Asianet Suvarna News Asianet Suvarna News

ಮುಖ್ಯಮಂತ್ರಿಗಳೇ ಪರಿಶೀಲನೆ ಪದ ಕೈಬಿಟ್ಟು, ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಿ: ಕೋಡಿಹಳ್ಳಿ

ಸಿಎಂ ಸಿದ್ದರಾಮಯ್ಯ ನವರು ಕೂಡು ಕೃಷಿ ಕಾಯ್ದೆ ವಾಪಾಸ್ ಪಡೆಯಲು ಚರ್ಚೆ ಮಾಡಿದ್ದರು, ಅವರ ಚುನಾವಣ ಪ್ರಣಾಳಿಕೆಯಲ್ಲೂ ಇದನ್ನು ಹಿಂಪಡೆಯುವ ಬಗ್ಗೆ ಘೋಷಣೆ ಮಾಡಲಾಗಿತ್ತು ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

kodihalli chandrashekar demand for Withdraw  Anti Farmer Acts    to CM siddaramaiah  gow
Author
First Published Jul 11, 2023, 9:35 PM IST

ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಜು.11): ಸಿಎಂ ಸಿದ್ದರಾಮಯ್ಯ ನವರು ಕೂಡು ಕೃಷಿ ಕಾಯ್ದೆ ವಾಪಾಸ್ ಪಡೆಯಲು ಚರ್ಚೆ ಮಾಡಿದ್ದರು, ಅವರ ಚುನಾವಣ ಪ್ರಣಾಳಿಕೆಯಲ್ಲೂ ಇದನ್ನು ಹಿಂಪಡೆಯುವ ಬಗ್ಗೆ ಘೋಷಣೆ ಮಾಡಲಾಗಿತ್ತು ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು. ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ಕೃಷಿ ಕಾಯ್ದೆ ಹಾಗು ಭೂಸುಧಾರಣಾ ಕಾಯ್ದೆ ಅತ್ಯಂತ ಅಪಾಯಕಾರಿ ಅದನ್ನು ವಾಪಾಸ್ ಪಡೆಯಲು ಸಿಎಂ ಸಿದ್ದರಾಮಯ್ಯ ನವರು ಏಕೆ ಸಧನದಲ್ಲಿ ಮುಂದಾಗಲಿಲ್ಲ, ರದ್ದು ಪಡಿಸಲು ಈಗಾಗಲೇ ನಾನು ಸಿಎಂ ಸಿದ್ದರಾಮಯ್ಯ ನವರಿಗೆ ಭೇಟಿಯಾಗಿ ಮನವಿ ಮಾಡಿದ್ದೇನೆ. ಇದನ್ನು ತಕ್ಷಣ ವಾಪಾಸ್ ತೆಗೆಯಬೇಕೆಂದು ಬೇಡಿಕೆ ಇಟ್ಟಿದ್ದೇವೆ, 1961 ಭೂಸುಧಾರಣಾ ಕಾಯ್ದೆ ಏನಿದೆ ಇದಕ್ಕೆ ವಿಚಾರಗಳನ್ನು ನಿಬಂಧನೆಗಳನ್ನು ಇಟ್ಟು ಅಂದು ಮುಂದುವರೆಸಿದ್ದರು, ಇದನ್ನು ವಾಪಾಸ್ ಪಡೆಯಲು ಸಿದ್ದರಾಮಯ್ಯ ನವರು ಪ್ರಯತ್ನ ಪಡ್ಬೇಕು, ಇದು ವ್ಯಾಪಾರಿಕರಣ ಆಗ್ಬಾರದು, ಕೃಷಿ ಭೂಮಿ ಕೃಷಿ ಭೂಮಿಯಾಗಿರ್ಬೇಕು, ಇದನ್ನು ಸಿದ್ದರಾಮಯ್ಯ ನವರು ಜರೂರ್ ಆಗಿ ಕಾಯ್ದೆಗಳನ್ನು ರದ್ದು ಮಾಡಿ ಆದೇಶ ಹೊರಡಿಸುತ್ತಾರೆಂಬ ನಂಬಿದ್ದೇವೆ ಎಂದರು.

ಕೊಡಗಿನಲ್ಲಿ ಬಟ್ಟೆ ಒಣಗಿಸಲು ಬಳಂಜಿ, ಅಗ್ಗಿಷ್ಟಿಕೆಗೆ ಬೇಡಿಕೆ, ದೇಹದ ಉಷ್ಣತೆಗಾಗಿ ಭರ್ಜರಿ ಏಡಿ

ಇನ್ನು ಈ ಕಾಯ್ದೆಗಳನ್ನು ರದ್ದು ಪಡಿಸಲು ಪರಿಶೀಲನೆ ಮಾಡ್ತಿದ್ದೇವೆ ಎಂದಿದ್ದರು, ಅದ್ರೇ ಪರಿಶೀಲನೆ ಎಂಬ ಪದ ಕೈ ಬಿಟ್ಟು ಮೋದಿಯವರು ಹೇಗೆ ಯಾರೀಗೆ ಕೇಳದೆ ಹೇಳದ ಕಾಯ್ದೆಗಳನ್ನು ಜಾರಿಗೆ ತಂದ್ರೋ ಹಾಗೇ ಈ ಕಾಯ್ದೆಗಳನ್ನು ರದ್ದುಪಡಿಸಿ ಎಂದರು. 

