Shivamogga: ಸಚಿವ ಆರಗ ಜ್ಞಾನೇಂದ್ರ ವರ್ಸಸ್ ಮಾಜಿ ಸಿಎಂ ಬಿಎಸ್‌ವೈ ಜುಗಲ್ ಬಂದಿ?
ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ಅವ್ಯವಸ್ಥೆ ಕುರಿತು ನಿಕಟಪೂರ್ವ ಸಿಎಂ ಬಿಎಸ್‌ವೈ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ನಡುವೆ ಇಂದು ಬಹಿರಂಗ ಸಭೆಯಲ್ಲಿ ಸಾರ್ವಜನಿಕರ ಎದುರೇ ಜುಗಲ್ ಬಂಧಿ ನಡೆದ ಘಟನೆ ನಡೆಯಿತು.
ವರದಿ: ರಾಜೇಶ್ ಕಾಮತ್, ಏಷ್ಯಾನೆಟ್ ಸುವರ್ಣ ನ್ಯೂಸ್, ಶಿವಮೊಗ್ಗ
ಶಿವಮೊಗ್ಗ (ಮೇ.02): ಶಿವಮೊಗ್ಗದ (Shivamogga) ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ (Meggan Hospital) ಅವ್ಯವಸ್ಥೆ ಕುರಿತು ನಿಕಟಪೂರ್ವ ಸಿಎಂ ಬಿ.ಎಸ್.ಯಡಿಯೂರಪ್ಪ (BS Yediyurappa) ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ನಡುವೆ ಇಂದು ಬಹಿರಂಗ ಸಭೆಯಲ್ಲಿ ಸಾರ್ವಜನಿಕರ ಎದುರೇ ಜುಗಲ್ ಬಂಧಿ ನಡೆದ ಘಟನೆ ನಡೆಯಿತು. ಮೆಗ್ಗಾನ್ ಅವ್ಯವಸ್ಥೆ ಕುರಿತು ಗೃಹಸಚಿವರು ಕಣ್ಣಿನ ಪೊರೆ ತೆರೆದಂತೆ ಮಾತನಾಡಿದರು ಆದರೆ ಇದಕ್ಕೆ ಪ್ರತಿ ಹೇಳಿಕೆಯಂತೆ ಬಿಎಸ್‌ವೈ ಮಾತನಾಡಿ ಆರೋಗ್ಯ ವ್ಯವಸ್ಥೆ ಸುಧಾರಣೆ ಆಗಿದೆ ಎಂದು ಹೇಳುವ ಮೂಲಕ ಬಿಎಸ್‌ವೈ ವೇದಿಕೆ ಮೇಲೆ ಗೃಹ ಸಚಿವರಿಗೆ ಸವಾಲೆಸಿದಿದ್ದಾರೆ.
ಇಂದು ಸಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆಯ ವೇಳೆ ಈ ವೇದಿಕೆ ಸಾಕ್ಷಿಯಾಗಿದೆ. ಮೊದಲಿಗೆ ಭಾಷಣ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಮೆಗ್ಗಾನ್ ಬೋಧನಾ ಆಸ್ಪತ್ರೆಯನ್ನ ಕಟ್ಟಿ ಎಷ್ಟು ವರ್ಷವಾಗಿದೆ. ಇನ್ನೂ ಸರಿಯಾದ ಚಿಕಿತ್ಸೆ ನೀಡುವಲ್ಲಿ ನಾವು ವಿಫಲರಾಗಿದ್ದೇವೆ. ಮೆಗ್ಗಾನ್‌ನಲ್ಲಿ 130 ವೈದ್ಯರನ್ನ ಹೊಂದಿದರೂ ಮಣಿಪಾಲ್‌ಗೆ ಇಲ್ಲಿನ ರೋಗಿಗಳು ಮೌಖಿಕವಾಗಿ ರೆಫರ್ ಆಗ್ತಾ ಇದ್ದಾರೆ. ಹೋಗಲಿ ಮಣಿಪಾಲ್ ಗೆ ರೆಫರ್ ಮಾಡಿರುವ ಪತ್ರನಾದರೂ ಮೆಗ್ಗಾನ್ ಆಡಳಿತ ಮಂಡಳಿ ನೀಡುತ್ತಾ ಅದೂ ಇಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಯಾವ ನೈತಿಕತೆ ಆಧಾರದಲ್ಲಿ ಆರಗ ಜ್ಞಾನೇಂದ್ರ ಗೃಹ ಸಚಿವರಾಗಿ ಮುಂದುವರಿದಿದ್ದಾರೆ?
