ಭಗವದ್ಗೀತೆಯ ಜೀವನಸಾರ, ಹೀಗೆ ಮಾಡಿದರೆ ಮೋಕ್ಷ ಎನ್ನುತ್ತಾನೆ ಕೃಷ್ಣ

ಭಗವದ್ಗೀತೆ ಓದಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ, ಪುಸ್ತಕದ ಗಾತ್ರ, ಸಂಸ್ಕೃತ ಭಾಷೆಯ ಕಾರಣದಿಂದಾಗಿ ಬಹುತೇಕರು ಓದಲು ಹಿಂಜರಿಯುತ್ತಾರೆ. ನಿಮ್ಮಂತವರಿಗೆ ಸುಲಭವಾಗಲೆಂದೇ ಭಗವದ್ಗೀತೆಯ ಸಾರವನ್ನು ಇಲ್ಲಿ ನೀಡಲಾಗಿದೆ. 

Bhagavad Gita Chapters Simplified skr

ಗುಜರಾತ್(Gujarat), ಹಿಮಾಚಲ ಪ್ರದೇಶಗಳ ಶಾಲೆಗಳ ಪಠ್ಯದಲ್ಲಿ ಭಗವದ್ಗೀತೆ(Bhagavad gita) ಅಳವಡಿಸಲಾಗಿದೆ. ಭಗವದ್ಗೀತೆಯು ಬದುಕಿನ ಪಾಠ(Life lesson) ಹೇಳುತ್ತದೆ. ಭಗವದ್ಗೀತೆಯಲ್ಲಿ ಹಿಂದೂಗಳ ಪಾಲಿಗೆ ಜೀವನಸಾರವೇ ಇದೆ. ಸಾಕ್ಷಾತ್ ಕೃಷ್ಣ(Krishna)ನೇ ಜೀವನಪಾಠವನ್ನು, ಬದುಕಿನ ಕುರಿತ ನಮ್ಮೆಲ್ಲ ಸಮಸ್ಯೆಗಳಿಗೆ ಉತ್ತರವನ್ನೂ ನೀಡಿರುವುದೆಂದರೆ ಸಾಮಾನ್ಯವೇ? ಶ್ರೀ ಕೃಷ್ಣನು ಅರ್ಜುನ(Arjun)ನಿಗೆ ಉಪದೇಶ ಮಾಡಿದ, ಗೀತಾ ರೂಪದಲ್ಲಿರುವ ತತ್ವಬೋಧೆಯೇ ಭಗವದ್ಗೀತೆ. ಇದರಲ್ಲಿರುವ 18 ಅಧ್ಯಾಯಗಳ(18 chapters) ಸರಳ ಸಾರಾಂಶ ಇಲ್ಲಿದೆ. 

ಅಧ್ಯಾಯ 1: ಧರ್ಮ(Dharma)ವೇ ದೊಡ್ಡದು
ಯುದ್ಧಕ್ಕಾಗಿ ಬಂಧುಗಳನ್ನೇ ಕೊಲ್ಲಬೇಕಾದ ದುಗುಡ ಹಾಗೂ ಖಿನ್ನತೆ ಅರ್ಜುನನ್ನು ಆವರಿಸಿರುತ್ತದೆ. ಸ್ವಂತದವರನ್ನು ಹೇಗೆ ಕೊಲ್ಲುವುದು? ಇದು ಎಂಥ ಪರಿಸ್ಥಿತಿ ಎಂಬ ಯೋಚನೆ ಅವನ ಕೈ ಕಟ್ಟಿ ಹಾಕಿರುತ್ತದೆ. ಆಗ ಕೃಷ್ಣನು ಧರ್ಮವು ಎಲ್ಲಕ್ಕಿಂತ ದೊಡ್ಡದು. ಭವ ಬಂಧನಗಳ ಬಗ್ಗೆ ಯೋಚಿಸದೆ, ನಿನ್ನ ಕರ್ತವ್ಯವಷ್ಟೇ ಮಾಡು ಎನ್ನುತ್ತಾನೆ. ಆದರೆ, ಅರ್ಜುನನಿಗೆ ಸಮಾಧಾನವಾಗುವುದಿಲ್ಲ. 

