ದಾವಣಗೆರೆ: ಕೆಸರು ಗದ್ದೆ ಓಟ, ಹಗ್ಗಜಗ್ಗಾಟ, ಕೆಸರಿನಲ್ಲಿ ಮಿಂದೆದ್ದ ಮೆಡಿಕಲ್ ವಿದ್ಯಾರ್ಥಿಗಳು

ಸದಾ ಓದಿನ ಜಂಜಾಟದಲ್ಲಿರುವ ಮೆಡಿಕಲ್ ವಿದ್ಯಾರ್ಥಿಗಳಿಂದು ಓದಿಗೆ ವಿರಾಮ ಕೊಟ್ಟು ಕೆಸರು ಗದ್ದೆಯಲ್ಲಿ ಭರ್ಜರಿ ಎಂಜಾಯ್ ಮಾಡಿದ್ರು, ಕೆಸರು ಗದ್ದೆ ಓಟ, ಹಗ್ಗಜಗ್ಗಾಟ, ಗದ್ದೆಯಲ್ಲಿ ವಾಲಿಬಾಲ್, ನಾನಾ ದೇಸಿ ಕ್ರೀಡೆಗಳನ್ನು ಆಡುವ ಮೂಲಕ ಗೆಲುವಿಗಾಗಿ ತಮ್ಮ ಗ್ರಾಮೀಣ ಪ್ರತಿಭೆ ಪ್ರದರ್ಶನ ಮಾಡಿದ್ರು. 

Medical Students Played Desi Sports in Davanagere grg

ದಾವಣಗೆರೆ(ಜು.16):  ದೇಸಿ ಕ್ರೀಡೆಗಳು ಪ್ರಸ್ತುತ ದಿನಗಳಲ್ಲಿ ವಿದೇಶಿ ಕ್ರೀಡೆಗಳ ಮುಂದೆ ಮಾಸಿ ಹೋಗ್ತಿವೆ. ಈ ಕ್ರೀಡೆಗಳನ್ನು ಪ್ರೋತ್ಸಾಹಿಸಲು ದೇಶಿ ಕ್ರೀಡೆಗಳಿಗೆ ಜೀವ ತುಂಬಲು ಮೆಡಿಕಲ್ ವಿದ್ಯಾರ್ಥಿಗಳು ಮುಂದಾಗಿದ್ದಾರೆ.
ಸದಾ ಓದಿನ ಜಂಜಾಟದಲ್ಲಿರುವ ಮೆಡಿಕಲ್ ವಿದ್ಯಾರ್ಥಿಗಳಿಂದು ಓದಿಗೆ ವಿರಾಮ ಕೊಟ್ಟು ಕೆಸರು ಗದ್ದೆಯಲ್ಲಿ ಭರ್ಜರಿ ಎಂಜಾಯ್ ಮಾಡಿದ್ರು, ಕೆಸರು ಗದ್ದೆ ಓಟ, ಹಗ್ಗಜಗ್ಗಾಟ, ಗದ್ದೆಯಲ್ಲಿ ವಾಲಿಬಾಲ್, ನಾನಾ ದೇಸಿ ಕ್ರೀಡೆಗಳನ್ನು ಆಡುವ ಮೂಲಕ ಗೆಲುವಿಗಾಗಿ ತಮ್ಮ ಗ್ರಾಮೀಣ ಪ್ರತಿಭೆ ಪ್ರದರ್ಶನ ಮಾಡಿದ್ರು. 

ದಾವಣಗೆರೆಯ ಜೆಜೆಎಂಎಂ ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿಗಳು ಕೆಸರು ಗದ್ದೆಯಲ್ಲಿ ಸಖತ್ ಎಂಜಾಯ್ ಮಾಡಿದ್ರು, ಸದಾ ಓದಿನಲ್ಲಿ ಮಗ್ನರಾಗಿರುತ್ತಿದ್ದ ವಿದ್ಯಾರ್ಥಿಗಳಿಂದು ಮಾನ್ಸೂನ್ ಫೆಯೆಸ್ಟಾ ದೇಸಿ ಕ್ರೀಡೆಗಳೆಂಬ ಕಾರ್ಯಕ್ರಮ ಆಯೋಜನೆ ಮಾಡಿ ಕೆಸರುಮಯಾವಾಗಿದ್ದಾ ಗದ್ದೆಯಲ್ಲಿ ಮಿಂದೆದ್ದರು.