ಇದು ಸಮಸ್ಯೆ, ಯಾವ ರೋಗಿ ಬಂದರೂ ರೆಫರ್ ಮಾಡುವಂತಹದ್ದು ಆಗಬಾರದು, ಮೆಗ್ಗಾನ್‌ನಲ್ಲಿಯೇ ಚಿಕಿತ್ಸೆ ಸಿಗುವಂತೆ ಆಗಬೇಕು. ಇಲ್ಲಿನ ಬಹುತೇಕ ವೈದ್ಯರು ಹೊರಗಡೆ ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ ಎಂಬ ಮಾತಿದೆ. ಅದು ಒಂದಕಡೆ ಇರಲಿ. ಆದರೆ ನಾವು ಜನರಿಗೆ ನೀಡುವ ಸೇವೆಯನ್ನ ಆದಷ್ಟು ಪ್ರಾಮಾಣಿಕರಾಗಿ ನೀಡಬೇಕಿದೆ ಎಂದರು. ಮೆಗ್ಗಾನ್‌ಗೆ ಎಷ್ಟು ಸೌಕರ್ಯ ನೀಡಲಾಯಿತು. ಇನ್ನೂ ಸೌಕರ್ಯವನ್ನ ನೀಡಲು ಸರ್ಕಾರ ಸಿದ್ದವಿದೆ. ಆದರೆ ಕೊಟ್ಟ ಸವಲತ್ತುಗಳು ಮತ್ತು ಸೌಕರ್ಯಗಳು ಎಷ್ಟರ ಮಟ್ಟಿಗೆ ಬಳಕೆಯಾಗುತ್ತಿದೆ ಎಂಬುದು ಸಹ ತಿಳಿಯಬೇಕಿದೆ. ಇಲ್ಲಿ ಬರುವ ವ್ಯಕ್ತಿ ಯಾರ ಶಿಫಾರಸ್ಸು ಇಲ್ಲದೆ ಉತ್ತಮ ಚಿಕಿತ್ಸೆ ಪಡೆದುಕೊಂಡು ಹೋಗುವಂತಾಗಬೇಕು ಎಂದರು.
ಮಣಿಪಾಲ್‌ನಲ್ಲಿ ನನಗೆ ಪರಿಚಯಸ್ಥನೊಬ್ಬ ಕ್ಯಾನ್ಸರ್‌ನಿಂದ ಬಳಲುತ್ತಿದ್ದ. ಮೆಗ್ಗಾನ್ ಗೆ ಬಂದು ನಂತರ ಮಣಿಪಾಲ್‌ಗೆ ದಾಖಲಾಗಿದ್ದಾನೆ. ಮಣಿಪಾಲ್ ನಲ್ಲಿ 2 ಲಕ್ಷ ರೂ. ಖರ್ಚಾಗಿದೆ ಇನ್ನೂ ಖರ್ಚಾಗುವ ನಿರೀಕ್ಷೆ ಇದೆ. ಆದರೆ ಇಲ್ಲಿನ ವೈದ್ಯರು ಕೊನೆ ಪಕ್ಷ ರೆಫರೆನ್ಸ್ ಪತ್ರ ನೀಡಿದರೆ ಆಯುಷ್ ಮಾನ್ ಭಾರತ್ ಕಾರ್ಡ್ ಆತನಿಗೆ ಅನುಕೂಲವಾಗುತ್ತಿತ್ತು. ನನಗೆ ಪರಿಚಯದ ವೈದ್ಯರು ಇದ್ದಾರೆ. ಆದರೆ ಎಷ್ಟು ಜನಕ್ಕೆಂದು ಅವರಿಗೆ ರೆಫೆರೆನ್ಸ್ ಪತ್ರ ಕೊಡಿಸೋಣ. ಈ ಸಮಸ್ಯೆ ಬಗೆಹರಿಯಬೇಕಿದೆ ಎಂಬ ಸತ್ಯವನ್ನ ಗೃಹ ಸಚಿವರು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮತ್ತು ನಿಕಟಪೂರ್ವ ಸಿಎಂ ಬಿಎಸ್‌ವೈ ಎದುರು ಬಿಚ್ಚಿಟ್ಟರು.
