Asianet Suvarna News Asianet Suvarna News

ಹೊಸಪೇಟೆ: ಪುನೀತ್‌ ಪ್ರತಿಮೆ ನಿರ್ಮಾಣಕ್ಕೆ ಸಚಿವ ಆನಂದ್‌ ಸಿಂಗ್‌ ಸಂಕಲ್ಪ

*  ವಿಜಯನಗರದಲ್ಲಿ ಪುನೀತ್‌ ಪ್ರತಿಮೆ
*  ಪವರ್‌ ಸ್ಟಾರ್‌ ಹೆಸರಿನಲ್ಲಿ ಉದ್ಯಾನ ನಿರ್ಮಾಣ
*  ಹೊಸಪೇಟೆಯಲ್ಲಿ ಪುನೀತ್‌ ಪ್ರತಿಮೆ ನಿರ್ಮಾಣ ಮಾಡಬೇಕೆಂಬುದು ಅಭಿಮಾನಿಗಳ ಬೇಡಿಕೆ
 

Minister Anand Singh Talks Over Puneeth Rajkumar Statue in Hosapete grg
Author
Bengaluru, First Published Nov 2, 2021, 11:12 AM IST
  • Facebook
  • Twitter
  • Whatsapp

ಹೊಸಪೇಟೆ(ನ.02):  ಪವರ್‌ ಸ್ಟಾರ್‌(Power Star) ಪುನೀತ್‌ ರಾಜಕುಮಾರ ಅವರ ಸ್ಮರಣಾರ್ಥ ವಿಜಯನಗರ ಜಿಲ್ಲಾ ಕೇಂದ್ರದಲ್ಲಿ ಪ್ರತಿಮೆ ನಿರ್ಮಾಣ ಮಾಡಬೇಕೆಂಬ ಪುನೀತ್‌ ಅಭಿಮಾನಿಗಳ ಕೂಗಿಗೆ ಸಚಿವ ಆನಂದ್‌ ಸಿಂಗ್‌(Anand Singh) ಧ್ವನಿಗೂಡಿಸಿದ್ದಾರೆ.

ಹೊಸಪೇಟೆ(Hosapete) ಜನರ ಮೇಲೆ ವಿಶೇಷ ಪ್ರೀತಿ ಹೊಂದಿದ್ದ ನಟ ಪುನೀತ್‌(Puneeth Rajkumar) ಅವರ ಪ್ರತಿಮೆಯನ್ನು(Statue) ನಗರದಲ್ಲಿ ನಿರ್ಮಾಣ ಮಾಡಬೇಕು ಎಂಬ ಅಭಿಮಾನಿಗಳ ಬೇಡಿಕೆ ಈಡೇರಿಸಲು ಸಚಿವ ಆನಂದ ಸಿಂಗ್‌ ಮುಂದಾಗಿದ್ದಾರೆ.

ಪ್ರತಿಮೆ, ಉದ್ಯಾನ ನಿರ್ಮಾಣ:

ಸಚಿವ ಆನಂದ್‌ ಸಿಂಗ್‌ ಅವರು ನಗರದಲ್ಲಿ ನಟ ಪುನೀತ್‌ ರಾಜಕುಮಾರ್‌ ಪ್ರತಿಮೆ ಹಾಗೂ ಉದ್ಯಾನ(Park) ನಿರ್ಮಾಣ ಮಾಡಲು ಸಂಕಲ್ಪ ಮಾಡಿದ್ದಾರೆ. ಇದಕ್ಕಾಗಿ ಸಚಿವರು ಸೂಕ್ತ ಸ್ಥಳಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ನಗರದಲ್ಲಿ ಪುನೀತ್‌ ರಾಜಕುಮಾರ ಉದ್ಯಾನ ನಿರ್ಮಿಸಿ ಪ್ರತಿಮೆ ನಿರ್ಮಾಣ ಮಾಡಿ ಸೂಕ್ತ ನಿರ್ವಹಣೆ ಮಾಡಲು ಸಚಿವರು ಮುಂದಾಗಿದ್ದಾರೆ.

ಹಂಪಿ, ಹೊಸಪೇಟೆ ಪುನೀತ್‌ಗೆ ಪಂಚಪ್ರಾಣ..!

ಮನದಾಳದ ಮಾತು:

ನಗರದಲ್ಲಿ ಪುನೀತ್‌ ಅವರ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಹೊಸಪೇಟೆಯಲ್ಲಿ ಪುನೀತ್‌ ಅವರ ಅಭಿಮಾನಿಗಳು ಅಭಿಯಾನ(Campaign) ನಡೆಸುತ್ತಿದ್ದಾರೆ. ನನ್ನ ಮನದಾಳದ ಮಾತುಗಳನ್ನು ಪುನೀತ್‌ ಅಭಿಮಾನಿಗಳು(Fans) ಹೇಳಿದ್ದಾರೆ. ಅವರ ಬೇಡಿಕೆಯನ್ನು ಶೀಘ್ರ ಈಡೇರಿಸಲಾಗುವುದು ಎಂದು ಸಚಿವ ಆನಂದ್‌ ಸಿಂಗ್‌ ಹೇಳಿದರು.

