ಮಂಡ್ಯ(ಆ.25): ಮೇಕೆದಾಟು ಆಣೆಕಟ್ಟೆಯೋಜನೆ ಆರಂಭವಾದರೆ ಹಿನ್ನೀರಿನಿಂದ ಪ್ರವಾಸಿ ತಾಣ ಮುತ್ತತ್ತಿ ಹಾಗೂ ಶಿಂಷಾ ಜಲ ವಿದ್ಯುತ್‌ ಉತ್ಪಾದನಾ ಕೇಂದ್ರ ಮುಳುಗಡೆಯಾಗಲಿವೆ. ಈ ಗ್ರಾಮ ಮತ್ತು ಜಲ ವಿದ್ಯುತ್‌ ಘಟಕವನ್ನು ಬೇರೆ ಕಡೆ ಸ್ಥಳಾಂತರ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಶಾಸಕ ಅನ್ನದಾನಿ ಶನಿವಾರ ತಿಳಿಸಿದರು. 

ಮುತ್ತಿತ್ತಿ ಪ್ರವಾಸಿ ತಾಣದ ಅಭಿವೃದ್ಧಿ ಪ್ರವಾಸೋದ್ಯಮ ಇಲಾಖೆ ಬಿಡುಗಡೆ ಮಾಡಿದ್ದ 50 ಲಕ್ಷ ರು. ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಹಲಗೂರಿನಲ್ಲಿ ಮಾತನಾಡಿದ ಶಾಸಕ ಅನ್ನದಾನಿ, ಮುತ್ತತ್ತಿರಾಯನ ಸನ್ನಿಧಿಗೆ ಬರುವ ಭಕ್ತಾದಿಗಳಿಗೆ ಮತ್ತು ಪ್ರವಾಸಿಗರಿಗೆ ಅನುಕೂಲವಾಗಲಿ ಎಂದು ಈ ಗ್ರಾಮವನ್ನು ಅಭಿವೃದ್ಧಿ ಪಡಿಸಲಾಗುವುದು. ಈ ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು ಎಂದರು.

ಯೋಜನೆ ಆರಂಭವಾದ್ರೆ ಜಲ ವಿದ್ಯುತ್ ಉತ್ಪಾದನಾ ಕೇಂದ್ರ ಮುಳುಗಡೆ:

ಮೇಕೆದಾಟು ಯೋಜನೆ ಆರಂಭವಾದರೆ ಇತಿಹಾಸ ಪ್ರಸಿದ್ಧ ಸ್ಥಳ ಮುತ್ತತ್ತಿ ಮತ್ತು ಶಿಂಷಾ ಗ್ರಾಮದಲ್ಲಿರುವ ಏಷ್ಯಾ ಖಂಡದಲ್ಲೇ ಪ್ರಥಮ ಬಾರಿಗೆ ವಿದ್ಯುತ್‌ ಉತ್ಪಾದಿಸಿದ ಕೇಂದ್ರವು ಮುಳುಗಡೆಯಾಗಲಿವೆ.

ಮಂಡ್ಯ: 'ಖಾತೆ ಹಂಚಿಕೆಯಲ್ಲಿ ಯಾವುದೇ ಕಗ್ಗಂಟಿಲ್ಲ'

ಈ ಯೋಜನೆಯಿಂದ ನಾಲ್ಕು ಜಿಲ್ಲೆಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು.ಈ ಯೋಜನೆಯಿಂದ ಅಂತರ್ಜಲವೂ ವೃದ್ಧಿಯಾಗುತ್ತದೆ. 13 ಸಾವಿರ ಕೋಟಿಯಲ್ಲಿ ಈ ಯೋಜನೆ ಕಾರ್ಯ ರೂಪಗೊಳ್ಳುತ್ತದೆ. ಕೇಂದ್ರ ಸರ್ಕಾರದಿಂದ ಕಾಮಗಾರಿಗೆ ಅನುಮೋದನೆ ದೊರೆತ ತಕ್ಷಣ ಕಾಮಗಾರಿ ಪ್ರಾರಂಭವಾಗುತ್ತದೆ ಎಂದರು.

ಹೆಚ್ಚಿನ ಮಂಡ್ಯ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಪವಿತ್ರ ದೇವಸ್ಥಾನವನ್ನು ಬೇರೆ ಕಡೆ ಸ್ಥಾಪಿಸುವುದಕ್ಕಾಗಿ ಈಗಾಗಲೇ ಕಾರ್ಯ ಯೋಜನೆ ರೂಪುಗೊಂಡಿದೆ. ಶಿಂಷಾ ಗ್ರಾಮದಲ್ಲಿರುವ ವಿದ್ಯುತ್‌ ಉತ್ಪಾದನಾ ಕೇಂದ್ರವನ್ನು ಸಹ ಮೇಲ್ಭಾಗಕ್ಕೆ ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.