Belagavi: ಮಿತಿ ಮೀರಿದ ಉದ್ಧಟತನ: ತಾಕತ್ತಿದ್ರೆ MES ನಿಷೇಧಿಸಿ, ಬೊಮ್ಮಾಯಿ ಸರ್ಕಾರಕ್ಕೆ ಮರಾಠಿಗರ ಸವಾಲ್
* ಬೆಳಗಾವಿಯಲ್ಲಿ ಸಭೆ ನಡೆಸಿ ಉದ್ಧಟತನ ಪ್ರದರ್ಶಿಸಿದ ಪುಂಡರು
* ಮಹಾಜನ್ ವರದಿಯನ್ವಯ ಗಡಿ ವಿವಾದ ಇತ್ಯರ್ಥಕ್ಕೆ ಬೇಡಿಕೆ
* ಕನ್ನಡ ಪರ ಸಂಘಟನೆಗಳಿಗೂ ಸಡ್ಡು ಹೊಡೆದ ನಾಡದ್ರೋಹಿಗಳು
ಬೆಳಗಾವಿ(ಜ.05): ಇತ್ತೀಚೆಗೆ ಬೆಳಗಾವಿಯಲ್ಲಿ ಕನ್ನಡಿಗರನ್ನು ಪದೇ ಪದೇ ಕೆಣಕುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯು ಕರ್ನಾಟಕ ಸರ್ಕಾರಕ್ಕೆ(Government of Karnataka) ತಾಕತ್ತಿದ್ದರೆ ಎಂಇಎಸ್ ಸಂಘಟನೆಯನ್ನು ನಿಷೇಧಿಸಲಿ ಎಂದು ಸವಾಲೆಸೆದಿದೆ. ತನ್ಮೂಲಕ, ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆಗಳನ್ನು ನಡೆಸುತ್ತಿರುವ ಕನ್ನಡ ಪರ ಸಂಘಟನೆಗಳಿಗೂ ಸಡ್ಡು ಹೊಡೆದಿದೆ. ಅಲ್ಲದೆ, ಗಡಿ ವಿವಾದದಲ್ಲಿ(Border Dispute) ಮಹಾಜನ್ ಆಯೋಗದ ವರದಿಯೇ ಅಂತಿಮ ಎನ್ನುವ ಕರ್ನಾಟಕ ಸರ್ಕಾರಕ್ಕೆ ತಾಕತ್ತಿದ್ದರೆ ಸುಪ್ರೀಂ ಕೋರ್ಟ್‌ನಲ್ಲಿ ಮಹಾಜನ್ ಆಯೋಗದ ವರದಿ ಅನ್ವಯವೇ ಗಡಿ ವಿವಾದ ಇತ್ಯರ್ಥ ಸಂಬಂಧ ಪ್ರಸ್ತಾಪ ಮಂಡಿಸಬೇಕು ಎಂದೂ ಸವಾಲು ಎಸೆದಿದೆ.
ನಗರದಲ್ಲಿ ಮಂಗಳವಾರ ನಡೆದ ಎಂಇಎಸ್ ಪದಾಧಿಕಾರಿಗಳ ಸಭೆಯಲ್ಲಿ ಎಂಇಎಸ್ ಮುಖಂಡರು, ಮಹಾರಾಷ್ಟ್ರಕ್ಕೆ(Maharashtra) ಒಂದಿಂಚೂ ಭೂಮಿ ನೀಡುವುದಿಲ್ಲ. ಮಹಾಜನ್ ಆಯೋಗದ ವರದಿಗೆ(Mahajan Commission Report) ಬದ್ಧ ಇರುವುದಾಗಿ ಕರ್ನಾಟಕ ಸರ್ಕಾರ ಹೇಳುತ್ತಾ ಬಂದಿದೆ. ಮಹಾಜನ್ ಆಯೋಗದ ವರದಿ ಅನ್ವಯವೇ ಗಡಿ ವಿವಾದವನ್ನು ಇತ್ಯರ್ಥಗೊಳಿಸುವಂತೆ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ(Supreme Court) ಪ್ರಸ್ತಾಪ ಮಂಡಿಸಬೇಕು ಎಂದರು.
Belagavi Violence ಎಂಇಎಸ್ ನಿಷೇಧಿಸದಿದ್ದರೆ ಕರ್ನಾಟಕ ಬಂದ್, ಸರ್ಕಾರಕ್ಕೆ ಡೆಡ್‌ಲೈನ್ ನೀಡಿದ ಕನ್ನಡ ಸಂಘಟನೆ!
ಜ.17ರಂದು ಬೆಳಗಾವಿ ಮತ್ತು ನಿಪ್ಪಾಣಿಯಲ್ಲಿ ಗಡಿ ಹೋರಾಟದಲ್ಲಿ ಮಡಿದ ಹುತಾತ್ಮರಿಗೆ ಗೌರವ ಸಲ್ಲಿಸಲಾಗುತ್ತದೆ ಎಂದು ಹೇಳಿದರು. ಗಡಿ ವಿವಾದದಲ್ಲಿ ಮಹಾಜನ್ ಆಯೋಗದ ವರದಿಯೇ ಅಂತಿಮ ಎಂದು ಕರ್ನಾಟಕ ಸರ್ಕಾರ ಪದೇ ಪದೇ ಹೇಳುತ್ತದೆ. ಸುಪ್ರೀಂಕೋರ್ಟ್‌ನಲ್ಲೂ ಇದೇ ವಾದ ಮಂಡಿಸಲಿ. ಜತೆಗೆ, ಸರ್ಕಾರಕ್ಕೆ ತಾಕತ್ತಿದ್ದರೆ ನಮ್ಮ ಸಂಘಟನೆಯನ್ನು ನಿಷೇಧಿಸಲಿ ಅಂತ ಮಹಾರಾಷ್ಟ್ರ ಏಕೀಕರಣ ಸಮಿತಿ ಹೇಳಿದೆ.