ಅಧ್ಯಾಯ 2: ಸುಜ್ಞಾನದಿಂದಲೇ ಪರಿಹಾರ
ಕೃಷ್ಣನು ಅರ್ಜುನನಿಗೆ ಅವನೆಲ್ಲ ಗೊಂದಲ, ದುಃಖದುಮ್ಮಾನ, ಸಮಸ್ಯೆಗಳಿಗೆ ಅಜ್ಞಾನವೇ(ignorance) ಕಾರಣ ಎಂಬುದನ್ನು ತಿಳಿಸುತ್ತಾನೆ. ದೇಹಕ್ಕೆ ಸಾವಿದೆ, ಆದರೆ ಆತ್ಮಕ್ಕೆ ಸಾವಿಲ್ಲ,. ಹಾಗಾಗಿ ಯಾರನ್ನೇ ಸಾಯಿಸಿದರೂ ಅವರ ಆತ್ಮವನ್ನು ನಾಶಪಡಿಸಲಾಗುವುದಿಲ್ಲ. ಯುದ್ಧ ಮಾಡಬೇಕಾದುದು ನಿನ್ನ ಧರ್ಮ. ಹೋರಾಡದೆ ಹೇಡಿಯಾಗಬೇಡ ಎಂದು ತಿಳಿಸುತ್ತಾನೆ. 

ಅಧ್ಯಾಯ 3: ನಿಸ್ವಾರ್ಥದಿಂದ ಬೆಳವಣಿಗೆ
ಯಾರು ಫಲಿತಾಂಶದ ಬಗ್ಗೆ ಯೋಚಿಸದೆ ಎಲ್ಲವನ್ನೂ ದೇವರ ಹೆಗಲಿಗೆ ಹಾಕಿ, ತನ್ನ ಕರ್ತವ್ಯವನ್ನು ತಾನು ನಿಭಾಯಿಸುತ್ತಾನೋ ಅವನು ಗೆಲ್ಲುತ್ತಾನೆ. ನಮ್ಮ ಆಸೆ, ಸಿಟ್ಟು, ಅತಿಯಾದ ಪ್ರೀತಿಯೇ ನಮ್ಮ ನಿಜವಾದ ಶತ್ರುಗಳು(enemies). ಇವು ನಮ್ಮನ್ನು ಸ್ವಾರ್ಥಿಗಳಾಗಿಸಿ ಶಾಂತಿಯನ್ನು ಕಸಿದುಕೊಳ್ಳುತ್ತದೆ ಎಂದು ಕೃಷ್ಣ ತಿಳಿಸುತ್ತಾನೆ.

ಅಧ್ಯಾಯ 4: ಧರ್ಮಸಂಸ್ಥಾಪನೆಗೆ ಅವತಾರ
ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ- ಭೂಮಿಯಲ್ಲಿ ಧರ್ಮವೆಂಬದು ಅವನತಿಯ ಅಂಚನ್ನು ತಲುಪಿದಾಗ ಅದನ್ನು ಮರು ಸ್ಥಾಪಿಸಲು ಭಗವಂತನು ಮತ್ತೆ ಮತ್ತೆ ಅವತಾರಗಳನ್ನು ಎತ್ತುತ್ತಾನೆ. ಭಗವಂತನ ಈ ಜನ್ಮ ರಹಸ್ಯ ಅರಿತವರಿಗೆ ಮೋಕ್ಷ(Moksh) ದೊರೆಯುತ್ತದೆ ಎನ್ನುತ್ತಾನೆ ಶ್ರೀಕೃಷ್ಣ. 

ಈ ರಾಶಿಯ ಹುಡುಗಿಯರು ತಪ್ಪು ಹುಡುಗರ ಆಯ್ಕೆ ಮಾಡೋದೇ ಹೆಚ್ಚು!

