ಪ್ರಧಾನಿ, ಸಿಎಂರನ್ನು ವಾಲ್ಮೀಕಿ ಸಮುದಾಯ ನೆನಪಿಸಿಕೊಳ್ಳಬೇಕು: ಸಚಿವ ಶ್ರೀರಾಮುಲು
ವಾಲ್ಮೀಯ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿದ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸೂರ್ಯ ಚಂದ್ರ ಇರುವ ತನಕ ಸಮುದಾಯ ನೆನಪಿಸಿಕೊಳ್ಳಬೇಕು ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ತುಮಕೂರು (ಅ.29): ವಾಲ್ಮೀಯ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿದ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸೂರ್ಯ ಚಂದ್ರ ಇರುವ ತನಕ ಸಮುದಾಯ ನೆನಪಿಸಿಕೊಳ್ಳಬೇಕು ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದರು. ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2008ರಿಂದ ಇಲ್ಲಿವರಗೆ ಬಿಜೆಪಿ ಸರ್ಕಾರ ವಾಲ್ಮೀಕಿ ಸಮುದಾಯದ ಪರವಾಗಿದೆ. ರಾಜ್ಯ ಸರ್ಕಾರ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಬೃಹತ್ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನನ್ನ ಸಮುದಾಯಕ್ಕೆ ನಾನು ಕೊಟ್ಟಮಾತಿನಂತೆ ಬದ್ದನಾಗಿದ್ದೇನೆ.
ಈ ವೇಳೆ ಮೀಸಲಾತಿ ಕೊಟ್ಟ ಅಂಬೇಡ್ಕರ್‌ರನ್ನು ನೆನಪಿಸಬೇಕು. ಹಾಗೆಯೇ ಮೀಸಲಾತಿ ಪ್ರಮಾಣ ಹೆಚ್ಚಿಸಿದ ಪ್ರಧಾನಿ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು. ಮೀಸಲಾತಿ ಕೊಟ್ಟನಂತರ ಸಿದ್ದರಾಮಯ್ಯರ ನಿದ್ದೆಗೆಟ್ಟಿದೆ ಎಂದು ವ್ಯಂಗ್ಯವಾಡಿದ ಶ್ರೀರಾಮುಲು ರಾಹುಲ್ ಗಾಂಧಿ ಅವರ ಪಾದಯಾತ್ರೆಯಿಂದ ನಮ್ಮ ನಿದ್ದೆಗೆಟ್ಟಿಲ್ಲ. ನಿಮ್ಮನ್ನು ಬಿಜೆಪಿ ಡಿಸಿಎಂ ಮಾಡಿಲ್ವಲ್ಲಾ ಎಂಬ ಪ್ರಶ್ನೆಕೆ ತಡವರಿಸಿದ ಅವರು ಅದು ಪಕ್ಷದ ನಿರ್ಧಾರ. ಪಕ್ಷ ಯಾವುದೇ ನಿರ್ಧಾರ ಕೈ ಗೊಂಡರೂ ಅದಕ್ಕೆ ಬದ್ದ. ಮೀಸಲಾತಿ ವಿಚಾರದಲ್ಲಿ ಸಿದ್ದರಾಮಯ್ಯರಿಗೆ ನಿದ್ದೆ ಬರುತಿಲ್ಲ ಎಂದ ಅವರು ಸಿದ್ದರಾಮಯ್ಯರಿಗೆ ಸಿಎಂ ಬೊಮ್ಮಾಯಿ ನಿದ್ದೆಯಲ್ಲಿ ಸ್ವಪ್ನವಾಗಿ ಕಾಡುತ್ತಿದ್ದಾರೆ.
