Indian Army Recruitment 2022: ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್‌ಗಳಿಗೆ ಅಧಿಸೂಚನೆ

ಭಾರತೀಯ ಸೇನೆಯ 136ನೇ ಬ್ಯಾಚ್‌ ನ ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್‌ಗಳಿಗೆ  ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಜಿ ಪ್ರಕ್ರಿಯೆಯು ಮೇ 11, 2022 ರಂದು ಆರಂಭವಾಗಲಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 9, 2022 ಆಗಿದೆ.

Indian Army Recruitment 2022 notification for  Technical Graduate Course gow

ಬೆಂಗಳೂರು (ಮೇ.17): ಭಾರತೀಯ ಸೇನೆಯು (Indian Army) ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್‌ಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.  136ನೇ ಬ್ಯಾಚ್‌ ನ ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್‌ಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದೆ.  ಒಟ್ಟು 40 ವಿವಿಧ ಹುದ್ದೆಗಳಿಗೆ  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 9, 2022 ಆಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್, joinindianarmy.nic.in ಮೂಲಕ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಹೊರತು ಬೇರೆ ಯಾವುದೇ ಮಾದರಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. 136ನೇ ಬ್ಯಾಚ್‌ ನ ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್‌ 2023ನೇ ಇಸವಿಯ ಜನವರಿಯಲ್ಲಿ ಪ್ರಾರಂಭವಾಗಲಿದೆ. 

136ನೇ ಬ್ಯಾಚ್‌ ನ ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್‌ ನಲ್ಲಿ ಯಾವೆಲ್ಲ ವಿಭಾಗಗಳಲ್ಲಿ 40 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.
ಸಿವಿಲ್:  9 ಹುದ್ದೆಗಳು
ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್/ ಕಂಪ್ಯೂಟರ್ ಟೆಕ್ನಾಲಜಿ/ M Sc ಕಂಪ್ಯೂಟರ್ ಸೈನ್ಸ್: 8 ಹುದ್ದೆಗಳು
ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್:  3 ಹುದ್ದೆಗಳು
ಮಾಹಿತಿ ತಂತ್ರಜ್ಞಾನ: 3 ಹುದ್ದೆಗಳು
ವಾಸ್ತುಶಿಲ್ಪ:  1 ಹುದ್ದೆ 
ಯಾಂತ್ರಿಕ:  6 ಹುದ್ದೆಗಳು
ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ: 1 ಹುದ್ದೆ 
ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ: 3 ಹುದ್ದೆಗಳು
ಎಲೆಕ್ಟ್ರಾನಿಕ್ಸ್:  1 ಹುದ್ದೆ 
ಏರೋನಾಟಿಕಲ್/ಏರೋಸ್ಪೇಸ್:  1 ಹುದ್ದೆ 
ಎಲೆಕ್ಟ್ರಾನಿಕ್ಸ್ ಮತ್ತು ಇನ್‌ಸ್ಟ್ರುಮೆಂಟೇಶನ್/ಇನ್‌ಸ್ಟ್ರುಮೆಂಟೇಶನ್:  1 ಹುದ್ದೆ 
ಉತ್ಪಾದನೆ:  1 ಹುದ್ದೆ 
ಕೈಗಾರಿಕಾ/ಕೈಗಾರಿಕಾ/ಉತ್ಪಾದನೆ/ಇಂಡಸ್ಟ್ರಿಯಲ್ ಇಂಜಿನ್ & ಎಂಜಿಟಿ:  1 ಹುದ್ದೆ 
ಆಟೋಮೊಬೈಲ್ ಇಂಜಿನ್:  1 ಹುದ್ದೆ 

CSL Recruitment 2022: ವಿವಿಧ 261 ಹುದ್ದೆಗಳಿಗೆ ಕೊಚ್ಚಿನ್ ಶಿಪ್‌ಯಾರ್ಡ್‌ ನೇಮಕಾತಿ

ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ಸೇನೆಯ 136ನೇ ಬ್ಯಾಚ್‌ ನ ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ  ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಮತ್ತು ಸಂಸ್ಥೆಯಿಂದ  ಇಂಜಿನಿಯರಿಂಗ್ ಪದವಿ  ವಿದ್ಯಾರ್ಹತೆ ಪಡೆದಿರಬೇಕು.

