Asianet Suvarna News Asianet Suvarna News

ಮಾಧ್ಯಮ ಸಮಾಜ ತಿದ್ದುವ ಕೆಲಸ ಮಾಡಲಿ; ಅಪ್ಪಚ್ಚು ರಂಜನ್

  • ಮಾಧ್ಯಮಗಳು ಸಮಾಜ ತಿದ್ದುವ ಕೆಲಸ ಮಾಡಲಿ: ಶಾಸಕ ಅಪ್ಪಚ್ಚು ರಂಜನ್‌
  • ಪತ್ರಕರ್ತರ ಸಂಘ ಕುಶಾಲನಗರ ತಾಲೂಕು ಘಟಕ ಪದಾಧಿಕಾರಿಗಳ ಪದಗ್ರಹಣ
Media shoud work for socail reform says MLA appachhu ranjan rav
Author
First Published Sep 25, 2022, 12:53 PM IST

ಕುಶಾಲನಗರ (ಸೆ.25) : ಮಾಧ್ಯಮಗಳು ಬರಹಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ನಿರಂತರವಾಗಿ ಮಾಡಬೇಕು ಎಂದು ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಹೇಳಿದರು. ಕುಶಾಲನಗರದಲ್ಲಿ ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಮಾಜದ ಅಂಕುಡೊಂಕುಗಳ ವಿಮಶೆæರ್‍ ಆಗಬೇಕಿದೆ, ಜನಪ್ರತಿನಿಧಿಗಳಿಗೆ ಸಲಹೆ ಸೂಚನೆ ಅಗತ್ಯತೆ ಇರುವುದಾಗಿ ತಿಳಿಸಿದ ಶಾಸಕ ರಂಜನ್‌, ಪತ್ರಿಕೆ ಮಾಧ್ಯಮಗಳ ಮೂಲಕ ಸಾಧಕ ಭಾಧಕಗಳ ಬಗ್ಗೆ ಸಮಾಜಕ್ಕೆ ಜಾಗೃತಿ ಮೂಡಿಸುವಂತಾಗಬೇಕು ಎಂದರು.

ಕಲೆ ಮತ್ತು ಕ್ರೀಡೆಗಳ ಉಳಿವಿಗೆ ಎಲ್ಲರೂ ಶ್ರಮಿಸಿ: ಅಪ್ಪಚ್ಚು ರಂಜನ್‌

ಪತ್ರಕರ್ತರ ಕರ್ತವ್ಯಕ್ಕೆ ನಿರ್ಬಂಧ ಸಲ್ಲದು ಎಂದ ಅವರು, ಮುಖ್ಯವಾಹಿನಿಯಲ್ಲಿ ಪ್ರಮುಖ ಪಾತ್ರವಹಿಸುವ ಪತ್ರಕರ್ತರು ಯಾವುದೇ ಸಂದರ್ಭ ವ್ಯಕ್ತಿಗತ ಮಾನಹಾನಿ ಆಗದಂತೆ ವಿವೇಚನೆ ವಹಿಸುವುದು ಅಗತ್ಯ ಎಂದು ಹೇಳಿದರು.