ಅಧ್ಯಾಯ 5: ಫಲದಾಸೆ ಇಲ್ಲದೆ ಕರ್ಮ ಮಾಡು
ಎಲ್ಲ ಕೆಲಸವನ್ನೂ ಫಲದ ಆಸೆಯಿಲ್ಲದೆ ಮಾಡಬೇಕು. ಹಾಗಿದ್ದಾಗ ಮಾತ್ರ ಅಹಂಕಾರ(ego)ದಿಂದ ಮುಕ್ತರಾಗಲು ಸಾಧ್ಯ. ಸನ್ಯಾಸಿಯ ಮನಸ್ಥಿತಿ ಹೊಂದಿ ಕರ್ತವ್ಯ ನಿಭಾಯಿಸಬೇಕು ಎನ್ನುತ್ತಾನೆ ಕೃಷ್ಣ. 

ಅಧ್ಯಾಯ 6: ಧ್ಯಾನದಿಂದ ಇಂದ್ರಿಯ ಗೆಲ್ಲಬೇಕು
ಧ್ಯಾನ(meditation)ದಿಂದ ಮನಸ್ಸು, ದೇಹದ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯ. ಧ್ಯಾನಾಭ್ಯಾಸದಿಂದ ಮನಸ್ಸನ್ನು ಪರಮಾತ್ಮನಲ್ಲಿ ಕೂಡಿಸಿಕೊಂಡಿರಬೇಕು. ಆಗ ಇಂದ್ರಿಯಗಳನ್ನು ಗೆಲ್ಲಬಹುದು.

ಅಧ್ಯಾಯ 7: ಜ್ಞಾನೋದಯ(enlightment)
ಧ್ಯಾನದಿಂದ ನಾವು ಯಾರೆಂಬ ಜ್ಞಾನೋದಯವಾಗುತ್ತದೆ. ಜ್ಞಾನಿಯು ಭಗವಂತನಲ್ಲಿ ಲೀನನಾಗುತ್ತಾನೆ ಎಂದು ಕೃಷ್ಣ ವಿವರಿಸುತ್ತಾನೆ. 

ಅಧ್ಯಾಯ 8: ಪ್ರಯತ್ನ ನಿರಂತರವಾಗಿರಬೇಕು.
ದೇವರ ಧ್ಯಾನ ನಿರಂತರವಾಗಿದ್ದವನಿಗೆ ತನ್ನ ಹುಡುಕಾಟಕ್ಕೆ ಉತ್ತರ ಸಿಕ್ಕೇ ಸಿಗುತ್ತದೆ. ಆದರೆ ಪ್ರಯತ್ನ ನಿರಂತರವಾಗಿರಬೇಕು.

ಅಧ್ಯಾಯ 9: ದೇವರ ಧ್ಯಾನದಿಂದ ನನ್ನ ಸೇರಬಹುದು
ಈ ಜಗತ್ತೇ ನಾನಾಗಿದ್ದೀನಿ. ಎಲ್ಲ ವಸ್ತುಗಳೂ ನನ್ನಲ್ಲಿವೆ. ಆದರೆ, ನಾನು ಯಾವುದರಲ್ಲೂ ಇಲ್ಲ. ಯಾವ ಜನರು ನನ್ನನ್ನು ಸಂಪೂರ್ಣ ನಂಬುತ್ತಾರೋ ಅವರ ಯೋಗಕ್ಷೇಮ ನಾನು ಕಾಯುತ್ತೇನೆ ಎನ್ನುತ್ತಾನೆ ಶ್ರೀಕೃಷ್ಣ. 

ರಾಮನವಮಿಯ ಹೊಸ್ತಿಲಲ್ಲಿ ಈ ಶಕ್ತಿಶಾಲಿ ಮಂತ್ರಗಳು ನಿಮ್ಮ ಬಲ ಹೆಚ್ಚಿಸಲಿವೆ..

