Asianet Suvarna News Asianet Suvarna News

ದಕ್ಷಿಣ ಕನ್ನಡದಲ್ಲೀಗ ಮಾರ್ಟ್‌ಗಳದ್ದೇ ಕಮಾಲ್‌!

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಈಗ ಇವುಗಳದ್ದೇ ಕಮಾಲ್ .... ವ್ಯಾಪಾರ ವ್ಯವಹಾರವೂ ಭಾರೀ ಜೋರಾಗಿದೆ

Marts Business Hikes in Dakshina Kannada snr
Author
Bengaluru, First Published Oct 30, 2020, 9:11 AM IST

ವರದಿ : ಆತ್ಮಭೂಷಣ್

ಮಂಗಳೂರು (ಅ.30): ಸಹಕಾರಿ ಸಂಘಗಳು ಮಾರಾಟ ಮಳಿಗೆಗಳನ್ನು ನಿರ್ವಹಿಸುವುದು ಹೊಸತೇನಲ್ಲ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೀಗ ಸಹಕಾರಿ ಸಂಘಗಳು ಗ್ರಾಮೀಣ ಮಟ್ಟದಲ್ಲೂ ಮಾಲ್‌ , ಮಾರ್ಟ್‌ಗಳ ಮಾದರಿಯಲ್ಲಿ ದೊಡ್ಡ ಪ್ರಮಾಣ ಮಳಿಗೆ ತೆರೆದು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಹೊಳ ಬೆಳವಣಿಗೆಯಾಗಿದೆ. ಕೊರೋನಾ ಸಂಕಷ್ಟದ ಸಮಯದಲ್ಲೇ ಸುಳ್ಯ ತಾಲೂಕಿನ ಐದು ಕಡೆ ಇಂತಹ ಪ್ರಯೋಗಗಳು ನಡೆದಿದ್ದು ಸ್ಪರ್ಧಾತ್ಮಕ ಬೆಲೆಯಲ್ಲಿ ಗ್ರಾಹಕರಿಗೆ ಉತ್ಕೃಷ್ಟಮಟ್ಟದ ಸೇವೆ ಒದಗಿಸುತ್ತಿವೆ.

ಸುಳ್ಯ ತಾಲೂಕಿನ ಐವರ್ನಾಡು, ಕಳಂಜ, ಬಾಳಿಲ, ಏನೆಕಲ್ಲುಗಳಲ್ಲಿ ಈ ಮೊದಲೇ ಸಹಕಾರಿ ಸಂಘಗಳು ಅಗತ್ಯ ವಸ್ತುಗಳ ಮಾರಾಟವನ್ನು ಹುಟ್ಟುಹಾಕಿದ್ದವು. ಈಗ ಇದು ಬೃಹತ್‌ ಆಗಿ ಮಾರ್ಟ್‌ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಕೊರೋನಾ ಲಾಕ್‌ಡೌನ್‌ ಸಮಯ ಅರಂತೋಡಿನ ಸಹಕಾರಿ ಸೊಸೈಟಿ ಸಮೃದ್ಧಿ ಹೆಸರಿನಲ್ಲಿ ಮಾರ್ಟ್‌ ಕಾರ್ಯಾರಂಭಿಸಿತ್ತು. ಬಳಿಕ ಗುತ್ತಿಗಾರು ಪ್ರಾಥಮಿಕ ಪತ್ತಿನ ಸಹಕಾರಿ ಸಂಘದಲ್ಲಿ ‘ಸುವರ್ಣ ಸಹಕಾರಿ ಮಾರ್ಟ್‌’ ಆರಂಭವಾಗಿದೆ.

ಇಟಲಿಯಲ್ಲೀಗ 75 ರು.ಗೆ ಸ್ವಂತ ಮನೆ ಸಿಗುತ್ತೆ! ..

ಎಲ್ಲವೂ ಹೈಟೆಕ್‌, ಡಿಜಿಟಲ್‌: ದೈತ್ಯ ಮಾಲ್‌ಗಳ ಮಾದರಿಯಲ್ಲೇ ಇಲ್ಲೂ ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನು ಕೈಗಾಡಿಗಳಲ್ಲಿ ತುಂಬಿಸಿ ಬಿಲ್‌ ಮಾಡಲು ಅವಕಾಶ ಇದೆ. ಬಾರ್‌ ಕೋಡ್‌ ವ್ಯವಸ್ಥೆಯೂ ಇದೆ. ನಗದು ಮಾತ್ರವಲ್ಲದೆ ಕಾರ್ಡ್‌, ವಾಲೆಟ್‌ ಆ್ಯಪ್‌ಗಳ ಮೂಲಕವೂ ಬಿಲ್‌ ಪಾವತಿಸಬಹುದು. ವಿವಿಧ ಆಫರ್‌ಗಳ ಸಾಮಗ್ರಿಗಳೂ ಇಲ್ಲಿ ಲಭ್ಯವಿರುತ್ತದೆ. ಹೀಗಾಗಿ ಕಡಿಮೆ ಬೆಲೆಗೆ ಮನೆ ಹತ್ತಿರವೇ ವಸ್ತುಗಳು ಸಿಗುತ್ತಿರುವುದು ಗ್ರಾಮೀಣ ಜನತೆಗೆ ನೆಮ್ಮದಿ ತಂದಿದೆ. ದಿನಸಿ ಸಾಮಗ್ರಿ, ಪಶು ಆಹಾರ ಸೇರಿದಂತೆ ದಿನಬಳಕೆಯ ಅಗತ್ಯ ವಸ್ತುಗಳು ಲಭ್ಯವಿದ್ದು, ಇನ್ನು ತರಕಾರಿ, ಹಾಲು, ಐಸ್‌ಕ್ರೀಂ ಸೇರ್ಪಡೆಯಾಗಲಿದೆ. ಹೋಂ ಡೆಲಿವರಿ ವ್ಯವಸ್ಥೆಯೂ ಈ ಸಹಕಾರಿ ಮಾರ್ಟ್‌ಗಳಲ್ಲಿದೆ.

Follow Us:
Download App:
  • android
  • ios