ದಿಕ್ಸೂಚಿ ಭಾಷಣ ಮಾಡಿದ ಸಂಘದ ಗೌರವ ಸಲಹೆಗಾರ ಬಿ.ಜಿ. ಅನಂತಶಯನ, ಸುದ್ದಿಗಳು ಓದುಗರಲ್ಲಿ ಗೊಂದಲ ಉಂಟುಮಾಡಬಾರದು, ಸುದ್ದಿಯಲ್ಲಿ ಆತುರ ಸಲ್ಲದು, ಕಟುಸತ್ಯ ಸುದ್ದಿ ಮೂಲಕ ಯಾವುದೇ ಅನಾಹುತಕ್ಕೆ ಕಾರಣವಾಗಬಾರದು. ಪ್ರಸಕ್ತ ಪರಿಸ್ಥಿತಿಯಲ್ಲಿ ಪತ್ರಕರ್ತರು ರಕ್ಷಣೆ, ಭದ್ರತೆಯ ಕೊರತೆ ಎದುರಿಸುತ್ತಿದ್ದು, ಪತ್ರಕರ್ತನ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಯತ್ನ, ದೈಹಿಕ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ವಿಷಯ ಎಂದÜರು. ಕೆಲವರಿಂದ ಸಾಮಾಜಿಕ ಜಾಲತಾಣಗಳ ದುರುಪಯೋಗ ಆಗುತ್ತಿದ್ದು, ಇದರಿಂದ ಅನಾಹುತಗಳು ಸೃಷ್ಟಿಆಗುತ್ತಿರುವುದು ಕಂಡುಬರುತ್ತಿವೆ. ಇದಕ್ಕೆ ಕಡಿವಾಣದ ಅಗತ್ಯವಿದೆ ಎಂದು ಅನಂತಶಯನ ಹೇಳಿದರು. ಕೊಡಗು ಜಿಲ್ಲಾಡಳಿತ ಕಾನೂನು ಸಲಹೆಗಾರ ಎ.ಲೋಕೇಶ್‌ ಕುಮಾರ್‌, ಸಂಘದ ಅಧ್ಯಕ್ಷ ವಿN್ನೕಶ್‌ ಎಂ. ಭೂತನಕಾಡು ನೇತೃತ್ವದ ನಿಯೋಜಿತ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ಸಂಘ ಸದಸ್ಯರ ಮಕ್ಕಳಾದ ಬಿ.ಡಿ. ಮಧುರ, ಅಹನ್‌ ಪೂಜಾರಿ, ಆರ್ಯ, ದೀಪಿಕಾ, ಯದುನಂದ್‌, ಭುವಿತ್‌, ಬೆನೆಕ, ಸೋವಿತಾ, ಹರ್ಷಿತ್‌ ಅವರಿಗೆ ಕೃತಜ್ಞತಾ ಟ್ರಸ್ಟ್‌ನ ಮುರುಳಿಧರ್‌ ಮತ್ತು ಗಣ್ಯರಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಉದ್ಯಮಿ ಹೆನ್ರಿಕ್‌ ಮಾರ್ಟಿನ್‌ ಸಂಘ ಸದಸ್ಯರಿಗೆ ಪವರ್‌ ಬ್ಯಾಂಕ್‌ ವಿತರಿಸಿದರು. ಕೊಡಗು ಪತ್ರಕರ್ತರ ಸಂಘದ ಎಸ್‌.ಎ. ಮುರುಳಿಧರ್‌ ಅಧ್ಯಕ್ಷತೆ ವಹಿಸಿದ್ದರು. ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್‌, ಕಂಬಿಬಾಣೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಧು ನಾಗಪ್ಪ ಇದ್ದರು.

ಸಿಗದ ಸಚಿವ ಸ್ಥಾನ: ಪಕ್ಷದವರೇ ನಮಗೆ ಮುಳ್ಳಾದ್ರು ಎಂದ ಬಿಜೆಪಿ ಶಾಸಕ

ಗೌರವಾಧ್ಯಕ್ಷ ಕೆ.ತಿಮ್ಮಪ್ಪ, ಉಪಾಧ್ಯಕ್ಷ ಬಿ.ಸಿ. ದಿನೇಶ್‌, ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್‌ ವಿನೋದ್‌, ಖಜಾಂಜಿ ಎನ್‌.ಎ.ಅಶ್ವಥ್‌ ಕುಮಾರ್‌ ಮತ್ತು ನಿರ್ದೇಶಕರಾದ ಬಿ.ಎಸ್‌. ಲೋಕೇಶ್‌ ಸಾಗರ್‌, ಜಿ.ಕೆ. ಬಾಲಕೃಷ್ಣ, ಅಲ್ಫೆ್ರಡ್‌ ಡಿಸೋಜ, ಕೆ.ಎಸ್‌. ಮೂರ್ತಿ, ವಿಶ್ವಕುಮಾರ್‌, ಶಿವಣ್ಣ, ಜೆ.ಎಲ್‌. ಸೋನ್ಸ್‌, ಜಿಲ್ಲಾ ಸಂಘದ ಪ್ರಮುಖರು ಇದ್ದರು. ಮಧುರ ದಿನೇಶ್‌ ಪ್ರಾರ್ಥಿಸಿದರು. ವಿN್ನೕಶ್‌ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕೆ.ತಿಮ್ಮಪ್ಪ ಮತ್ತು ಎಂ.ಎಸ್‌. ಸುನೀಲ್‌ ಕಾರ್ಯಕ್ರಮ ನಿರೂಪಿಸಿದರು.

Follow Us:
Download App:
  • android
  • ios