Asianet Suvarna News Asianet Suvarna News

Shivamogga: ಧರ್ಮ ಇಲ್ಲದ ಅರ್ಥಕ್ಕೆ ಕಿಮ್ಮತ್ತಿಲ್ಲ: ಚಕ್ರವರ್ತಿ ಸೂಲಿಬೆಲೆ

ಹಿಂದು ಎಕನಾಮಿಕ್ಸ್‌ ಎಂದರೆ ಹಿಂದುಗಳಿಗೆ ಬೇಕಿರುವ ಎಕನಾಮಿಕ್ಸ್‌ ಅಲ್ಲ. ಅದು ಜಗತ್ತಿಗೆ ಬೇಕಿರುವ ಆರ್ಥಿಕತೆ ಎಂದರ್ಥ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

Meaning without religion is worthless Says Chakravarti Sulibele At Shivamogga gvd
Author
First Published Dec 20, 2022, 1:20 AM IST

ಶಿವಮೊಗ್ಗ (ಡಿ.20): ಹಿಂದು ಎಕನಾಮಿಕ್ಸ್‌ ಎಂದರೆ ಹಿಂದುಗಳಿಗೆ ಬೇಕಿರುವ ಎಕನಾಮಿಕ್ಸ್‌ ಅಲ್ಲ. ಅದು ಜಗತ್ತಿಗೆ ಬೇಕಿರುವ ಆರ್ಥಿಕತೆ ಎಂದರ್ಥ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು. ನಗರದ ಕೋಟೆ ಬಯಲು ರಂಗಮಂದಿರಲ್ಲಿ ಸೋಮವಾರ ಸ್ವದೇಶಿ ಜಾಗರಣ ಮಂಚ್‌ ಸಹಯೋಗದಲ್ಲಿ ರಾಷ್ಟ್ರೋತ್ಥಾನ ಬಳಗ. ಹಿಂದೂ ಆರ್ಥಿಕ ವೇದಿಕೆಯಿಂದ ಆಯೋಜಿಸಿದ್ದ ಪ್ರೊ. ಬಿ.ಎಂ. ಕುಮಾರಸ್ವಾಮಿ ಅವರ ‘ಹಿಂದು ಅರ್ಥಶಾಸ್ತ್ರ’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶರಿಯಾ ಕಾನೂನಿನಲ್ಲಿ ಏನಿದೆ ಎಂದರೆ ಅವರವರ ಸಂಸ್ಕೃತಿಗೆ ತಕ್ಕಂತೆ ನ್ಯಾಯ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ ಇದೆ. ಅದಕ್ಕೆ ತಾಲಿಬಾನಿಗಳು ನಿದರ್ಶನ. ಇಸ್ಲಾಂ ಮತ್ತು ಕ್ರಿಶ್ಚಿಯನ್‌ ವ್ಯವಸ್ಥೆಯಲ್ಲಿ ಭೋಗ ಪ್ರಧಾನ ವ್ಯವಸ್ಥೆ ಇದೆ. ಹಿಂದುಗಳಲ್ಲಿ ಭೋಗಕ್ಕಿಂತ ತ್ಯಾಗ ಪ್ರಧಾನ ವ್ಯವಸ್ಥೆಯಲ್ಲಿ ಬಂದಿದ್ದೇವೆ. ಅವರಲ್ಲಿ ನೇರವಾಗಿ ಸ್ವರ್ಗಕ್ಕೆ ಹೋಗುವ ಕಲ್ಪನೆ ಇದೆ. ನಮ್ಮಲ್ಲಿ ಪುನರ್ಜನ್ಮದ ಕಲ್ಪನೆ ಇದೆ ಎಂದರು. ಧರ್ಮ ಇಲ್ಲದ ಅರ್ಥಕ್ಕೆ ಕಿಮ್ಮತ್ತು ಇಲ್ಲ. ಧರ್ಮದ ಆಧಾರದಲ್ಲಿಯೇ ಆರ್ಥದ ಗಳಿಕೆ ಆಗಬೇಕು. ಧರ್ಮದ ಕಾಮನೆಯಲ್ಲಿ ಮುಂದುವರಿದರೆ ಎಲ್ಲವೂ ಸುಗಮವಾಗಿರುತ್ತದೆ. ಇಲ್ಲದಿದ್ದರೆ ಅವನತಿ ಆರಂಭ ಶತಸಿದ್ಧ. ಯಾವುದೇ ವೃತ್ತಿ ಹೀನವೆಂದು ನಮ್ಮ ಧರ್ಮ ಹೇಳಲೇ ಇಲ್ಲ. ಗಳಿಸಿದ್ದರಲ್ಲಿ ಸ್ವಲ್ಪವನ್ನು ಇತರರಿಗೆ ಕೊಡಬೇಕು ಎಂದರು.