ಮುಖ್ಯಮಂತ್ರಿಗಳೇ ಪರಿಶೀಲನೆ ಪದ ಕೈಬಿಟ್ಟು, ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಿ: ಕೋಡಿಹಳ್ಳಿ

ದಾವಣಗೆರೆ ಹೊರವಲಯದಲ್ಲಿರುವ ಗಾಜಿನ ಮನೆಯ ಕೂಗಳತೆಯಲ್ಲಿರುವ ಖಾಸಗಿ ಜಮೀನಿನಲ್ಲಿ ದೇಸಿ ಕ್ರೀಡೆ ಆಯೋಜನೆ ಮಾಡಲಾಗಿತ್ತು. ಇಂದಿನಿಂದ ಆರಂಭವಾಗಿರುವ ಈ ಮಾನ್ಸೂನ್  ದೇಸಿ ಕ್ರೀಡೆ ಎರಡು ವಾರಗಳ ಕಾಲ ಜರುಗಲಿದ್ದು, ನಾನಾ ದೇಸಿ ಕ್ರೀಡೆಗಳನ್ನು ಇಲ್ಲಿ ಕಣ್ತುಂಬಿಕೊಳ್ಳಹುದಾಗಿದೆ. ವೈದ್ಯರಾಗ್ಬೇಕೆಂಬ ಹಂಬಲದಿಂದ ಆಗಮಿಸುವ ಈ ವಿದ್ಯಾರ್ಥಿಗಳಿಂದ ಕೆಸರುಗದ್ದೆಯಲ್ಲಿ  ಹಗ್ಗಜಗ್ಗಾಟ ಆಟವಾಡಿ ವಿದ್ಯಾರ್ಥಿಗಳು ನಾನಾ ನೀನ ಎಂಬಂತೆ ಗೆಲ್ಲಲು ಶಕ್ತಿ ಪ್ರದರ್ಶನ ಮಾಡಿದ್ರು. ಇನ್ನು ಕೆಸರಿನಲ್ಲಿ ಓಡುವ ಕೆಸರು ಗದ್ದೆ  ಓಟದಲ್ಲೂ ವಿದ್ಯಾರ್ಥಿ ಹಾಗು ವಿದ್ಯಾರ್ಥಿಗಳು ಭಾಗಿಯಾಗಿ ಗೆಲುವಿನ ದಡ ಸೇರಲು ಹರಸಾಹಸ ಪಟ್ಟರು. 

ಇನ್ನು ಕೆಸರಿನಲ್ಲೆ ವಾಲಿಬಾಲ್ ಕೂಡ ಆಡಿಸಿದ್ದು, ಬಾಲ್ ನ್ನು ಒದೆಯಲು ವಿದ್ಯಾರ್ಥಿಗಳು ಕೆಸರಿನಲ್ಲಿ ಮಿಂದೆದ್ದರು.‌ ಈ ದೇಸಿ ಕ್ರೀಡೆಗಳನ್ನು ಆಡುವುದ್ದರಿಂದ ಮಾನಸಿಕವಾಗಿ ಕೆಲ ಖಾಯಿಲೆಗಳನ್ನು ತಡೆಗಟ್ಟಲಿವೆಯಂತೆ. ಈ ದೇಸಿ ಕ್ರೀಡೆಗಳನ್ನಾಡುವುದ್ದರಿಂದ ನರರೋಗ ತಡೆಗಟ್ಟಬಹುದಾಗಿಯಂತೆ. ಈ ವೇಳೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿ ಶ್ರೇಯಾ ಬರೀ ಓದಿನಲ್ಲಿ ಸದಾ ಮಗ್ನರಾಗಿದ್ದ ನಾವುಗಳಿಗೆ ಇದೊಂದು ಇದೊಂದು ಒಳ್ಳೆ ಫ್ರೆಶ್ ನೆಸ್, ಕೆಸರುಗದ್ದೆಯಲ್ಲಿ ವಾಲಿಬಾಲ್, ಥ್ರೋ ಬಾಲ್, ಹಗ್ಗಜಗ್ಗಾಟ, ಕೆಸರುಗದ್ದೆ ಓಟ, ಆಯೋಜನೆ ಮಾಡಲಾಗಿದ್ದು ಸಖತ್ ಎಂಜಾಯ್ ಮಾಡ್ತಿದ್ದೇವೆ ಎಂದರು. 

