ದಾವಣಗೆರೆ: ಜಗಳೂರಿನ ರಾಗಿ ಖರೀದಿಯಲ್ಲಿ ಅಕ್ರಮ ಸದ್ದು

ರೈತರ ಬದಲಿಗೆ ದಲ್ಲಾಳಿಗಳಿಂದ, ವ್ಯಾಪಾರಿಗಳಿಂದ ರಾಗಿ ಖರೀದಿ, ಅಕ್ರಮವಾಗಿ ರಾಗಿ ಮಾರಿದ 489 ಮಂದಿಯನ್ನು ಗುರುತಿಸಲಾಗಿದೆ, ಸ್ವತಃ ನಾನೇ ಸ್ಥಳಕ್ಕೆ ಹೋಗಿ 1100 ನೈಜ ಲಾನುಭುವಿಗಳ ಪಟ್ಟಿ ತಯಾರಿಸಿದ್ದೇನೆ, ದಾವಣಗೆರೆ ಜಿಲ್ಲಾ ಪಂಚಾಯಿತಿಯಲ್ಲಿ ಬಿ. ದೇವೇಂದ್ರಪ್ಪ ಹೇಳಿಕೆ 

Illegality in Purchase of Millet at Jagaluru in Davanagere grg

ವರದಿ: ವರದರಾಜ್ 

ದಾವಣಗೆರೆ(ಜು.09): ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಿನ್ನೆ(ಶನಿವಾರ) ನಡೆದ ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜಗಳೂರು ರಾಗಿ ಖರೀದಿ ಕೇಂದ್ರದಲ್ಲಿ ನಡೆದಿರುವ ಅವ್ಯವಹಾರ ಪ್ರಕರಣ ಪ್ರತಿಧ್ವನಿಸಿತು. 

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ತಮ್ಮ ಇಲಾಖಾ ವರದಿ ಮಾಡಿಸುವಾಗ ಅಕ್ರಮದ ವಿಷಯ ಪ್ರಸ್ತಾಪಿಸಿದ ಜಗಳೂರು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ, ತಾಲೂಕಿನಲ್ಲಿ ಹೆಚ್ಚು ರಾಗಿ ಬೆಳೆಯುವ ರೈತರಿದ್ದಾರೆ. ಆದರೆ ರೈತರ ಬದಲಿಗೆ ದಲ್ಲಾಳಿಗಳಿಂದ, ವ್ಯಾಪಾರಿಗಳಿಂದ ರಾಗಿ ಖರೀದಿಸಲಾಗಿದೆ. ಈ ಕುರಿತು ಗದ್ದಲ ನಡೆಯುವಾಗ ಸ್ವತಃ ನಾನೇ ಸ್ಥಳಕ್ಕೆ ಹೋಗಿ 1100 ನೈಜ ಲಾನುಭುವಿಗಳ ಪಟ್ಟಿ ತಯಾರಿಸಿ, ಅಕ್ರಮವಾಗಿ ರಾಗಿ ಮಾರಿದ 489 ಮಂದಿಯನ್ನು ಗುರುತಿಸಲಾಗಿದೆ ಎಂದರು.  

ದಾವಣಗೆರೆ: ಗ್ಯಾರಂಟಿ ಯೋಜನೆಗಳ ಮಧ್ಯೆ ವಿಶ್ವ ಕನ್ನಡ ಸಮ್ಮೇಳನ ಘೋಷಣೆ ಮರೆತ ಸಿಎಂ - ಬಿ.ವಾಮದೇವಪ್ಪ

ಜಗಳೂರಿನ ಮಾನ ರಾಜ್ಯದೆಲ್ಲೆಡೆ ಹರಾಜಾಗಿದೆ

ಶಾಸಕ ದೇವೆಂದ್ರಪ್ಪ ಮಾತನಾಡಿ, ಈ ಮೊದಲು‌ ನಂಜುಂಡಪ್ಪ ವರದಿಯಂತೆ ಹಿಂದುಳಿದ ತಾಲ್ಲೂಕ್ ಎಂಬ ಹಣೆಪಟ್ಟಿ ಇತ್ತು.ಇದೀಗ ಭ್ರಷ್ಟಾಚಾರದಲ್ಲಿ ಜಗಳೂರು ನಂಬರ್ 1 ಸ್ಥಾನದಲ್ಲಿದೆ ಎಂದರು.ರಾಗಿ‌ ಖರೀದಿ ವಿಚಾರದಲ್ಲಿ ಜಗಳೂರು ಎಪಿಎಸಿ ಜಗತ್ ಪ್ರಸಿದ್ಧವಾಗಿದೆ ಎಂದು ವ್ಯಂಗ್ಯವಾಡಿದರು.ಮಧ್ಯವರ್ತಿಗಳು ಸರ್ಕಾರಕ್ಕೆ‌ ಮೋಸಮಾಡಿ ಎಂಟು ಕೋಟಿ ರೂಗಳಷ್ಟು ಸರ್ಕಾರದ ಬೊಕ್ಕಸಕ್ಕೆ‌ ನಷ್ಟವನ್ನುಂಟು ಮಾಡಿದ್ದಾರೆ. ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವರು ಅರ್ಹ ರೈತ ಪಲಾನುಭವಿಗಳಿಗೆ 8 ಕೋಟಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಮೈಸೂರು ಬಳ್ಳಾರಿ ಹೊಸಪೇಟೆಗಳಿಂದ ರಾಗಿಯನ್ನು ಜಗಳೂರು ಎಪಿಎಂಸಿಗೆ ತಂದು ಮಾರಾಟ ಮಾಡಿದ್ದಾರೆ.‌ 

ಈ ಬಗ್ಗೆ ದುಡ್ಡು ತಿಂದಿರುವ ಅಧಿಕಾರಿಗಳನ್ನು ತನಿಖೆ ನಡೆಸಿ ಅರ್ಹ ರೈತರಿಗೆ ನ್ಯಾಯ ಕೊಡಿಸಬೇಕಿದೆ.

Latest Videos
Follow Us:
Download App:
  • android
  • ios