ಸಿಎಂ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಪೈಪೋಟಿ: ಸಿ.ಎಂ.ಇಬ್ರಾಹಿಂ

ಲೇಖಕ ಪ್ರೊ. ಬಿ.ಎಂ. ಕುಮಾರಸ್ವಾಮಿ ಮಾತನಾಡಿ, ಭಾರತೀಯ ಆರ್ಥಿಕ ನೀತಿ ಧರ್ಮ ಆಧಾರಿತ ಆಗಿರುವುದರಿಂದ ಎಂದಿಗೂ ನಾಶವಾಗುವುದಿಲ್ಲ. ಆದರೆ ಪಾಶ್ಚಿಮಾತ್ಯ ಆರ್ಥಿಕತೆಯನ್ನೇ ಅನುಸರಿಸುತ್ತಿದ್ದೇವೆ. ಪಠ್ಯಗಳಲ್ಲಿಯೂ ಪಾಶ್ಚಾತ್ಯ ಆರ್ಥಿಕತೆಯನ್ನೇ ಹೇಳುತ್ತಿದ್ದೇವೆ. ಜೀವನ ಪದ್ಧತಿ, ಮೌಲ್ಯಗಳು ವೈವಿಧ್ಯಮಯವಾಗಿವೆ. ಅದೇ ರೀತಿ ಆರ್ಥಿಕ ಚಟುವಟಿಕೆಗಳು ಕೂಡ. ನಮ್ಮ ಆರ್ಥಿಕತೆ ಧರ್ಮ ಆಧಾರಿತವಾದವುಗಳೇ ಆಗಿವೆ. ಹಿಂದೂ ಅರ್ಥಶಾಸ್ತ್ರ ಪ್ರಕಾರ ಆರ್ಥಿಕ ಚಟುವಟಿಕೆಗಳು ಧರ್ಮದ ಆಧಾರದ ಮೇಲೆಯೇ ನಡೆಯಬೇಕಿದೆ. ಅಪ್ರಮಾಣಿಕತೆ ಇದ್ದರೆ, ಅಪ್ರತಿಮ ಸ್ವಾರ್ಥ, ದುರ್ಗುಣಗಳಿಗೆ ದಾಸರಾಗಿರಬೇಕು ಎಂಬುದನ್ನು 1714ರಲ್ಲೇ ವಿದೇಶಿ ಚಿಂತಕ ಹೇಳಿದ್ದಾನೆ. 

ಸಿದ್ದು ತಮ್ಮ ಆಡಳಿತದಲ್ಲಿ ಬೆಳಗಾವಿ ಸಮಸ್ಯೆಯನ್ನು ಏಕೆ ಬಗೆಹರಿಸಲಿಲ್ಲ?: ಸಚಿವ ಕಾರಜೋಳ

ವ್ಯವಹಾರಕ್ಕೂ, ನೈತಿಕತೆಗೂ ಏನೂ ಸಂಬಂಧವಿಲ್ಲ ಎಂಬುದನ್ನು ವಿದೇಶಿ ವಿದ್ವಾಂಸರು ಹೇಳಿದ್ದಾರೆ. ಬಸವಣ್ಣ ಹೇಳಿರುವ ಭಾರತೀಯ ಆರ್ಥಿಕ ನೀತಿಗಳೇ ಬೇರೆ. ಹಿಂದೂ ಅರ್ಥಶಾಸ್ತ್ರ ಮೌಲಿಕವಾದದ್ದು. ಯಾರಿಗೂ ಅನ್ಯಾಯ ಮಾಡಬಾರದೆಂದು ಹೇಳುತ್ತದೆ. ಆದರೆ, ಪಾಶ್ಚಿಮಾತ್ಯ ಆರ್ಥಿಕ ನೀತಿ ಇದಕ್ಕೆ ಉಲ್ಟಾಆಗಿದೆ ಎಂದು ತಿಳಿಸಿದರು. ಹಿಂದೂ ಎಕನಾಮಿಕ್ಸ್‌ ಫೋರಂ ಜಿಲ್ಲಾಧ್ಯಕ್ಷ ವಸಂತ ಹೋಬಳಿದಾರ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟೊ್ರೕತ್ಥಾನ ಬಳಗದ ಶಿವಮೊಗ್ಗ ಘಟಕದ ಅಧ್ಯಕ್ಷ ಡಾ.ಪಿ.ಆರ್‌. ಸುಧೀಂದ್ರ ಸ್ವಾಗತಿಸಿ ಮಾತನಾಡಿದರು.

Follow Us:
Download App:
  • android
  • ios