ಬೊಮ್ಮಾಯಿ ಸರ್ಕಾರಕ್ಕೆ ಸವಾಲು ಹಾಕಿದ ಶಿವಸೇನೆ ನಾಯಕ
ಗಡಿ ಜಿಲ್ಲೆ ಬೆಳಗಾವಿಯಲ್ಲಿ (Belagavi) ಎಂಇಎಸ್(MES) ಪುಂಡರ ಪುಂಡಾಟ ಮಿತಿ ಮೀರಿದ್ದು, ಅದನ್ನು ವಿರೋಧಿಸಿ ರಾಜ್ಯದೆಲ್ಲೆಡೆ ಆಕ್ರೋಶದ ಕಟ್ಟೆ ಹೊಡೆದಿದೆ. ಅಲ್ಲದೇ ರಾಜ್ಯದಲ್ಲಿ ಎಂಇಎಸ್ ಬ್ಯಾನ್(MES Ban) ಮಾಡಬೇಕೆಂಬ ಕೂಗು ಜೊರಾಗಿದೆ. ಇದರ ನಡುವೆಯೇ ಶಿವಸೇನೆ (Shiv Sena) ನಾಯಕ ಸಂಜಯ್ ರಾವತ್(Sanjay Raut) ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಸವಾಲು ಹಾಕಿದ್ದರು.
ಕರ್ನಾಟಕದಲ್ಲಿ ಧೈರ್ಯವಿದ್ದರೆ ಎಂಇಎಸ್ ನ್ನು ನಿಷೇಧಿಸಲಿ ಎಂದು ಅವರು ಬೊಮ್ಮಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಈ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದರು.
Karnataka Bandh: ಕರುನಾಡು ಬಂದ್‌ಗೆ ಬೆಳಗಾವಿಯಲ್ಲೇ ಇಲ್ಲ ಬೆಂಬಲ..!
ಶಿವಾಜಿ ಹೆಸರಿನಲ್ಲಿ ಮತ ಕೇಳುವ ಬಿಜೆಪಿ, ಬೆಂಗಳೂರಿನಲ್ಲಿ ಶಿವಾಜಿ ಮೂರ್ತಿಗೆ ಮಸಿ ಬಳಿದರೂ ಮೌನ ವಹಿಸಿದೆ. ಆದರೆ, ಇನ್ನೊಂದೆಡೆ ಮೊಘಲರ ವಿರುದ್ಧ ಶಿವಾಜಿ ಮಹಾರಾಜರ ಹೋರಾಟ ಬಣ್ಣಿಸುತ್ತಿದೆ. ಈಗ ಇಷ್ಟೊಂದು ಅವಮಾನವಾದರೂ ಮೌನ ವಹಿಸಿದೆ. ಕೇಂದ್ರದ ಯಾವೊಬ್ಬ ಬಿಜೆಪಿ ಸಂಸದರೂ ಈ ಕುರಿತು ಮಾತನಾಡುತ್ತಿಲ್ಲ ಎಂದು ಆರೋಪಿಸಿದ್ದರು.
ಕರ್ನಾಟಕದಲ್ಲಿ ಮರಾಠರ ಸೇವೆ ಮಾಡುತ್ತಿರುವ 200ಕ್ಕೂ ಹೆಚ್ಚು ಎಂಇಎಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಆದರೂ ಬಿಜೆಪಿ ಮೌನ ವಹಿಸಿದೆ. ಬಿಜೆಪಿ ನೇತೃತ್ವದ ಸರ್ಕಾರ ಇರುವ ರಾಜ್ಯದಲ್ಲಿ ಇಷ್ಟೆಲ್ಲ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಮೌನ ವಹಿಸಿದೆ ಎಂದು ಆರೋಪಿಸಿದ್ದರು.
ಎಂಇಎಸ್ ಬ್ಯಾನ್ ಮಾಡುವಂತೆ ಆಗ್ರಹ
ಬೆಳಗಾವಿಯಲ್ಲಿ ಎಂಇಎಸ್ ಮೇಲಿಂದ ಮೇಲೆ ಕರ್ನಾಟಕಕ್ಕೆ ಅವಮಾನ ಮಾಡುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಂಇಎಸ್ ಅನ್ನು ನಿಷೇಧಿಸಬೇಕೆಂದು ಕನ್ನಡಪರ ಸಂಘಟನೆಗಳು ಸೇರಿದಂತೆ ಇತರೆ ಸಂಘಗಳು ಆಗ್ರಹಿಸಿವೆ. ಅಲ್ಲದೇ ಎಂಇಎಸ್ ರದ್ದು ಮಾಡುವಂತೆ ಪ್ರತಿಭಟನೆಗಳು ನಡೆಯುತ್ತಲೇ ಇವೆ.