Mining Effect ಬಂಟ್ವಾಳ ಕಾರಿಂಜೇಶ್ವರನಿಗೆ ಆಪತ್ತು, ಉರುಳಿಬಿದ್ದ ಬೃಹತ್ ಬಂಡೆ!
ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕಾರಿಂಜೇಶ್ವರನ ಸನ್ನಿದಿಯ ಬಲಭಾಗದಿಂದ ಬೃಹತ್ ಗಾತ್ರದ ಬಂಡೆ ಕಲ್ಲೊಂದು ಉರುಳಿ ಕೆಳಗೆ ಬಿದ್ದಿದೆ. ಘಟನೆಯಿಂದ ಗುಡ್ಡದಲ್ಲಿರುವ ಕೆಲವು ಮರಗಳಿಗೆ ಹಾನಿಯಾಗಿದೆ. ಪರಿಣಾಮವಾಗಿ ಕಾರಿಂಜ ರಸ್ತೆಗೆ ಮರ ಉರುಳಿ ಬಿದ್ದು ಕೆಲ ಹೊತ್ತು ಸಂಚಾರಕ್ಕೆ ಅಡಚಣೆಯಾಗಿತ್ತು.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಮೇ.17): ಮಳೆಗಾಲ ಆರಂಭವಾಗುತ್ತಿದ್ದಂತೆ ದ.ಕ ಜಿಲ್ಲೆಯ ಬಂಟ್ವಾಳ (Bantwal) ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕಾರಿಂಜೇಶ್ವರನ ಸನ್ನಿದಿಯ (Sri Karinjeshwara Temple) ಬಲಭಾಗದಿಂದ ಬೃಹತ್ ಗಾತ್ರದ ಬಂಡೆ ( Giant rock) ಕಲ್ಲೊಂದು ಉರುಳಿ ಕೆಳಗೆ ಬಿದ್ದಿದೆ. ಘಟನೆಯಿಂದ ಕಾರಿಂಜ ರಸ್ತೆಗೆ ಮರ ಉರುಳಿ ಬಿದ್ದು ಕೆಲ ಹೊತ್ತು ಸಂಚಾರಕ್ಕೆ ಅಡಚಣೆಯಾಗಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರ ನೆರವಿನಿಂದ ರಸ್ತೆಯಲ್ಲಿದ್ದ ಮರಗಳನ್ನು ತೆರವು ಮಾಡಲಾಗಿದೆ.
ಇದೇ ಸಂದರ್ಭದಲ್ಲಿ ಗುಡ್ಡದಲ್ಲಿರುವ ಕೆಲವು ಮರಗಳಿಗೆ ಹಾನಿಯಾಗಿದೆ. ಬೆಳಿಗ್ಗೆ ಸುಮಾರು 9 ಗಂಟೆಯ ಬಳಿಕ ಕಾರಿಂಜೇಶ್ವರನ ದೇವಾಲಯದ ಸಮೀಪದಲ್ಲೇ ಇದ್ದ ಆಯತಾಕಾರದ ಬೃಹತ್ ಬಂಡೆ ಕಲ್ಲು ಕೆಳಗೆ ಉರುಳಿ ಕೊಂಡು ಬಂದು ರಸ್ತೆಯ ಬದಿಯಲ್ಲಿ ಸಿಲುಕಿಕೊಂಡು ನಿಂತಿದೆ. ಕಲ್ಲು ಬಂಡೆ ಉರುಳಿಕೊಂಡು ಬರುವ ವೇಳೆ ಅನೇಕ ಮರಗಳು ನೆಲಕ್ಕುರಳಿದ್ದು, ಇನ್ನು ಕೆಲವು ಮರಗಳಿಗೆ ಹಾನಿಯಾಗಿದೆ. ಕಳೆದ ವರ್ಷ ಬೇಸಿಗೆ ಕಾಲದಲ್ಲಿ ಕಾರಿಂಜೇಶ್ವರನ ಸನ್ನಿಧಿಯ ಎಡಭಾಗದಲ್ಲಿ ಮಣ್ಣು ಕುಸಿದು ಬಿದ್ದು ಬಳಿಕ ತಡೆಗೋಡೆ ಕಟ್ಟಲಾಗಿತ್ತು.
UDUPI ಒಂದೂವರೆ ವರ್ಷದ ಹಿಂದೆ ಹೂತ ಪಂಜಾಬ್ ವ್ಯಕ್ತಿಯ ಶವ ಹೊರಕ್ಕೆ!
