ಗದಗ(ಫೆ.28): ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಮಹದಾಯಿ ನೀರು ಬಳಕೆಗೆ ಕೇಂದ್ರ ಸರ್ಕಾರ ಗೆಜೆಟ್‌ ನೋಟಿಫೀಕೇಶನ್‌ ಹೊರಡಿಸಿರುವುದು ಉತ್ತರ ಕರ್ನಾಟಕದ ಬಹು ದಿನಗಳ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಹೇಳಿದ್ದಾರೆ.

ಮಾಧ್ಯಮದವರ ಮಾತನಾಡಿದ ಅವರು, ಮುಖ್ಯಮಂತ್ರಿ ಯೂಡಿಯೂರಪ್ಪ ಹುಟ್ಟುಹಬ್ಬದ ದಿನದಂದೇ ಪ್ರಧಾನಿ ಮೋದಿ ಗಿಫ್ಟ್‌ ನೀಡಿದ್ದಾರೆ. ಮಹದಾಯಿ ನದಿ ನೀರು ಹಂಚಿಕೆ ವಿವಾದ 13.5 ಟಿಎಂಸಿ ನೀರು ಬಳಕೆಗೆ ನ್ಯಾಯಾಲಯ ಆದೇಶ ಹೊರಡಿಸಿತ್ತು.

ಮಹದಾಯಿ: ಕರ್ನಾಟಕಕ್ಕೆ ಜಯ, ಗೋವಾದ ತಕರಾರಿಗೆ ಮಣೆ ಹಾಕದ ಕೇಂದ್ರ!

ಇದೀಗ ಕೇಂದ್ರ ಸರಕಾರ ಗೆಜೆಟ್‌ ಹೊರಡಿಸೋ ಮೂಲಕ ಹೋರಾಟಕ್ಕೆ ನ್ಯಾಯ ಒದಗಿಸುರುವುದಕ್ಕೆ ಸಚಿವ ಪಾಟೀಲರು ಕೇಂದ್ರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.