Asianet Suvarna News Asianet Suvarna News

ಭದ್ರಾ ಮೇಲ್ದಂಡೆ ಶೀಘ್ರ ಪೂರ್ಣಗೊಳಿಸುವುದೇ ನಮ್ಮ ಗುರಿ: ಸಚಿವ ಡಿ.ಸುಧಾಕರ್‌

ಭದ್ರಾ ಮೇಲ್ದಂಡೆ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವುದು ನಮ್ಮ ಮುಂದಿನ ಗುರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಹೇಳಿದರು. 

Minister D Sudhakar Talks About Bhadra Upper Project gvd
Author
First Published Jul 24, 2023, 11:59 PM IST

ಹೊಸದುರ್ಗ (ಜು.24): ಭದ್ರಾ ಮೇಲ್ದಂಡೆ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವುದು ನಮ್ಮ ಮುಂದಿನ ಗುರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಹೇಳಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತಾಲೂಕು ಕುರುಬರ ಸಂಘ ಹಾಗೂ ಕನಕ ನೌಕರರ ಸಾಂಸ್ಕೃತಿಕ ಸಂಘ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕನಕ ಪ್ರತಿಭಾ ಪುರಸ್ಕಾರ ಹಾಗೂ ಶಾಸಕ ಬಿ.ಜಿ.ಗೋವಿಂದಪ್ಪ ಅವರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಿದ್ದರಾಮಯ್ಯ ಸರ್ಕಾರದ ಕಳೆದ ಅವಧಿಯಲ್ಲಿನ ಅನೇಕ ಯೋಜನೆಗಳು ಇನ್ನೂ ನನೆಗುದಿಗೆ ಬಿದ್ದಿವೆ. 

ಅವುಗಳನ್ನು ಪೂರ್ಣಗೊಳಿಸುವ ಜವಬ್ದಾರಿ ನಮ್ಮ ಮೇಲಿದೆ ಅಲ್ಲದೆ ಅಪ್ಪರ್‌ ಭ ದ್ರಾ ಯೋಜನೆಯ ರೂವಾರಿ ಬಿ.ಜಿ.ಗೋವಿಂದಪ್ಪ ಕ್ರಿಯಾಶೀಲರಾಗಿದ್ದು, ಯೋಜನೆ ಪೂರ್ಣಗೊಳ್ಳಲು ಇರುವ ಅಡೆತಡೆಗಳನ್ನು ನಿವಾರಣೆ ಮಾಡಲು ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್‌ ಸೂಚನೆ ನೀಡಿದ್ದು ಶೀಘ್ರವಾಗಿ ಬಗೆಹರಿಸಲಾಗುವುದು ಎಂದರು. ಸನ್ಮಾನ ಸ್ವೀಕರಿಸಿದ ಶಾಸಕ ಬಿ.ಜಿ ಗೋವಿಂದಪ್ಪ ಮಾತನಾಡಿ, ಜಾತಿ ವ್ಯವಸ್ಥೆ ಹಾಗೂ ಹಣಬಲದಿಂದ ಯಾರೂ ನಾಯಕರಾಗಲು ಸಾಧ್ಯವಿಲ್ಲ. ಹಾಗೆಯೇ ಯಾವುದೇ ಒಂದು ಜಾತಿಯಿಂದ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ. ಜನ ಸೇವೆಯ ಮೂಲಕ ಜನರ ಸಂಕಷ್ಟದಲ್ಲಿ ಭಾಗಿಯಾಗಿ ಯಾರು ಎಲ್ಲಾ ಸಮುದಾಯದ ಜನರ ಪ್ರೀತಿ, ವಿಶ್ವಾಸ ಗಳಿಸುತ್ತಾರೋ ಅವರು ಮಾತ್ರ ಜನ ನಾಯಕರಾಗುತ್ತಾರೆ ಎಂದರು.

ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜಿಗೆ ‘ರಾಜಕೀಯ ಗ್ರಹಣ’: ಕಾಮಗಾರಿ ಇನ್ನೂ ಅಪೂರ್ಣ

1999ರಿಂದ ನಾನು ರಾಜಕಾರಣಕ್ಕೆ ಬಂದೆ ಅಂದಿನಿಂದ ಇಲ್ಲಿಯವರೆಗೆ ಸಮಾಜಕ್ಕೆ ಕಳಂಕ ತರುವ ಕೆಲಸ ಮಾಡಿಲ್ಲ. ಅಲ್ಲದೆ ಚುನಾವಣೆಯಲ್ಲಿ ಸೋತ ನಂತರ ಮನೆ ಸೇರುವ ಜಾಯಮಾ ನವೂ ನನ್ನದಲ್ಲ. ಸೋತ ದಿನದಿಂದಲೇ ಮತ್ತೆ ಜನರೊಂದಿಗೆ ಬೆರೆತು ಮತ್ತೆ ಸಂಘಟನೆ ಮಾಡುವ ಮೂಲಕ ಅಧಿಕಾರ ಪಡೆದಿದ್ದೇನೆ ಎಂದರು. ಮಾಜಿ ಸಚಿವ ಆಂಜನೇಯ ಮಾತನಾಡಿ, ಹಣವೇ ಎಲ್ಲವನ್ನು ನಿರ್ಧರಿಸುತ್ತದೆ ಎಂಬುದು ಸುಳ್ಳು. ಕಾಂಗ್ರೆಸ್‌ ಪಕ್ಷ ರಾಜ ಮಾರ್ಗದಲ್ಲಿ ಅಧಿಕಾರ ಮಾಡಿದೆ. ರಾಜಕೀಯದಲ್ಲಿ ಹಣದ ಹಂಚುವ ವ್ಯವಸ್ಥೆ ತೋರಿಸಿದ್ದು ಕಾಂಗ್ರೆಸ್‌ ಪಕ್ಷ ಅಲ್ಲ. ಮತ ಖರೀದಿ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ವಾಮ ಮಾರ್ಗದಲ್ಲಿ ಅಧಿಕಾರ ಮಾಡಿದ ಬೇರೊಂದು ಪಕ್ಷ ಎಂದರು.

ಕೆಆರ್‌ಎಸ್‌ ಜಲಾಶಯದ ಒಳಹರಿವಿನಲ್ಲಿ ಅಲ್ಪಪ್ರಮಾಣದ ಹೆಚ್ಚಳ

ಕನಕ ಗುರುಪೀಠ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಂಜುನಾಥ್‌ ಆಧ್ಯಕ್ಷತೆ ವಹಿಸಿದ್ದರು. ಮುಖ್ಯ ಆತಿಥಿಗಳಾಗಿ , ಶಾಸಕರಾದ ರಘುಮೂರ್ತಿ, ಸುರೇಶ್‌, ಮಾಜಿ ಸಂಸದ ಚಂದ್ರಪ್ಪ, ಕನಕ ನೌಕರರ ಸಂಘದ ಅಧ್ಯಕ್ಷ ಶಾಂತಕುಮಾರ್‌, ರಾಜ್ಯ ಕುರುಬರ ಸಂಘದ ನಿರ್ದೇಶಕ ಡಾ ಎಂ.ಎಚ್‌ ಕೃಷ್ಣಮೂರ್ತಿ, ಟಿ.ಯಲ್ಲಪ್ಪ ಮತ್ತಿತರರು ಹಾಜರಿದ್ದರು. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಸಮುದಾಯಗಳ ಅಧ್ಯಕ್ಷರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಇದೆ ವೇಳೆ ರಾಮಧಾನ್ಯ ಚರಿತ್ರೆಯ ಗದ್ಯಾನುವಾದ ಕೃತಿ ಹಾಗೂ ಶ್ರೀ ವಿಷ್ಣು ಪುರಾಣ ತ್ರಿಪದಿ ಕಾವ್ಯ ಬಿಡುಗಡೆ ಮಾಡಲಾಯಿತು.

Follow Us:
Download App:
  • android
  • ios