ಕಾರಿಂಜೇಶ್ವರನ ಗುಡ್ಡದಲ್ಲಿ ನಡೆಯುವ ಆಕ್ರಮ ಕಲ್ಲಿನ ಕೋರೆಯ ಪರಿಣಾಮವಾಗಿ ಇಲ್ಲಿ ಕುಸಿತ ಕಂಡಿದೆ ಎಂದು ಆರೋಪಿಸಲಾಗಿದೆ. ಈ ಹಿಂದೆ ಇಲ್ಲಿನ ಕಲ್ಲಿನ ಕೋರೆಗಳನ್ನು ಬಂದ್ ಮಾಡಲು ಹೋರಾಟಗಳು ನಡೆದಿತ್ತು. ಕಲ್ಲಿನ ಕೋರೆಯ ಸ್ಪೋಟದ ಪರಿಣಾಮದಿಂದ ಕಾರಿಂಜೇಶ್ವರನ ಸನ್ನಿಧಿಗೆ ತೊಂದರೆಯಾಗುತ್ತದೆ ಎಂಬುದು ಹಿಂದೂ ಸಂಘಟನೆ ಹೋರಾಟ ಕೈಗೊಂಡಿತ್ತು. ಆದರೆ ಮತ್ತೆ ಕಾರಿಂಜೇಶ್ವರನ ಸನ್ನಿಧಿಯಲ್ಲಿ ಕಲ್ಲು ಕೆಳಗೆ ಬೀಳುವ ಮೂಲಕ ಅಪಾಯದ ಸಂದೇಶ ನೀಡಿದೆ.
ಇಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲಿನ ಕೋರೆಯ ಸ್ಪೋಟದ ಪರಿಣಾಮವಾಗಿ ಗುಡ್ಡದಲ್ಲಿ ಬಿರುಕಿನ ಸಮಸ್ಯೆ ಉಂಟಾಗಿರಬಹುದು. ಸ್ಪೋಟದ ಪರಿಣಾಮವಾಗಿ ಕಳೆದ ಬಾರಿ ಕಾರಿಂಜೇಶ್ವರನ ಎಡಭಾಗದಲ್ಲಿ ಜರಿದುಬಿದ್ದು ಹಾನಿಯಾಗಿತ್ತು. ಆ ಬಳಿಕ ಈ ಬಾರಿ ಮೇಲಿನಿಂದ ಮತ್ತೊಂದು ಕಲ್ಲು ಬೀಳುವ ಮೂಲಕ ಕಲ್ಲಿನ ಸ್ಫೋಟದ ಪರಿಣಾಮ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
INDIAN ARMY RECRUITMENT 2022: ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್‌ಗಳಿಗೆ ಅಧಿಸೂಚನೆ
ವರ್ಷದ ಹಿಂದೆಯೇ ಎಚ್ಚರಿಸಿತ್ತು ಏಷ್ಯಾನೆಟ್ ಸುವರ್ಣ ನ್ಯೂಸ್!
ಬಂಟ್ವಾಳದ ಕಾರಿಂಜೇಶ್ವರ ದೇವಸ್ಥಾನ ಕಲ್ಲು ಬಂಡೆಗಳ ಮೇಲಿರುವ ಇತಿಹಾಸ ಪ್ರಸಿದ್ದ ಶಿವನ ಕ್ಷೇತ್ರ. ಸಮುದ್ರ ಮಟ್ಟದಿಂದ 1500 ಅಡಿಗಳ ಮೇಲಿರುವ ಆ ದೇವಸ್ಥಾನದ ಬುಡ ಅಲ್ಲಾಡಿಸಲು ಮೈನಿಂಗ್ ಮಾಫಿಯಾ ಮುಂದಾಗಿದ್ದ ಬಗ್ಗೆ ವರ್ಷದ ಹಿಂದೆಯೇ ಏಷ್ಯಾನೆಟ್ ಸುವರ್ಣ ನ್ಯೂಸ್ ಗ್ರೌಂಡ್ ರಿಪೋರ್ಟ್ ಮಾಡಿತ್ತು. ಈ ಪೌರಾಣಿಕ ಶಿವ ಕ್ಷೇತ್ರಕ್ಕೆ ತನ್ನದೆ ಆದ ಐತಿಹ್ಯವಿದ್ದು, ದೇವಸ್ಥಾನಕ್ಕೆ ತೆರಳಲು ಬರೊಬ್ಬರಿ 355 ಮೆಟ್ಟಿಲು ಹತ್ತಿ ಬಳಿಕ ಶಿವ ದರ್ಶನ ಮಾಡಬೇಕು.