ಟೊಮ್ಯಾಟೊ ಬೆಲೆ ಏರಿಕೆ ಆಗಿದ್ದರಿಂದ ದೇಶದಾದ್ಯಂತ ಅದೇ ಚರ್ಚೆ
ಟೊಮ್ಯಾಟೊ ಬೆಲೆ ಏರಿಕೆ ಆಗಿದ್ದರಿಂದ ದೇಶದಂತ್ಯ ಅದೇ ಚರ್ಚೆ ಅದ್ರೇ ತಿಪಟೂರು ಕೊಬ್ರೀಯ ಬೆಲೆ ಆರುವರೆ ಸಾವಿರ ಆಗಿದೆ ಅರ್ಥ ಆಗ್ತಿಲ್ವ, ಇನ್ನು ಎಮ್ಎಸ್ಬಿ ಏನೀದೆ ಇದು ಸರಿಯಾಗಿ ಸೈನ್ಡಿಫಿಕ್‌ ಆಗಿ ಇರ್ಬೇಕು, ಮೋದಿಯವರು 2013 ರಲ್ಲಿ ಪ್ರಧಾನಿಯಾಗುವ ಮುನ್ನ ದೇಶದಲ್ಲಿ 300 ರ್ಯಾಲಿಗಳಲ್ಲಿ  ನನ್ನ ಸರ್ಕಾರ ಬಂದ್ರೇ ರೈತರಿಗೆ ಎಮ್ಎಸ್ಬಿ ಸ್ವಾಮಿನಾಥನ್ ವರದಿ ಪ್ರಕಾರ ಬೆಲೆ ನಿಗದಿ ಮಾಡ್ತಿವಿ ರೈತನ ಆದಾಯ ದುಪ್ಪಟ್ಡು ಮಾಡ್ತಿವಿ ಎಂದರು ಅದು ಆಗಲೇ ಇಲ್ಲ, ಎಮ್ಎಸ್ಬಿ ಸ್ವಾಮಿನಾಥನ್ ವರದಿ ಏನೀದು ಇದು ಮಾನದಂಡ ಆಗ್ಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ರು,

ಕಳಪೆ ರಸ್ತೆ ಕಾಮಗಾರಿ ವೀಕ್ಷಣೆಗೆ ಬಂದ ಎಂಜಿನಿಯರ್ ಗೆ ಕಲ್ಲು ಹೊಡೆದ ಗ್ರಾಮಸ್ಥರು!

ಇದು ಸಾವಿರಾರು ವರ್ಷಗಳಿಂದ ಜನ ಊಟದ ಬಟ್ಟಲು: 
ಇದು ಸಾವಿರಾರು ವರ್ಷಗಳಿಂದ ಜನ ಊಟದ ಬಟ್ಟಲು ಇದು ಇದನ್ನು ಜೋಪನ ಮಾಡೋದು ನಮ್ಮದು ನಿಮ್ಮದು ಜವಾಬ್ದಾರಿ, ಹಿಂದಿನ ಸರ್ಕಾರಗಳು ಏನೂ ಹೇಳಿದ್ವು, ಕಾರ್ಪೋರೆಟ್ ಕಂಪನಿಗಳು ಎಮ್ಎನ್ ಸಿ ಕಂಪನಿಗಳು ಬಂದು ಕೃಷಿ ಮಾಡಲಿ ಎಂದು ಹೇಳಿದ್ವು, ಅ ರೀತಿ ಕೃಷಿ ಮಾಡಲು ಇದು ಅಮೇರಿಕ ಜಪಾನ ಕೋರಿಯ ಬ್ರಿಟನ್ ದೇಶವಲ್ಲ, ಇದು 140 ಜನ ಕೋಟಿ ಇರುವ ದೇಶ, ಆಹಾರ ಭದ್ರತೆಯಲ್ಲಿ ಏರುಪೇರಾದ್ರೇ ನೂರಾರು ಕೂಟಿ ಜನ ದಿನ ಸಾಯುವ ಪರಿಸ್ಥಿತಿ ನಿರ್ಮಾಣ ಆಗಾಲಿದೆ. ಈ ಜವಾಬ್ದಾರಿಯನ್ನು ಎಮ್ಎನ್ಸಿ, ಕಾರ್ಪೋರೇಟ್ ಕಂಪನಿಗಳ ಕೈಗೆ ಹೋಗ್ಬಾರಾದು, ಅವರು ಕಮರ್ಷಿಯಲ್ ಜನ ಲಾಭಕ್ಕಾಗಿ ಮಾಡುವವರು, ಅದ್ರೇ ರೈತ ಲಾಭ ಇಲ್ಲದೆ ನಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾನೆ ಕಾಯ್ದೆಗಳನ್ನು ರದ್ದು ಪಡಿಸಿ ಎಂದರು.

Follow Us:
Download App:
  • android
  • ios