ವಯೋಮಿತಿ: ಭಾರತೀಯ ಸೇನೆಯ 136ನೇ ಬ್ಯಾಚ್‌ ನ ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ  ಅಭ್ಯರ್ಥಿಗಳು  ಜನವರಿ 02, 1996  ರಿಂದ ಜನವರಿ 01, 2003 ರ ನಡುವೆ ಜನಿಸಿದ್ದರೆ ಅರ್ಜಿ ಸಲ್ಲಿಸಬಹುದು. ಅಂದರೆ ಅಭ್ಯರ್ಥಿಗಳು ಕನಿಷ್ಠ 20  ರಿಂದ ಗರಿಷ್ಠ 27 ವರ್ಷ ವರ್ಷದ ಒಳಗಿರಬೇಕು.

ಭಾರತೀಯ ಸೇನೆಯ 136ನೇ ಬ್ಯಾಚ್‌ ನ ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಬೇಕಾದ ಅಗತ್ಯ ದಾಖಲೆಗಳು
10ನೇ ತರಗತಿ ಅಂಕಪಟ್ಟಿ
ಆಧಾರ್ ಕಾರ್ಡ್
ಇಂಜಿನಿಯರಿಂಗ್ ಪದವಿ ಪಾಸ್ ಪ್ರಮಾಣ ಪತ್ರ
ಸ್ಕ್ಯಾನ್‌ ಮಾಡಿದ ಭಾವಚಿತ್ರ
ಸ್ಕ್ಯಾನ್ ಮಾಡಿದ ಸಹಿ 

BECIL RECRUITMENT 2022: ಖಾಲಿ ಇರುವ 86 ಹುದ್ದೆಗಳಿಗೆ ಅರ್ಜಿ ಆಹ್ವಾನ 

BSF ಖಾಲಿ ಇರುವ 90 ಹುದ್ದೆಗಳಿಗೆ ನೇಮಕಾತಿ: ದೇಶದ ಪ್ರಮುಖ ಸಶಸ್ತ್ರ ಪಡೆಯಾಗಿರುವ ಗಡಿ ಭದ್ರತಾ ಪಡೆ (Border Security Force- BSF) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ (Recruitment ) ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಬಗ್ಗೆ ಅಧಿಸೂಚನೆ ಹೊರಡಿಸಿರುವ ಬಿಎಸ್‌ಎಫ್  ಇನ್ಸ್​ಪೆಕ್ಟರ್ ​(Inspector), ಸಬ್ ಇನ್ಸ್ ಪೆಕ್ಟರ್​ (Sub Inspector) ಹೀಗೆ ಒಟ್ಟು 90 ಹುದ್ದೆಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ  ಅರ್ಜಿ ಸಲ್ಲಿಸುವಂತೆ ಕೋರಿದೆ.    ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 8  ಕೊನೆಯ ದಿನಾಂಕವಾಗಿದೆ.  ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ತಾಣ https://bsf.gov.in/Home ಗೆ ಭೇಟಿ ನೀಡಿ.

ಶೈಕ್ಷಣಿಕ ವಿದ್ಯಾರ್ಹತೆ: ದೇಶದ ಪ್ರಮುಖ ಸಶಸ್ತ್ರ ಪಡೆಯಾಗಿರುವ ಗಡಿ ಭದ್ರತಾ ಪಡೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು. 
ಇನ್ಸ್‌ಪೆಕ್ಟರ್ (Architect -ಆರ್ಕಿಟೆಕ್ಟ್) ಹುದ್ದೆಗೆ ಆರ್ಕಿಟೆಕ್ಚರ್‌ನಲ್ಲಿ ಪದವಿ ಪಡೆದಿರಬೇಕು. ಕೌನ್ಸಿಲ್ ಆಫ್ ಆರ್ಕಿಟೆಕ್ಚರ್‌ನಲ್ಲಿ (council of Architecture) ಹೆಸರು ನೋಂದಾಯಿಸಿರಬೇಕು.
ಸಬ್ ಇನ್‌ಸ್ಪೆಕ್ಟರ್ (ವರ್ಕ್ಸ್) ಹುದ್ದೆಗೆ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಮೂರು ವರ್ಷಗಳ ಡಿಪ್ಲೊಮಾ ಮಾಡಿರಬೇಕು.
ಜೂನಿಯರ್ ಇಂಜಿನಿಯರ್/ ಸಬ್ ಇನ್ಸ್‌ಪೆಕ್ಟರ್ (ಎಲೆಕ್ಟ್ರಿಕಲ್) ಹುದ್ದೆಗೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಮೂರು ವರ್ಷಗಳ ಡಿಪ್ಲೊಮಾ ಮಾಡಿರಬೇಕು.

Latest Videos
Follow Us:
Download App:
  • android
  • ios