಶಯ ವ್ಯಾಪ್ತಿಯ 138460 ಎಕರೆ, ಭೀಮಾ ಬ್ರಿಡ್ಜ್‌ಗಾಗಿ 289 ಎಕರೆ, ಸನ್ನತಿ ಬ್ರಿಡ್ಜ್‌ ಕಂ ಬ್ಯಾರೇಜಗಾಗಿ 1024 ಸೇರಿ ಒಟ್ಟು 176783 ಎಕೆರೆ ಜಮೀನ್ನು ಭೂಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಶಾಸಕ ವೀರಣ್ಣ ಚರಂತಿಮಠ, ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ, ಯುಕೆಪಿಯ ಆಯುಕ್ತ ಶಿವಯೋಗಿ ಕಳಸದ, ಅಪರ ಜಿಲ್ಲಾ​ಧಿಕಾರಿ ಮಹಾದೇವ ಮುರಗಿ, ಯುಕೆಪಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಚ್‌.ಡಿ.ದಾಸರ, ಉಪ ವಿಭಾಗಾಧಿ​ಕಾರಿ ಎಂ.ಗಂಗಪ್ಪ ಸೇರಿದಂತೆ ಇತರರು ಇದ್ದರು.

ಅಧಿಕಾರ ಕೊಡುವಾಗ ಕಾಂಗ್ರೆಸ್‌ ಅನ್ಯಾಯ ಮಾಡುತ್ತೆ

ಸ್ವಾತಂತ್ರ್ಯ ನಂತರದ 75 ವರ್ಷಗಳಲ್ಲಿ ಮುಸ್ಲಿಮರ(Muslim) ಬೆಂಬಲದೊಂದಿಗೆ ಅಧಿಕಾರ ನಡೆಸಿದ ಕಾಂಗ್ರೆಸ್‌(Congress) ಪಕ್ಷ ಅವರನ್ನು ಕೇವಲ ಮತ ಬ್ಯಾಂಕ್‌ನ್ನಾಗಿ(Vote Bank) ಉಪಯೋಗ ಮಾಡಿಕೊಂಡು ಅವರಿಗೆ ಅಧಿಕಾರ ಕೊಡುವ ಸಮಯದಲ್ಲಿ ಅನ್ಯಾಯ ಮಾಡುತ್ತಿರುವುದರಿಂದಲೇ ಆ ಸಮುದಾಯದವರು ಸ್ವಾಭಾವಿಕವಾಗಿ ಪ್ರತಿಭಟಿಸುತ್ತಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.

Karnataka Politics: ಸಿದ್ದು ಹಾಡಿ ಹೊಗಳುತ್ತಲೇ ಸರಿಯಾದ ಗುದ್ದು ನೀಡಿದ ಸಿಸಿ ಪಾಟೀಲ್!

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಎಂ. ಇಬ್ರಾಹಿಂ(CM Ibrahim) ಹಿರಿಯ, ಅನುಭುವಿ ರಾಜಕಾರಣಿಯಾಗಿದ್ದು ತತ್ವ ಸಿದ್ಧಾಂತದ ಮೇಲೆ ರಾಜಕಾರಣ ಮಾಡಿದವರು. ಅಂತವರು ಇಂದು ಕಾಂಗ್ರೆಸ್‌ ವರ್ತನೆಗೆ ಪಕ್ಷ ಬಿಡುತ್ತಿರುವುದು ನೋವಿನ ಸಂಗತಿ ಎಂದರು.

ಇಬ್ರಾಹಿಂ ಅವರನ್ನು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಪಕ್ಷದವರು ಕರೆದುಕೊಂಡು ಬಂದು ಇದೀಗ ಅವರಿಗೆ ಅವಮಾನ ಮಾಡಿದ್ದರಿಂದ ಸಹಜವಾಗಿ ಅವರಲ್ಲಿ ನೋವಿದೆ. ಎಸ್‌.ಆರ್‌.ಪಾಟೀಲರಂತಹ ಹಿರಿಯ ರಾಜಕಾರಣಿಗಳಿಗೂ ಪಕ್ಷ ಪರಿಷತ್ತಿಗೆ ಟಿಕೆಟ್‌ ನೀಡದೆ ನೋವು ಮಾಡಿದೆ. ಹೀಗಾಗಿ ಇಬ್ಬರೂ ಸೇರಿ ಸಭೆ ನಡೆಸಿರಬಹುದು ಎಂದು ಹೇಳಿದರು.

ಬಿಜೆಪಿ(BJP) ನಿಂತ ನೀರಲ್ಲ, ಹರಿಯುವ ನೀರು. ಹೀಗಾಗಿ ಹರಿಯುವ ನೀರಿಗೆ ಯಾವ ಹೊಸ ನೀರು ಸೇರಿಕೊಳ್ಳುತ್ತಿದೆಯೋ ಅದನ್ನು ತೆಗೆದುಕೊಂಡು ಮುಂದೆ ಹೋಗುವ ಸಾಮರ್ಥ್ಯ ಪಕ್ಷಕ್ಕಿದೆ ಎಂದು ಮಾರ್ಮಿಕವಾಗಿ ಹೇಳಿದರು. ಇಬ್ರಾಹಿಂ ಅವರು ಮತ್ತು ನಾವು ಒಂದೇ ಪಕ್ಷದಲ್ಲಿ ಹಿಂದೆ ಜನತಾದಳದಲ್ಲಿ ಆತ್ಮೀಯವಾಗಿ ಇದ್ದವರು. ಯಾರು ಬಂದರೂ ಪಕ್ಷಕ್ಕೆ ಸ್ವಾಗತ ಮಾಡುತ್ತೇವೆ ಎಂದರು.

ಸಚಿವ ಶ್ರೀರಾಮುಲು ಅವರು ಇಬ್ರಾಹಿಂ ಅವರನ್ನು ಬಿಜೆಪಿಗೆ ಆಹ್ವಾನಿಸಿದ ಕುರಿತು ಪ್ರತಿಕ್ರಿಯೆ ನೀಡಿದ ಕಾರಜೋಳ, ಶ್ರೀರಾಮುಲು ತಮ್ಮ ಅಭಿಪ್ರಾಯ ಹೇಳಿದ್ದಾರೆ. ನಾನು ಸಂದರ್ಭ ಬಂದಾಗ ಏನು ಹೇಳಬೇಕೋ ಅದನ್ನು ಹೇಳುತ್ತೇನೆ ಎಂದು ಹೇಳಿದರು.
 

Latest Videos
Follow Us:
Download App:
  • android
  • ios