ದಾವಣಗೆರೆ: ಜಗಳೂರಿನ ರಾಗಿ ಖರೀದಿಯಲ್ಲಿ ಅಕ್ರಮ ಸದ್ದು

ಇನ್ನು ಈ ವಾರ ಕೆಸರುಗದ್ದೆಯಲ್ಲಿ ವಾಲಿಬಾಲ್, ಥ್ರೋ ಬಾಲ್, ಹಗ್ಗಜಗ್ಗಾಟ, ಕೆಸರುಗದ್ದೆ ಓಟ ಆಯೋಜನೆ ಮಾಡಿದ್ರೇ. ಮುಂದಿನ ವಾರ ಲಗೋರಿ, ಚೌಕಬಾರ, ಗಿಲ್ಲಿದಾಂಡುನಂತಹ ದೇಸಿ ಕ್ರೀಡೆಗಳನ್ನು ಆಯೋಜನೆ ಮಾಡಲಾಗುತ್ತದೆ. ಕೆಸರಿನಲ್ಲಿ ಕೆಲ ವಿದ್ಯಾರ್ಥಿಗಳು ಸಖತ್ ಎಂಜಾಯ್ ಮಾಡಿದ್ರೇ, ಕೆಲ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇರಿ ಕೆಸರು ಗದ್ದೆಯಲ್ಲಿ ಸಿನಿಮಾದ ಹಾಡುಗಳಿಗೆ ಸಖತ್ ಸ್ಪೆಪ್ ಹಾಕಿದರು. 

ಈ ವೇಳೆ ಪ್ರತಿಕ್ರಿಯಿಸಿದ ಕಾಲೇಜಿನ ಪ್ರಾಂಶುಪಾಲರಾದ ಮುರುಗೇಶಪ್ಪ ಮಾತನಾಡಿ ದೇಸಿ ಕ್ರೀಡೆಗಳು ನಶಿಸಿ ಹೋಗ್ತಿವೆ. ಅದ್ದರಿಂದ ಮೆಡಿಕಲ್ ವಿದ್ಯಾರ್ಥಿಗಳು ಈ ದೇಸಿ ಕ್ರೀಡೆಗಳನ್ನು ಆಯೋಜನೆ ಮಾಡಿದ್ದಾರೆ, ಈ ಕ್ರೀಡೆಗಳು ಕೆಲ ಖಾಯಿಲೆಗಳು ಬಾರದಂತೆ ನೋಡಿಕೊಳ್ಳುತ್ತವೆ, ನರರೋಗದಂತ ರೋಗಕ್ಕೆ ಈ ದೇಸಿ ಗೇಮ್ಸ್  ರಾಮಬಾಣ, ಇನ್ನು ಪಟ್ಟಣದಿಂದ ಆಗಮಿಸಿರುವ ವಿದ್ಯಾರ್ಥಿಗಳಿಗೆ ಈ‌ದೇಸಿ‌‌‌ ಕ್ರೀಡೆಗಳ ಬಗ್ಗೆ ತಿಳಿಸಬಹುದ ಎಂದರು.

Latest Videos
Follow Us:
Download App:
  • android
  • ios