ಹಾವೇಣಿ ಆಟ ಮುಂದುವರೆಸಿದ ಚಿನ್ನ, ಬೆಳ್ಳಿ ದರ| ಏರಿಕೆ ಕಂಡಿದ್ದ ಚಿನ್ನದ ಬೆಲೆ ಮತ್ತೆ ಇಳಿಕೆ| ಇಲ್ಲಿದೆ ನೋಡಿ ಸೆ. 28ರ ಚಿನ್ನದ ಮೌಲ್ಯ

ಬೆಂಗಳೂರು(ಸೆ.28): ಕೊರೋನಾತಂಕ ನಡುವೆ ಚಿನ್ನ ಹಾಗೂ ಬೆಳ್ಳಿ ದರ ತಮ್ಮ ಆಟ ಮುಂದುವರೆಸಿವೆ. ಏರಿಕೆ ಇಳಿಕೆ ಎಂದು ಕಣ್ಣಾ ಮುಚ್ಚಾಲೆಯಾಡಿ ಗ್ರಾಹಕರನ್ನು ಗೊಂದಲಕ್ಕೀಡು ಮಾಡುತ್ತಿರುವ ಮೌಲ್ಯ ಇಂದು ಮತ್ತೆ ಇಳಿಕೆ ಹಾದಿ ಹಿಡಿದಿದೆ. 

Add Asianetnews Kannada as a Preferred SourcegooglePreferred

ಚಿನ್ನದ ದರ ಭಾರೀ ಇಳಿಕೆ, ಗ್ರಾಹಕರಿಗೆ ಖುಷಿಯೋ ಖುಷಿ: ಇಲ್ಲಿದೆ ಸೆ. 22ರ ಚಿನ್ನದ ಬೆಲೆ!

ಇಂದು ಸೋಮವಾರ ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರದಲ್ಲಿ 210 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ ಬೆಲೆ 46,900 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 230 ರೂಪಾಯಿ ಇಳಿಕೆ ಕಂಡಿದ್ದು, 51,390 ರೂಪಾಯಿ ಆಗಿದೆ. 

ಆದರೆ ಇತ್ತ ಬೆಳ್ಳಿ ದರದಲ್ಲಿ 1,000 ರೂ.. ಇಳಿಕೆಯಾಗಿದ್ದು, ಒಂದು ಕೆ. ಜಿ ಬೆಳ್ಳಿಯ ಬೆಲೆ 58,000 ರೂ ಆಗಿದೆ.

ಏರಿಕೆ ಕಂಡಿದ್ದ ಚಿನ್ನದ ದರದಲ್ಲಿ ಭಾರಿ ಇಳಿಕೆ, ಇಲ್ಲಿದೆ ಸೆ. 21ರ ಬೆಲೆ!

ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ

ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದೀ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.