ಅಧ್ಯಾಯ 10: ಕರ್ಮಕ್ಕೆ ತಕ್ಕ ಫಲ 
ಸುತ್ತಲ ಬದುಕು ಸಂಪೂರ್ಣ ಪವಾಡಗಳಿಂದಲೇ(miracles) ತುಂಬಿದೆ. ಅವುಗಳನ್ನು ಕಂಡು ಖುಷಿ ಪಡು. ಜಗತ್ತಿನಲ್ಲಿ ದೇವರಿರುವುದಲ್ಲ, ದೇವರೊಳಗೆ ಸಂಪೂರ್ಣ ಜಗತ್ತಿದೆ. ನಿನ್ನ ಕೆಲಸಕ್ಕೆ ತಕ್ಕ ಫಲ ನೀಡುತ್ತೇನೆ.

ಅಧ್ಯಾಯ 11: ವಿಶ್ವರೂಪ ದರ್ಶನ
ಈ ಸಂದರ್ಭದಲ್ಲಿ ಅರ್ಜುನನಿಗೆ ಕೃಷ್ಣನು ವಿಶ್ವರೂಪ ದರ್ಶನ ಮಾಡಿಸುತ್ತಾನೆ. ಇದನ್ನು ನೋಡಿದ ಅರ್ಜುನ ತನ್ನ ಅಜ್ಞಾನಕ್ಕಾಗಿ ಕ್ಷಮೆ ಯಾಚಿಸುತ್ತಾನೆ.

ಅಧ್ಯಾಯ 12: ಭಗವಂತನಲ್ಲಿ ಪ್ರೀತಿ
ಭಗವಂತನನ್ನು ಪ್ರೀತಿಸುತ್ತಾ ಧ್ಯಾನಿಸುವರೋ ಅವರೇ ಯೋಗಿಗಳು. ಭಗವಂತನ ಪ್ರೀತಿ(love) ಪಡೆವಂಥ ಕರ್ಮಗಳನ್ನೂ ಮಾಡಬಹುದು. ಇಲ್ಲದಿದ್ದಲ್ಲಿ, ಕರ್ಮಗಳಿಗೆ ಫಲ ಬಯಸಬೇಡ ಎನ್ನುತ್ತಾನೆ ಕೃಷ್ಣ. 

ಅಧ್ಯಾಯ 13: ಮಾಯೆಯಿಂದ ಕಳಚಿಕೋ
ಬ್ರಹ್ಮಾಂಡವೇ ಮಾಯೆ. ಅದನ್ನು ಅರ್ಥ ಮಾಡಿಕೊಂಡು ಮಾಯೆಯಿಂದ ಕಳಚಿಕೊಂಡು ಭಕ್ತಿಯಿಂದ ಜೀವಿಸಲು ಕೃಷ್ಣ ಸಲಹೆ ನೀಡುತ್ತಾನೆ. 

ಅಧ್ಯಾಯ 14: ದೃಷ್ಟಿಕೋನಕ್ಕೆ ಹೊಂದುವ ಜೀವನಶೈಲಿ(lifestyle)
ಎಲ್ಲರಲ್ಲೂ ಮೂರು ಗುಣಗಳಿರುತ್ತವೆ. ಸಾತ್ವಿಕ ಗುಣವು ಬೆಳಕಿನ, ಸುಖದ, ವಿಚಾರದ ರೂಪ. ರಜೋಗುಣವು ಪ್ರೀತಿ, ಬಯಕೆ ಅಹಂಕಾರದ ಕ್ರಿಯಾಶೀಲ ರೂಪ, ತಮವು ಅಜ್ಞಾನ, ತಪ್ಪು ತಿಳುವಳಿಕೆ, ಆಲಸ್ಯದ ರೂಪ. ಎಲ್ಲರಲ್ಲಿಯೂ ಇಷ್ಟೂ ಗುಣಗಳಿದ್ದರೂ ಒಂದು ಗುಣ ಮೇಲುಗೈ ಸಾಧಿಸುವುದು. ಸಾತ್ವಿಕ ಗುಣದವನು ಮೋಕ್ಷ, ರಾಜಸಿಕ ಗುಣದವನು ಪುನರ್ಜನ್ಮ ಹಾಗೂ ತಾಮಸಿಕ ಗುಣದವನು ಕೆಳಮಟ್ಟದ ಜನ್ಮವೆತ್ತುತ್ತಾನೆ ಎಂದು ಕೃಷ್ಣ ಹೇಳುತ್ತಾನೆ.

