ಜಿಂದಾಲ್‌ಗೆ ಭೂಮಿ ನೀಡಿದ್ದನ್ನು ಸಂಪುಟ ಸಭೆಯಲ್ಲೇ ವಿರೋಧಿಸುವೆ: ಆನಂದ ಸಿಂಗ್
3500 ಕೋಟಿ ಬೆಲೆ ಬಾಳುವ 3665 ಎಕರೆ ಭೂಮಿ ಬರೀ 50 ರಿಂದ 60 ಕೋಟಿಗೆ ಮಾರಲಾಗಿದೆ| ಜಿಂದಾಲ್‌ಗೆ ಪರಾಭಾರೆ ಮಾಡುವುದಕ್ಕೆ ನನ್ನ ಸಮ್ಮತವಿಲ್ಲ. ನನಗಷ್ಟೇ ಅಲ್ಲ, ಯಾರಿಗೂಸ ಸರಿ ಎನಿಸುವುದಿಲ್ಲ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೂ ತರುವೆ| ಸಿಎಂ ಏನು ಹೇಳುತ್ತಾರೋ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳುವೆ: ಸಿಂಗ್|
ಬಳ್ಳಾರಿ(ಮೇ.01): ಜಿಂದಾಲ್‌ಗೆ ಸರ್ಕಾರಿ ಜಮೀನು ಪರಭಾರೆ ವಿಚಾರದಲ್ಲಿ ನನ್ನ ನಿಲುವು ಬದಲಾಗಿಲ್ಲ. ಈ ಹಿಂದೆ ವಿರೋಧಿಸಿದ್ದೆ. ಈಗಲೂ ವಿರೋಧಿಸುವೆ ಎಂದು ಸಚಿವ ಆನಂದ ಸಿಂಗ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಭೂಮಿ ಪರಾಭಾರೆ ವಿಚಾರದಲ್ಲಿ ಸಚಿವ ಸಂಪುಟದ ನಿರ್ಧಾರದ ಬಗ್ಗೆ ನನಗೆ ಅಸಮಾಧಾನವಿದೆ. ಮುಂದಿನ ಸಚಿವ ಸಂಪುಟದಲ್ಲಿ ಖಂಡಿತ ನಾನು ಮಾತನಾಡುತ್ತೇನೆ. ಭೂಮಿ ನೀಡಬಾರದು ಎಂದು ವಿರೋಧಿಸುತ್ತೇನೆ ಎಂದರು.
ಏಕಾಏಕಿ ನಿರ್ಧಾರ ಬದಲಿಸಿದ ಬಿಎಸ್‌ವೈ: ಯಡಿಯೂರಪ್ಪ ವಿರುದ್ಧ ಹರಿಹಾಯ್ದ ಪಾಟೀಲ್..!
ಸುಮಾರು 3500 ಕೋಟಿ ಬೆಲೆ ಬಾಳುವ 3665 ಎಕರೆ ಭೂಮಿಯನ್ನು ಬರೀ 50 ರಿಂದ 60 ಕೋಟಿಗೆ ಮಾರಲಾಗಿದೆ. ಜಿಂದಾಲ್‌ಗೆ ಪರಾಭಾರೆ ಮಾಡುವುದಕ್ಕೆ ನನ್ನ ಸಮ್ಮತವಿಲ್ಲ. ನನಗಷ್ಟೇ ಅಲ್ಲ, ಯಾರಿಗೂ ಸರಿ ಎನಿಸುವುದಿಲ್ಲ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೂ ತರುವೆ. ಮುಖ್ಯಮಂತ್ರಿಗಳು ಏನು ಹೇಳುತ್ತಾರೋ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳುವೆ ಎಂದು ತಿಳಿಸಿದ್ದಾರೆ.