ಮಡಿಕೇರಿ(ಜ.12): ನಗರದಲ್ಲಿ ನಿರ್ಮಾಣವಾಗುತ್ತಿರುವ ಜನರಲ್‌ ತಿಮ್ಮಯ್ಯ ಮ್ಯೂಸಿಯಂಗೆ ಮಿಗ್‌- 20 ಯುದ್ಧ ವಿಮಾನ ಆಗಮಿಸಿದೆ. ಏರ್‌ ಮಾರ್ಷಲ್‌ ನಂದಾ ಕಾರ್ಯಪ್ಪ ಪ್ರಯತ್ನದ ಫಲವಾಗಿ ಇಂಡಿಯನ್‌ ಏರ್‌ ಫೋರ್ಸ್‌ ಉಚಿತವಾಗಿ ಯುದ್ಧ ವಿಮಾನವನ್ನು ಮಡಿಕೇರಿಗೆ ಕಳುಹಿಸಿಕೊಟ್ಟಿದ್ದಾರೆ.

ಉತ್ತರ ಪ್ರದೇಶದಿಂದ ಜ. 5ರಂದು ವಿಮಾನವನ್ನು ಹೊತ್ತ ಲಾರಿ ಹೊರಟು ಶುಕ್ರವಾರ ಸಂಜೆ ಮಡಿಕೇರಿ ತಲುಪಿದೆ. ಈ ಬಗ್ಗೆ ಫೀ. ಮಾ. ಎಂ. ಕಾರ್ಯಪ್ಪ ಹಾಗೂ ಜ. ತಿಮ್ಮಯ್ಯ ಫಾರಂನ ಅಧ್ಯಕ್ಷ ಕರ್ನಲ್‌ ಸುಬ್ಬಯ್ಯ ಪ್ರತಿಕ್ರಿಯಿಸಿದ್ದಾರೆ.

ಉಗ್ರರ ಜೊತೆ ಸಂಪರ್ಕ ಹೊಂದಿದ್ದ ಗ್ಯಾಂಗ್‌ಸ್ಟರ್‌ ಪರಾರಿ: ಮಂಗಳೂರಲ್ಲಿ ಹೈಅಲರ್ಟ್‌

ಏರ್‌ ಮಾರ್ಷಲ್‌ ನಂದಾ ಕಾರ್ಯಪ್ಪ ಹಾಗೂ ಫಾರಂ ವತಿಯಿಂದ ಜ. ತಿಮ್ಮಯ್ಯ ಮ್ಯೂಸಿಯಂಗೆ ಯುದ್ಧ ವಿಮಾನ ಕಳುಹಿಸಿಕೊಡುವಂತೆ ಸೇನಾ ಮುಖ್ಯಸ್ಥರಿಗೆ ಪತ್ರ ಕಳುಹಿಸಲಾಗಿತ್ತು. ಈ ಹಿಂದೆ ಜಿಲ್ಲೆಗೆ ನಿರ್ಮಲಾ ಸೀತಾರಾಮನ್‌ ಅವರು ಬಂದಿದ್ದಾಗ ಅವರಿಗೂ ಮನವಿ ಪತ್ರ ನೀಡಲಾಗಿತ್ತು. ಅದರಂತೆ ಮ್ಯೂಸಿಯಂಗೆ ಈಗ ಯುದ್ಧ ವಿಮಾನ ಆಗಮಿಸಿದೆ ಎಂದು ತಿಳಿಸಿದ್ದಾರೆ.

ಪೊಲೀಸರಿಗೆ ಆತಂಕ ತಂದ ‘ಪೊಲೀಸ್‌’ ನಾಮಫಲಕ!