ಇನ್ನೂ ನಿಕಟಪೂರ್ವ ಸಿಎಂ ಬಿಎಸ್‌ವೈ ಮಲೆನಾಡಿನಲ್ಲಿ ವೈದ್ಯಕೀಯ ಸವಲತ್ತು ಹೆಚ್ಚಿಸಲಾಗಿದೆ. ಆರಗ ಜ್ಞಾನೇಂದ್ರರವರಿಗೆ ಕಿವಿ ಮಾತು ಹೇಳಲು ಇಚ್ಚಿಸುತ್ತೇನೆ. ಈ ಹಿಂದೆ ಮಣಿಪಾಲ್‌ಗೆ ಹೋಗಿ ಚಿಕಿತ್ಸೆ ಪಡೆಯುವರ ಸಂಖ್ಯೆ ಶೇ.90 ರಷ್ಟು ಕಡಿಮೆಯಾಗಿದೆ. ಬೇಕಾದರೆ ಆರಗ ಜ್ಞಾನೇಂದ್ರ ಲೆಕ್ಕ ಹಾಕಲಿ ಎಂದು ಸವಾಲು ಎಸೆದರು.ನಾಯಕರಿಬ್ಬರ ಜುಗಲ್ ಬಂಧಿ ಕೇಳಿಸಿಕೊಂಡಿದ್ದ ಉನ್ನತ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮಾತನಾಡಿ ವೈದ್ಯರು ಜನರ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಬಾರದು. ರೋಗಿಗಳನ್ನು ದಯೆ, ಪ್ರೀತಿ ವಾತ್ಸಲ್ಯದಿಂದ ಕಾಣಬೇಕು.
PSI Scam ಪ್ರಿಯಾಂಕ್ ಖರ್ಗೆ ಹೊಸ ಬಾಂಬ್, ಪಿಎಸ್ಐ ಹಗರಣದಲ್ಲಿ ಗೃಹ ಸಚಿವರು ಶಾಮೀಲು!
ತಾವು ಚಿಕ್ಕಬಳ್ಳಾಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಲು ಷರತ್ತು ವಿಧಿಸಿದ್ದೆ. ಅದನ್ನು ಅಂದಿನ ಸಿಎಂ ಬಿಎಸ್‌ವೈ ಒಂದೇ ತಿಂಗಳಲ್ಲಿ ಈಡೇರಿಸಿ ನಂತರ ಅದೇ ಖಾತೆಗೆ ನನ್ನನ್ನು ಮಂತ್ರಿಯನ್ನಾಗಿಸಿದ್ದರು. ಅವರ ಋಣವನ್ನು ಎಂದಿಗೂ ಮರೆಯೊಲ್ಲವೆಂದಿದ್ದು ವಿಶೇಷವಾಗಿತ್ತು. ಒಟ್ಟಿನಲ್ಲಿ ಶಿವಮೊಗ್ಗದ ಸರ್ಕಾರಿ ಅವ್ಯವಸ್ಥೆಯ ಕುರಿತು ವೈದ್ಯರು ಮತ್ತು ಸಾರ್ವಜನಿಕರ ಎದುರೇ ಬಹಿರಂಗ ಚರ್ಚೆ ನಡೆದಿದ್ದು ಕಾಯಕಲ್ಪಕ್ಕೆ ಮುನ್ನುಡಿ ಬರೆದಿತೆ ಕಾದು ನೋಡಬೇಕಿದೆ.