* ಮೇಕೆದಾಟು ಪಾದಯಾತ್ರೆಗೆ ಶಿವಣ್ಣ ಚಾಲನೆ ನೀಡಲಿದ್ದಾರೆ ಎಂಬ ಮಾತು ಬಂದಿತ್ತು*  ಬೆನ್ನು ನೋವಿನ ಕಾರಣ  ಶಿವಣ್ಣ ಪಾದಯಾತ್ರೆಗೆ ಬರಲಿಲ್ಲ* ಬಿಜೆಪಿ ನಾಯಕರ ಮೇಲೆ ಹರಿಹಾಯ್ದ ಡಿಕೆ ಶಿವಕುಮಾರ್‌* ಟ್ರೋಲ್ ಮಾಡಿದಕ್ಕೆ ಡಿಕೆಶಿ ಕೆಂಡ

ರಾಮ​ನ​ಗ​ರ(ಜ. 11) ಬೆನ್ನು ನೋವಿನ (Back Pain) ಕಾರಣ ಚಿತ್ರನಟ ಶಿವರಾಜ್‌ ಕುಮಾರ್‌ (Shiva Raj Kumar) ಅವರು ಮೇಕೆದಾಟು (Mekedatu Padayatra) ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್‌ (Congress) ಮುಖಂಡ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ. ಶಿವ​ರಾಜ್‌ ಕುಮಾರ್‌ ಯಾವುದೇ ಪಕ್ಷಕ್ಕೆ ಸೀಮಿ​ತ​ರಲ್ಲ. ಅವರು ಯಾತ್ರೆಗೆ ಬರಲು ಹೊರ​ಟಿ​ದ್ದರು. ಆದರೆ, ದಾರಿ ಮಧ್ಯೆ ಅವ​ರಿಗೆ ಬೆನ್ನು ನೋವು ಕಾಣಿ​ಸಿ​ಕೊಂಡಿ​ದ್ದ​ರಿಂದ ವಾಪ​ಸ್ಸಾ​ದರು. ಯಾತ್ರೆಗೆ ಬರದಂತೆ ಅವರ ಮೇಲೆ ಯಾವುದೇ ಒತ್ತಡ ಇರಲಿಲ್ಲ ಎಂದರು.

‘ಡಿಕೆಶಿ ಕುಡಿದಿದ್ದಾರೆ’ ಎಂಬ ಟ್ರೋಲ್‌ಗೆ ಕಿಡಿ: ಬಿಜೆಪಿಯವರು ಇಲ್ಲಿಯವರು ಯಾವ ಪಾದಯಾತ್ರೆಯೂ ಮಾಡಿಲ್ಲ. ಎಲ್‌.ಕೆ. ಅಡ್ವಾಣಿ ಅವರು ರಥಯಾತ್ರೆ ಮಾಡಿರುವುದು ಬಿಟ್ಟರೆ ಪಾದಯಾತ್ರೆ ಮಾಡಿರುವ ಅನುಭವ ಬಿಜೆಪಿಯವರಿಗೆ ಯಾರಿಗೂ ಇಲ್ಲ. ಹೀಗಾಗಿ ಅದರ ಶ್ರಮ ಗೊತ್ತಿಲ್ಲದೆ ನಾನು ಕುಡಿದಿದ್ದೇನೆ ಎಂದು ಟ್ರೋಲ್‌ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ (DK Shivakumar) ಡಿ.ಕೆ. ಶಿವಕುಮಾರ್‌ ಕಿಡಿಕಾರಿದ್ದಾರೆ.

