Asianet Suvarna News Asianet Suvarna News

ಉಗ್ರರ ಜೊತೆ ಸಂಪರ್ಕ ಹೊಂದಿದ್ದ ಗ್ಯಾಂಗ್‌ಸ್ಟರ್‌ ಪರಾರಿ: ಮಂಗಳೂರಲ್ಲಿ ಹೈಅಲರ್ಟ್‌

ಉಗ್ರರ ಜೊತೆ ಸಂಪರ್ಕ ಹೊಂದಿದ್ದ ಗ್ಯಾಂಗ್‌ಸ್ಟರ್‌ ತಮಿಳುನಾಡಿನಲ್ಲಿ ತಪ್ಪಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿಯೂ ಹೈ ಅಲರ್ಟ್ ಘೋಷಿಸಲಾಗಿದೆ. ಕನ್ಯಾಕುಮಾರಿ ನಿವಾಸಿಗಳಾಗಿರುವ ಈ ಇಬ್ಬರು ಗ್ಯಾಂಗ್‌ಸ್ಟರ್‌ಗಳು ತಮಿಳುನಾಡಿನ ಕಾಲಿಕ್ಕವಿಲೈ ಪೊಲೀಸ್‌ ಠಾಣೆಯ ಎಎಸ್‌ಐ ವಿಲ್ಸನ್‌ ಅವರನ್ನು ಮಾರ್ತಾಂಡಂ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದಾಗ ಶೂಟೌಟ್‌ ಮಾಡಿ ಕೊಲೆಗೈದಿದ್ದರು ಎಂದು ಆರೋಪಿಸಲಾಗಿದೆ.

 

Gangster who had contact with terrorists escaped high alert in mangalore
Author
Bangalore, First Published Jan 12, 2020, 12:43 PM IST

ಮಂಗಳೂರು(ಜ.12): ಉಗ್ರರ ಜೊತೆ ಸಂಪರ್ಕ ಹೊಂದಿದ್ದಾನೆ ಎನ್ನಲಾದ ಹಾಗೂ ಬಾಂಬ್‌ ತಯಾರಿಕೆಯಲ್ಲಿ ಪಳಗಿದ ಹಾಗೂ ಪೊಲೀಸ್‌ ಹಂತಕರಾದ ಇಬ್ಬರು ಗ್ಯಾಂಗ್‌ಸ್ಟರ್‌ಗಳು ತಮಿಳುನಾಡಿನಿಂದ ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ ಕೇರಳದಲ್ಲಿ ಹೈ ಅಲರ್ಟ್‌ ಘೋಷಿಸಿದ್ದಾರೆ. ಕರ್ನಾಟಕದ ಮಂಗಳೂರಿನಲ್ಲಿ ಕೂಡಾ ಈ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕನ್ಯಾಕುಮಾರಿ ನಿವಾಸಿಗಳಾಗಿರುವ ಈ ಇಬ್ಬರು ಗ್ಯಾಂಗ್‌ಸ್ಟರ್‌ಗಳು ತಮಿಳುನಾಡಿನ ಕಾಲಿಕ್ಕವಿಲೈ ಪೊಲೀಸ್‌ ಠಾಣೆಯ ಎಎಸ್‌ಐ ವಿಲ್ಸನ್‌ ಅವರನ್ನು ಮಾರ್ತಾಂಡಂ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದಾಗ ಶೂಟೌಟ್‌ ಮಾಡಿ ಕೊಲೆಗೈದಿದ್ದರು ಎಂದು ಆರೋಪಿಸಲಾಗಿದೆ.

ಕೋಲಾರ: ನೇಣು ಬಿಗಿದುಕೊಂಡು ನವ ದಂಪತಿ ಆತ್ಮಹತ್ಯೆ.

ಇದೀಗ ತಮಿಳುನಾಡಿನಿಂದ ತಪ್ಪಿಸಿಕೊಂಡ ಅವರು ಕೇರಳ ಅಥವಾ ಕರ್ನಾಟಕ ಪ್ರವೇಶಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮಂಗಳೂರಿನ ಗಡಿ ಭಾಗಗಳಲ್ಲಿ ವಿಶೇಷ ತಪಾಸಣೆ ನಡೆಸಲಾಗುತ್ತಿದ್ದು, ಎಚ್ಚರಿಕೆ ವಹಿಸಲಾಗಿದೆ.

ಕಲ್ಪವೃಕ್ಷದ ಕೆಳಗೆ ಗಾಂಜಾ ಬೆಳೆ: ರೈತ ಅರೆಸ್ಟ್

Follow Us:
Download App:
  • android
  • ios