ಇನ್ನು ಇಲ್ಲಿನ ಕಲ್ಯಾಣಿ ಕೆರೆ ಮತ್ತು ಅರಣ್ಯದ ಸೊಬಗು ಈ ದೇವಸ್ಥಾನದ ಪಾವಿತ್ರತೆಯನ್ನು ಹೆಚ್ಚಿಸಿದೆ. ಇನ್ನು ಕರಾವಳಿ ಭಾಗದಲ್ಲಿ ಈ ದೇವಸ್ಥಾನಕ್ಕೆ ವಿಶೇಷ ಮನ್ನಣೆಯಿದ್ದು, ಆಟಿ ಮಾಸದಲ್ಲಿ ಇಲ್ಲಿಗೆ ಬಂದು ಪುಣ್ಯಸ್ನಾನ ಮಾಡಿ ಆಟಿ ಅಮವಾಸ್ಯೆ ಕಷಾಯ ಕುಡಿಯೋದು ವಾಡಿಕೆಯಾಗಿದೆ. ಇನ್ನು ಇಂತಹ ಕ್ಷೇತ್ರದ ತಪ್ಪಿಲಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಇದು ಕ್ಷೇತ್ರದಲ್ಲಿರೊ ದೇವಸ್ಥಾನಕ್ಕೆ ಧಕ್ಕೆ ತರುತ್ತಿದೆ ಅನ್ನೋ ದೂರಿನ ಬಗ್ಗೆ ಸುವರ್ಣ ನ್ಯೂಸ್ ಸುದ್ದಿ ಪ್ರಸಾರ ಮಾಡಿತ್ತು.
ಈ ದೇವಸ್ಥಾನದ ಬುಡದಲ್ಲೇ ಭಾರೀ ಪ್ರಮಾಣದ ಸ್ಟೋಟಕ ಸಂಗ್ರಹ ಮಾಡಲಾಗಿದ್ದು, ಪೌರಾಣಿಕ ಶಿವ ಕ್ಷೇತ್ರದ ಬುಡದಲ್ಲೇ ಡೈನಾಮೆಟ್ ಇಟ್ಟು ಬಂಡೆ ಸ್ಟೋಟಿಸಲಾಗ್ತಿತ್ತು. ಇನ್ನು ದೇವಸ್ಥಾನದ ಗೋಮಾಳ ಜಾಗವನ್ನು ಅತಿಕ್ರಮಿಸಿ ಅಲ್ಲಿ ಅಕ್ರಮ ಗಣಿಗಾರಿಕೆಯಿಂದ ದೇವಸ್ಥಾನಕ್ಕೆ ಧಕ್ಕೆಯಾಗುತ್ತಿದೆ. ಕಲ್ಲು ಗಣಿಗಾರಿಕೆ ಸ್ಟೋಟಕ್ಕೆ ಹತ್ತಾರು ಮನೆಗಳಲ್ಲಿ ಬಿರುಕು ಬಿಟ್ಟಿದೆ. ಈ ಬಗ್ಗೆ ಹಿಂದೂ ಸಂಘಟನೆಗಳು ಕೂಡ ಎಚ್ಚೆತ್ತು ನಿರಂತರ ಪ್ರತಿಭಟನೆ ನಡೆಸಿದ ಪರಿಣಾಮ ಸದ್ಯ ಸುತ್ತಲಿನ ಗಣಿಗಾರಿಕೆ ತಾತ್ಕಾಲಿಕ ಸ್ಥಗಿತವಾಗಿದೆ. ಆದರೆ ಈ ಹಿಂದೆ ನಡೆದ ಗಣಿ ಅಕ್ರಮದ ಪರಿಣಾಮ ದೇವಸ್ಥಾನ ಅಪಾಯಕ್ಕೆ ಸಿಲುಕಿದ್ದು, ಸದ್ಯ ಬಂಡೆಗಲ್ಲು ಉರುಳುವ ಮೂಲಕ ಅಪಾಯದ ಗಂಟೆ ಬಾರಿಸಿದೆ.