ಅವಿನಾಭಾವ ನಂಟು:

ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ ಅವರು ಹಂಪಿ(Hampi) ಹಾಗೂ ಹೊಸಪೇಟೆ ಜತೆಗೆ ಅವಿನಾಭಾವ ನಂಟು ಹೊಂದಿರುವ ಹಿನ್ನೆಲೆ ವಿಜಯನಗರ(Vijayanagara) ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಅವರ ಪ್ರತಿಮೆ ನಿರ್ಮಿಸಬೇಕು. ಜತೆಗೆ ನಗರದ ಪ್ರಮುಖ ವೃತ್ತಯೊಂದಕ್ಕೆ(Circle) ಅವರ ಹೆಸರಿಡಬೇಕು ಎಂಬ ಕೂಗು ಅಭಿಮಾನಿ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ.

ಪುನೀತ್‌ ರಾಜಕುಮಾರ ಅವರು ಹೊಸಪೇಟೆ ಭಾಗದ ಅಭಿಮಾನಿಗಳ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದರು. ವರನಟ ಡಾ. ರಾಜ್‌ಕುಮಾರ(Dr Rajkumar) ಕಾಲದಿಂದಲೂ ಹೊಸಪೇಟೆ ಜನತೆ ಹಾಗೂ ರಾಜ್‌ ಕುಟುಂಬದ(Raj Family) ನಡುವೆ ಉತ್ತಮ ಒಡನಾಟ ಇದೆ. ಹಾಗಾಗಿ ಅದೇ ಬಾಂಧವ್ಯವನ್ನು ಪುನೀತ್‌ ರಾಜಕುಮಾರ ಅವರು ಮುಂದುವರಿಸಿದ್ದರು. ಶಿವಣ್ಣ(Shivanna) ಕೂಡ ಹೊಸಪೇಟೆ ಭಾಗದ ಅಭಿಮಾನಿಗಳು ಎಂದರೆ ಸಾಕು, ಬಹಳ ಗೌರವ ನೀಡುತ್ತಾರೆ. ಪುನೀತ್‌ ಅವರು ಹೊಸಪೇಟೆ ಕ್ರೀಡಾಂಗಣದಲ್ಲಿ ದೊಡ್ಮನೆ ಹುಡುಗ ಚಿತ್ರದ ಹಾಡಿನ ಚಿತ್ರೀಕರಣ(Shooting) ಮಾಡಿದ್ದರು.

ಅಲ್ಲದೇ, ಅವರ ಜೇಮ್ಸ್‌(James) ಚಿತ್ರದ ನಿರ್ಮಾಪಕರಾಗಿರುವ(Producer) ಕಿಶೋರ ಪತ್ತಿಕೊಂಡ(Kishore Pattikond) ಅವರು ಹೊಸಪೇಟೆಯವರೇ ಆಗಿದ್ದಾರೆ. ಹೊಸಪೇಟೆ ಭಾಗದ ಅಭಿಮಾನಿಗಳು ಎಂದರೆ ಬಲು ಇಷ್ಟಪಡುತ್ತಿದ್ದ ಪುನೀತ್‌ ಅವರು ಸರಳ ವ್ಯಕ್ತಿತ್ವ ಹೊಂದಿದ್ದರು. ಅವರು ಅಭಿಮಾನಿಗಳ ಮನೆಗಳಿಗೆ ಬಂದು ಹೋಗಿದ್ದಾರೆ. ಇನ್ನೂ ರಣವಿಕ್ರಮ, ಜೇಮ್ಸ್‌ ಚಿತ್ರದ ಶೂಟಿಂಗ್‌ ಕೂಡ ಹಂಪಿ, ಹೊಸಪೇಟೆ ಭಾಗದಲ್ಲಿ ನಡೆದಿದೆ. ಇನ್ನೂ ಶಿವಣ್ಣ ಅಭಿನಯದ ಟಗರು ಚಿತ್ರದ ಶೂಟಿಂಗ್‌ ಕೂಡ ಹೊಸಪೇಟೆಯಲ್ಲೇ ನಡೆದಿದೆ. ಇನ್ನೂ ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಹೊಸಪೇಟೆಯಲ್ಲೇ ನಡೆದಿದೆ. ಯುವರತ್ನ ಚಿತ್ರ ಏಕಕಾಲಕ್ಕೆ ನಾಲ್ಕು ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಿ ಯಶಸ್ವಿ ಕಂಡಿತ್ತು.

ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರ ಪ್ರತಿಮೆಯನ್ನು ಹೊಸಪೇಟೆಯಲ್ಲಿ ನಿರ್ಮಾಣ ಮಾಡಬೇಕು ಎಂಬುದು ಅಭಿಮಾನಿಗಳ ಬೇಡಿಕೆಯಾಗಿದೆ. ಇದು ನನ್ನ ಮನದಾಳದ ಮಾತು ಆಗಿದೆ. ಪುನೀತ್‌ ಅವರ ಸ್ಮರಣಾರ್ಥ ನಗರದಲ್ಲಿ ಅವರ ಪ್ರತಿಮೆ ಹಾಗೂ ಅವರ ಹೆಸರಿನಲ್ಲಿ ಸುಂದರ ಉದ್ಯಾನ ನಿರ್ಮಾಣ ಮಾಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ತಿಳಿಸಿದ್ದಾರೆ. 
 

Follow Us:
Download App:
  • android
  • ios