ಫ್ರೀ ವಿದ್ಯುತ್‌ ತಲೆ​ಬಿಸಿ ಮಧ್ಯೆ ದರ ಏರಿಸಿ ಮೆಸ್ಕಾಂ ಶಾಕ್‌!

 ಪ್ರತಿ ಮನೆಗೆ 200 ಯೂನಿಟ್‌ ವಿದ್ಯುತ್‌ ಫ್ರೀ ನೀಡುವ ‘ಗೃಹಜ್ಯೋತಿ’ ಯೋಜನೆಯನ್ನು ಸರ್ಕಾರ ತನ್ನ ‘ಗ್ಯಾರಂಟಿ’ಯಡಿ ತರಲು ನಿರ್ಧರಿಸಿದ ಬೆನ್ನಲ್ಲೇ, ಮೆಸ್ಕಾಂ ಗ್ರಾಹಕರಿಗೆ ಭರ್ಜರಿ ಶಾಕ್‌ ನೀಡಲು ಮುಂದಾಗಿದೆ.

Mescom hiked rates amid free electricity mangaluru dakshinakannada rav

ಗೋಪಾಲ್‌ ಯಡಗೆರೆ

ಶಿವಮೊಗ್ಗ (ಜೂ.7) : ಪ್ರತಿ ಮನೆಗೆ 200 ಯೂನಿಟ್‌ ವಿದ್ಯುತ್‌ ಫ್ರೀ ನೀಡುವ ‘ಗೃಹಜ್ಯೋತಿ’ ಯೋಜನೆಯನ್ನು ಸರ್ಕಾರ ತನ್ನ ‘ಗ್ಯಾರಂಟಿ’ಯಡಿ ತರಲು ನಿರ್ಧರಿಸಿದ ಬೆನ್ನಲ್ಲೇ, ಮೆಸ್ಕಾಂ ಗ್ರಾಹಕರಿಗೆ ಭರ್ಜರಿ ಶಾಕ್‌ ನೀಡಲು ಮುಂದಾಗಿದೆ.

ಮೆಸ್ಕಾಂ ಏಪ್ರಿಲ್‌ನಿಂದ ಪೂರ್ವಾನ್ವಯ ಆಗುವಂತೆ ತನ್ನ ಹೊಸ ವಿದ್ಯುತ್‌ ದರ ನೀತಿಯನ್ನು ಜಾರಿಗೆ ತಂದಿದ್ದು, ಇದರಲ್ಲಿ ಸಾಕಷ್ಟುಕೈ ಸುಡುವ ಅಂಶಗಳು ಎದ್ದುಕಾಣುತ್ತಿವೆ. ಜೂನ್‌ನಲ್ಲಿ ಬರುವ ಬಿಲ್‌ ‘ಬಿಸಿಬಿಸಿ’ ಆಗಿರುವುದು ‘ಗ್ಯಾರಂಟಿ’!

ಮೀನುಗಾರರು ಸಮುದ್ರ ತೀರಕ್ಕೆ ತೆರಳದಂತೆ ಹವಾಮಾನ ಇಲಾಖೆ ಮುನ್ಸೂಚನೆ

ಈ ಮೊದಲು ಗ್ರಾಮೀಣ ಮತ್ತು ನಗರ ಪ್ರದೇಶದ ಗೃಹ ಬಳಕೆಯ ವಿದ್ಯುತ್‌ಗೆ ಬೇರೆ ಬೇರೆ ದರ ನಿಗದಿಯಾಗಿತ್ತು. ಆದರೀಗ ಎರಡೂ ಕಡೆಗೆ ಒಂದೇ ದರ ನಿಗದಿಯಾಗಿದ್ದು, ಗ್ರಾಮೀಣ ಪ್ರದೇಶಕ್ಕೆ ಪ್ರತಿ ಯೂನಿಟ್‌ಗೆ 30 ಪೈಸೆ ರಿಯಾಯಿತಿ ಪ್ರಕಟಿಸಲಾಗಿದೆ.

ಈ ಹಿಂದೆ ನಿಶ್ಚಿತ ಠೇವಣಿ ಎಂದು 50 ಕಿ. ವ್ಯಾ. ಒಳಗಿನ ಸಂಪರ್ಕಕ್ಕೆ .85 ಇದ್ದರೆ, ಇದೀಗ ಇದನ್ನು .110 ಗೆ ಏರಿಸಲಾಗಿದೆ. 50 ಕಿ.ವ್ಯಾ.ಗಿಂತ ಹೆಚ್ಚಿನ ಸಂಪರ್ಕಕ್ಕೆ .100 ಇದ್ದ ದರವನ್ನು ಇದೀಗ .210ಕ್ಕೆ ಏರಿಸಲಾಗಿದೆ.