ಬಳ್ಳಾರಿ ಎಸ್ಟಿ ಸಮಾವೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ: ಸಚಿವ ಶ್ರೀರಾಮುಲು
ಹಿಂದೆ ಕಾರ್ಯಕ್ರಮದಲ್ಲಿ ನಿದ್ದೆ ಮಾಡುತ್ತಿದ್ದ ಸಿದ್ದರಾಮಯ್ಯ ಈಗ ನಿದ್ದೆ ಮಾಡುವುದು ನಿಲ್ಲಿಸಿದ್ದಾರೆ. ಇವೆಲ್ಲಾ ಮೀಸಲಾತಿ ಎಫೆಕ್ಟ್ ಎಂದರು. ಮಾಜಿ ಸಚಿವ ಶಿವನಗೌಡ ನಾಯಕ ಮಾತನಾಡಿ, ಅಹಿಂದ ಚಾಂಪಿಯನ್ ಲಾಗಾ ಹೊಡೆದರಾ ಎಂದು ಪ್ರಶ್ನಿಸಿದರು. ತಮ್ಮ ಅವಧಿಯಲ್ಲಿ ಯಾಕೆ ಮೀಸಲಾತಿ ಕೊಟ್ಟಿಲ್ಲ ಎಂದು ಪ್ರಶ್ನಿಸಿದ ಅವರು ಸರ್ವ ಪಕ್ಷದ ಸಭೆಯಲ್ಲಿ ಮೀಸಲಾತಿ ಹೆಚ್ಚಿಸಿ ಒಳ್ಳೆ ಕೆಲಸ ಮಾಡಿದ್ರಿ ಎಂದು ಸಿದ್ದರಾಮಯ್ಯ ಅವರೇ ಸಿಎಂ ಬೊಮ್ಮಾಯಿ ಅವರನ್ನು ಹೊಗಳಿದರು. ಆದರೆ ಹೊರಗಡೆ ಬಂದು ಅನುಷ್ಠಾನಕ್ಕೆ ಬರುವುದಿಲ್ಲ ಎಂದು ಟೀಕೆ ಮಾಡುವ ಮೂಲಕ ಸಿದ್ದರಾಮಯ್ಯ ಇಬ್ಬಗೆಯ ನೀತಿ ಅನುಸರಿಸುತ್ತಾರೆ ಎಂದರು.
ಸಿದ್ದರಾಮಯ್ಯ ದಲಿತರು, ಹಿಂದುಳಿದ ನಾಯಕರನ್ನು ತುಳಿದಿದ್ದಾರೆ: ಸಚಿವ ಶ್ರೀರಾಮುಲು
ವಾಲ್ಮೀಕಿ ನಾಯಕರಿಗೆ ಶ್ರೀರಾಮುಲು ಆಹ್ವಾನ: ರಾಜಕಾರಣಕ್ಕೋಸ್ಕರ ಮೀಸಲಾತಿ ಕುರಿತು ಕಾಂಗ್ರೆಸ್ ನಾಯಕರು ಟೀಕೆ ಮಾಡುತ್ತಾರೆ. ರಾಹುಲ್ ಗಾಂಧಿ ನಾಟಕೀಯವಾದ ಪಾದಯಾತ್ರೆ ಮಾಡುತ್ತಿದ್ದಾರೆ. ಅಧಿಕಾರದಲ್ಲಿ ಇರುವಾಗ ಅವರು ಹಿಂದುಳಿದ ಸಮುದಾಯದವರಿಗೆ ಅನ್ಯಾಯ ಮಾಡಿದರು. ಕಾಂಗ್ರೆಸ್‌ನವರು ವೋಚ್ ಬ್ಯಾಂಕ್ ಮಾಡಿಕೊಂಡು ಕಾಲ ಕಳೆದರು ಎಂದು ಹರಿಹಾಯ್ದ ಅವರು ತಾಕತ್ತು ಇದ್ದರೆ ಮೀಸಲಾತಿ ಕೊಡಬೇಕಿತ್ತು. ಆಗ ಮೀಸಲಾತಿ ಕೊಡುವ ಶಕ್ತಿ ಧೈರ್ಯ ನಿಮಗೆ ಇರಲಿಲ್ಲ. ಹೀಗಾಗಿ ಎಸ್ಸಿ-ಎಸ್ಟಿಸಮುದಾಯ ನಿಮಗೆ ಮುಂದಿನ ದಿನದಲ್ಲಿ ಪಾಠ ಕಲಿಸುತ್ತದೆ. ಬೇರೆ ಪಕ್ಷದ ವಾಲ್ಮೀಕಿ ನಾಯಕರು ಆ ಪಕ್ಷ ಬಿಟ್ಟು ಬರಬೇಕು ಎಂದು ಇದೇ ಸಂದರ್ಭದಲ್ಲಿ ಶ್ರೀರಾಮುಲು ಅವರು ಕಾಂಗ್ರೆಸ್, ಜೆಡಿಎಸ್ ಪಕ್ಷದ ವಾಲ್ಮೀಕಿ ನಾಯಕರಿಗೆ ಸಚಿವ ಶ್ರೀರಾಮುಲು ಆಹ್ವಾನ ನೀಡಿದರು.