Cat's Eye: ಕೇತು ಸಮಸ್ಯೆ ತಂದೊಡ್ಡುತ್ತಿದ್ದರೆ ಈ ಹರಳನ್ನು ಧರಿಸಿ ಸಾಕು!

ಅಧ್ಯಾಯ 15: ದೈವಿಕತ್ವಕ್ಕೆ ಬೆಲೆ 
ಸಂಸಾರವನ್ನು ತಲೆಕೆಳಗಾದ ಅರಳಿ ಮರಕ್ಕೆ ಹೋಲಿಸಿ ಮಾತನಾಡುವ ಕೃಷ್ಣ, ಇದು ಆದಿ ಅಂತ್ಯವಿಲ್ಲದ್ದು. ಇದನ್ನು ವೈರಾಗ್ಯವೆಂಬ ಶಸ್ತ್ರದಿಂದ ಕತ್ತರಿಸಬೇಕು. ದೈವಿಕತ್ವಕ್ಕೆ ಬೆಲೆ ಕೊಟ್ಟಾಗ ಇದು ಸಾಧ್ಯ ಎಂದು ಕೃಷ್ಣ ಮನ ಮುಟ್ಟುವಂತೆ ಹೇಳುತ್ತಾನೆ.  

ಅಧ್ಯಾಯ 16 : ಸದ್ಗುಣದಿಂದ ಸ್ವತಂತ್ರ
ಸಿಟ್ಟು, ಕ್ರೂರತೆ, ಅಜ್ಞಾನ, ಅಪ್ರಾಮಾಣಿಕತೆ, ಅತಿಯಾಸೆ, ಅನೈತಿಕತೆ, ಅಹಂಕಾರ ಮುಂತಾದವು ವ್ಯಕ್ತಿಯನ್ನು ಆಧ್ಯಾತ್ಮಿಕವಾಗಿ(spiritual) ನಾಶ ಮಾಡುತ್ತವೆ. ಆದರೆ ಮಾನವೀಯತೆ, ಸತ್ಯ, ಅಹಿಂಸೆ, ತಾಳ್ಮೆ, ಇಂದ್ರಿಯಗಳ ನಿಯಂತ್ರಣ ಮುಂತಾದ ಸದ್ಗುಣಗಳು ಜ್ಞಾನಕ್ಕೆ ಕಾರಣವಾಗಿ ಸ್ವತಂತ್ರರನ್ನಾಗಿಸುತ್ತದೆ.

ಅಧ್ಯಾಯ 17: ಮೇರು ಸತ್ಯ
ಇಲ್ಲಿ ಕೃಷ್ಣ ಓಂನಾಮದಿಂದಲೇ ಸತ್ಕಾರ್ಯ ಆರಂಭಿಸಬೇಕು. ಯಜ್ಞ, ದಾನ ಹಾಗೂ ತಪಸ್ಸು ಸತ್ಕಾರ್ಯಗಳು ಎಂದು ವಿವರಿಸುತ್ತಾನೆ.

ಅಧ್ಯಾಯ 18: ಪರಮಾತ್ಮನೊಂದಿಗೆ ಐಕ್ಯ
ಕರ್ಮಯೋಗಿಯಾಗಿ ಬದುಕಬೇಕು. ನಿಮ್ಮ ಕೆಲಸವೇ ನಿಮ್ಮನ್ನು ಆತ್ಮದೊಂದಿಗೆ ಜೋಡಿಸುತ್ತದೆ. ಪರಮಾತ್ಮನೊಂದಿಗೆ ಐಕ್ಯವಾಗಲು ದಾರಿ ತೋರುತ್ತದೆ ಎಂದು ವಿವರಿಸುತ್ತಾನೆ. 
 

Latest Videos
Follow Us:
Download App:
  • android
  • ios