ಹೊಸ ಆದೇಶದಲ್ಲಿ ಗೃಹ ಬಳಕೆಯ ವಿದ್ಯುತ್‌ಗೆ 100 ಯೂನಿಟ್‌ವರೆಗಿನ ಬಳಕೆಗೆ ಪ್ರತಿ ಯೂನಿಟ್‌ಗೆ .4.75 ನಿಗದಿಪಡಿಸಲಾಗಿದೆ. ಅಂದರೆ ಪ್ರತಿ ಯೂನಿಟ್‌ಗೆ 75 ಪೈಸೆ ಹೆಚ್ಚಿಸಲಾಗಿದೆ. 100 ಯೂನಿಟ್‌ ದಾಟಿದರೆ ಮೊದಲ ಯೂನಿಟ್‌ನಿಂದ ಸೇರಿ ಪ್ರತಿ ಯೂನಿಟ್‌ಗೆ .7 ನಿಗದಿಯಾಗಿದೆ. ಈ ಮೊದಲು 50 ಯೂನಿಟ್‌ವರೆಗೆ .4, 51-100 ಯೂನಿಟ್‌ವರೆಗೆ .5.30, 101ರಿಂದ 200 ಯೂನಿಟ್‌ವರೆಗೆ .6.85 ಮತ್ತು 200 ಗಿಂತ ಹೆಚ್ಚಿನ ಬಳಕೆಯಾದರೆ .7.70 ದರ ನಿಗದಿಯಾಗಿತ್ತು.

ಇನ್ನು ದೇವಸ್ಥಾನ, ಆಸ್ಪತ್ರೆ, ಸರ್ಕಾರಿ ಕಚೇರಿಗಳು, ವೃದ್ಧಾಶ್ರಮ, ಪುನರ್ವಸತಿ ಕೇಂದ್ರಗಳು, ಚಾರಿಟಬಲ್‌ ಸಂಸ್ಥೆಗಳು ಮಠ, ಆಶ್ರಮಗಳು, ಶಿಕ್ಷಣ ಸಂಸ್ಥೆಗಳು, ಮ್ಯುಸಿಯಂಗಳು ಸೇರಿದಂತೆ ಸಾರ್ವಜನಿಕ ಬಳಕೆಯ ಕೇಂದ್ರಗಳಿಗೆ 1 ಕೆವಿಯವರೆಗೆ .100 ಠೇವಣಿ ದರ ನಿಗದಿಪಡಿಸಲಾಗಿದ್ದು, 50 ಕೆವಿ ದಾಟಿದ ಬಳಿಕ .110 ನಿಗದಿಪಡಿಸಲಾಗಿದೆ. 50 ಕೆವಿ ಬಳಿಕ ಪ್ರತಿ ಹೆಚ್ಚುವರಿ ಕೆವಿ ವಿದ್ಯುತ್‌ ಸಂಪರ್ಕಕ್ಕೆ .175 ನಿಶ್ಚಿತ ಠೇವಣಿ ದರ ನಿಗದಿಪಡಿಸಲಾಗಿದೆ. ಈ ಸಂಸ್ಥೆಗಳಿಗೆ 50 ಯೂನಿಟ್‌ವರೆಗೆ ಪ್ರತಿ ಯೂನಿಟ್‌ಗೆ .4.10, 51-100 ಯೂನಿಟ್‌ವರೆಗೆ .5.60, 101-200 ಯೂನಿಟ್‌ವರೆಗೆ .7.15 ಮತ್ತು 200 ಯೂನಿಟ್‌ ದಾಟಿದರೆ ಪ್ರತಿ ಯೂನಿಟ್‌ಗೆ .8.20 ನಿಗದಿಪಡಿಸಲಾಗಿದೆ.

ವಾಣಿಜ್ಯ ಬಳಕೆ ದರ:

50 ಕಿ.ವ್ಯಾ. ವರೆಗಿನ ವಿದ್ಯುತ್‌ ಸಂಪರ್ಕಕ್ಕೆ .200 ಮತ್ತು ಇದಕ್ಕಿಂತ ಹೆಚ್ಚಿನ ವಿದ್ಯುತ್‌ ಸಂಪರ್ಕಕ್ಕೆ .300 ಠೇವಣಿ ನಿಗದಿಪಡಿಸಲಾಗಿದೆ. ಇನ್ನು ವಿದ್ಯುತ್‌ ಬಳಕೆಯ ದರವನ್ನು ಪ್ರತಿ ಯೂನಿಟ್‌ಗೆ ಸಾರಾಸಗಟಾಗಿ .8.50 ಅನ್ನು ಏಕಪ್ರಕಾರವಾಗಿ ನಿಗದಿಪಡಿಸಲಾಗಿದೆ.

ವಿದ್ಯುತ್‌ ಬಿಲ್‌ ಫಿಕ್ಸೆಡ್‌ ಚಾರ್ಜ್‌ ದಿಢೀರ್‌ ಹೆಚ್ಚಳ..!

ಕೈಗಾರಿಕೆ:

100 ಎಚ್‌ಪಿ ಸಂಪರ್ಕಕ್ಕೆ .140 ಠೇವಣಿ ಮತ್ತು 100 ಎಚ್‌ಪಿಗಿಂತ ಅಧಿಕ ಸಂಪರ್ಕಕ್ಕೆ .250 ಠೇವಣಿ ನಿಗದಿಪಡಿಸಲಾಗಿದೆ. ಇನ್ನು ಕೈಗಾರಿಕಾ ಯೂನಿಟ್‌ಗಳು 500 ಯೂನಿಟ್‌ವರೆಗೆ ಪ್ರತಿ ಯೂನಿಟ್‌ಗೆ .6.10 ನೀಡಬೇಕಿದ್ದರೆ, 500 ಯೂನಿಟ್‌ಗೆ ಮೇಲ್ಪಟ್ಟು ಪ್ರತಿ ಯೂನಿಟ್‌ಗೆ .7.10 ರು. ನೀಡಬೇಕಾಗುತ್ತದೆ.

Latest Videos
Follow Us:
Download App:
  • android
  • ios