ಪಾದಯಾತ್ರೆಗೆ ಇಳಿದವರ ಮೇಲೆ ಎಫ್ಐಆರ್

ಪಾದಯಾತ್ರೆ ನಡುವೆ ಮಾತನಾಡಿದ ಅವರು, ‘ಜನರ ಮಧ್ಯೆ ನೂಕಾಟದ ವೇಳೆ ಸ್ವಲ್ಪ ಅಲ್ಲಾಡಿದ್ದನ್ನು ಕುಡಿದುಬಿಟ್ಟಿದ್ದೀನಿ ಎಂದು ಟ್ರೋಲ್‌ ಮಾಡಿದ್ದಾರೆ. ಬಿಜೆಪಿಯವರು ಮೊದಲು ಇಂತಹ ನೀಚ ರಾಜಕಾರಣ ಬಿಡಬೇಕು. ನೀವು ಮಾಡಬೇಕಾದ ಕೆಲಸವನ್ನು ನೆನಪಿಸಿ ಕೇಂದ್ರದ ಮೇಲೆ ಒತ್ತಡ ಹಾಕಲು ನಾವು ಜನರಿಗಾಗಿ ನಡೆಯುತ್ತಿದ್ದೇವೆ. ನೀವು ಬದ್ಧತೆ ಮರೆತು ನೀಚ ರಾಜಕೀಯ ಮಾಡಬೇಡಿ’ ಎಂದರು. ‘ಪಾದಯಾತ್ರೆಯಲ್ಲಿ ಜನರು ದಯವಿಟ್ಟು ನನ್ನಿಂದ ದೂರವಿರಿ. ನೀವು ಹತ್ತಿರ ಬಂದು ತಳ್ಳಾಡಿದರೆ ಬಿಜೆಪಿಯವರು ಕುಡಿದಿದ್ದೇನೆ ಎಂದು ಮಾಡುತ್ತಾರೆ. ಹೀಗಾಗಿ ನನ್ನಿಂದ ದೂರ ಇದ್ದು ಸಹಕರಿಸಿ’ ಎಂದು ಜನರಲ್ಲಿ ಮನವಿ ಮಾಡಿದರು.

ಕೋವಿಡ್‌ ಟೆಸ್ಟ್‌ಗೆ ಡಿಕೆಶಿ ತಡೆದಿದ್ದು ಕೆಟ್ಟಸಂಸ್ಕೃತಿ:  ಬೆಂಗಳೂರು: ಆರೋಗ್ಯಾಧಿಕಾರಿಗಳು ಕೋವಿಡ್‌ ಪರೀಕ್ಷೆಗೆ ಬಂದಾಗ ಅವರಿಗೆ ಪರೀಕ್ಷೆ ಮಾಡಲು ಅವಕಾಶ ನೀಡದೆ ಅವರನ್ನು ನಿಂದಿಸಿ ಕಳುಹಿಸಲಾಗಿದೆ. ಇದು ಡಿ.ಕೆ. ಶಿವಕುಮಾರ್‌ ಅವರ ಅವರ ಕೆಟ್ಟಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಆರೋಗ್ಯ ಸಚಿವ ಡಾ

ಕೆ. ಸುಧಾಕರ್‌ ಕಿಡಿಕಾರಿದರು. ‘ಪ್ರಜಾಪ್ರಭುತ್ವದ ಮೂಲ ಆಶಯವನ್ನೇ ಧಿಕ್ಕರಿಸಲಾಗಿದೆ. ರಾಜ್ಯದ ಜನರ ಹಿತ ಕಾಪಾಡುವ ಜವಾಬ್ದಾರಿ ಕೇವಲ ಆಡಳಿತ ಪಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲ. ವಿರೋಧ ಪಕ್ಷಕ್ಕೂ ಅಷ್ಟೆಹೊಣೆ ಇರುವುದರಿಂದ ವಿರೋಧ ಪಕ್ಷದ ನಾಯಕರನ್ನು ಛಾಯಾ ಮುಖ್ಯಮಂತ್ರಿ ಎಂದು ಕರೆಯಲಾಗುತ್ತದೆ, ಆದರೆ ಅವರೇ ಕೋವಿಡ್‌ ನಿಯಮವನ್ನು ಗಾಳಿಗೆ ತೂರಿದ್ದಾರೆ’ ಎಂದು ಡಾ. ಸುಧಾಕರ್‌ ಆರೋಪಿಸಿದರು. ಕೊರೋನಾ ಸೋಂಕಿತರ ಸಂಖ್ಯೆ ಬಿಜೆಪಿ ಸೃಷ್ಟಿಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ. ಅವರ ಪಕ್ಷದ ಅಧ್ಯಕ್ಷರೇ ಕೋವಿಡ್‌ ನಿಯಮ ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ ಎಂದರು.

ಪಾದಯಾತ್ರೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕರ ಮೇಲೆ ಬಿಜೆಪಿ ಕಾನೂನು ಅಸ್ತ್ರ ಪ್ರಯೋಗ ಮಾಡಿದೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಉಮಾಶ್ರೀ ಸೇರಿದಂತೆ ಮೂವತ್ತಕ್ಕೂ ಅಧಿಕ ನಾಯಕರ ಮೇಲೆ ಕೊರೋನಾ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಪ್ರಕರಣ ದಾಖಲಾಗಿದೆ.