ಮಾ. 5ರಂದು ತುಮಕೂರಿಗೆ ಸಿಎಂ

ತುಮಕೂರು ನಗರದಲ್ಲಿ ಹಮ್ಮಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಮಾ.5 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಜ್ಯೋತಿ ಗಣೇಶ್‌ ಮಾಹಿತಿ ನೀಡಿದರು.

March 5 th CM will visit to Tumkur  snr

 ತುಮಕೂರು :ತುಮಕೂರು ನಗರದಲ್ಲಿ ಹಮ್ಮಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಮಾ.5 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಜ್ಯೋತಿ ಗಣೇಶ್‌ ಮಾಹಿತಿ ನೀಡಿದರು.

ಮಹಾತ್ಮಗಾಂಧಿ ಕ್ರೀಡಾಂಗಣ, ಡಿಜಿಟಲ… ಲೈಬ್ರರಿ, ಅಮಾನಿಕೆರೆ ಅಭಿವೃದ್ಧಿ, ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಒತ್ತು ನೀಡಿ ಅಭಿವೃದ್ಧಿ ಮಾಡಲಾಗಿದೆ. ಕ್ಯಾತ್ಸಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಸರ್ಕಾರಿ ಪ್ರೌಢಶಾಲೆ, ಹಾಗೂ ಸಿದ್ಧಗಂಗಾ ಮಠದ ವಸ್ತುಪ್ರದರ್ಶನ ಆವರಣದಲ್ಲಿ ಶಾಲಾ ಕಟ್ಟಡ ನಿರ್ಮಾಣ, ತುಮಕೂರು ನಗರದ ಮಹಾತ್ಮಗಾಂಧಿ ಕ್ರೀಡಾ ಸಂಕೀರ್ಣ, ತುಮಕೂರು ನಗರದಲ್ಲಿ ಜಿಮ್ನಾಸ್ಟಿಕ್‌ ಸೆಂಟರ್‌, ನಗರದ ಸರ್ಕಾರಿ ಪಿ.ಯು ಕಾಲೇಜಿನ ಆವರಣದಲ್ಲಿ ಹಿರಿಯ ನಾಗರೀಕರಿಗೆ ಮತ್ತು ಮಕ್ಕಳಿಗೆ ಜಿಮ… ಮತ್ತು ಆಟೋಪಕರಣ ಅಳವಡಿಕೆ, ಕೋರ್ಚ್‌ ಸೇರಿದಂತೆ 14 ಸ್ಥಳಗಳನ್ನು ಅಭಿವೃದ್ಧಿಗೊಳಿಸಲಾಗಿದೆ ಎಂದರು.

ನಗರದ ಸರ್ಕಾರಿ ಮಹಿಳಾ ಕಾಲೇಜಿಗೆ ನೂತನ ಕಟ್ಟಡ, ಎಂಪ್ರೆಸ್‌ ಬಾಲಕಿಯರ ಶಾಲೆಗೆ ಹೊಸ ಕೊಠಡಿಗಳ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿ, ತುಮಕೂರು ವಿಶ್ವವಿದ್ಯಾನಿಲಯ ಆವರಣದಲ್ಲಿ ಸ್ಮಾರ್ಚ್‌ ಸಿಟಿ ಪಾರ್ಕ್ ನಿರ್ಮಾಣ ಸೇರಿದಂತೆ ಹತ್ತು ಹಲವಾರು ಕಾಮಗಾರಿ ಪೂರ್ಣಗೊಂಡಿದ್ದು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ ಎಂದರು.

ಹಾಗೆಯೇ ನಗರದ ರಿಂಗ್‌ ರಸ್ತೆಯ ಪುನರ್‌ ನಿರ್ಮಾಣ ಮತ್ತು ಉನ್ನತೀಕರಣ ಸೇರಿದಂತೆ ವಿವಿಧ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರು ಸರಬರಾಜು ಯೋಜನೆಗಳು, ತುಮಕೂರು ನಗರದಲ್ಲಿ ಸ್ಮಾರ್ಚ್‌ ಸಿಟಿ ವತಿಯಿಂದ ಒಟ್ಟು 20 ನೂತನ ಅಂಗನವಾಡಿಗಳ ನಿರ್ಮಾಣ, ಕೌಶಲ್ಯಾಭಿವೃದ್ಧಿ ಯೋಜನೆಯ ಕಾಮಗಾರಿಗಳು, ಬೀದಿ ದೀಪಗಳ ನಿರ್ವಹಣೆ ಮತ್ತು ಸೌರ ವಿದ್ಯುತ್‌ ಉತ್ಪಾದನೆ ಕಾಮಗಾರಿಗಳು, ಬೀದಿ ಬದಿ ವ್ಯಾಪಾರಿಗಳ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳು, ಕೊಳಗೇರಿ ಅಭಿವೃದ್ಧಿ ಕಾಮಗಾರಿಗಳು, ದೇವಾಲಯಗಳ ಜೀರ್ಣೋದ್ದಾರ ಅಭಿವೃದ್ಧಿ ಕಾಮಗಾರಿಗಳು, ಸಮುದಾಯ ಭವನಗಳ ಮುಂದುವರೆದ ಕಾಮಗಾರಿಗಳ ಅಭಿವೃದ್ಧಿ, ಮತ್ತು ಒಳಚರಂಡಿ ವ್ಯವಸ್ಥೆ 2ನೇ ಹಂತದ ಕಾಮಗಾರಿ ಮತ್ತು ಸ್ಮಶಾನಗಳ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ 300 ಕೋಟಿ ಅಭಿವೃದ್ಧಿ ಕಾಮಗಾರಿ ನಡೆದಿದೆ.

ನಗರದಲ್ಲಿ ಹಿಂದೆ ಇದ್ದ ಮಹಾತ್ಮಗಾಂಧಿ ಕ್ರೀಡಾಂಗಣವನ್ನು ತುಮಕೂರು ಸ್ಮಾರ್ಚ್‌ ಸಿಟಿ ವತಿಯಿಂದ (ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ) ರಾಷ್ಟ್ರೀಯ ಮಟ್ಟದ ಕ್ರೀಡಾಂಗಣವನ್ನಾಗಿ ಮೇಲ್ದರ್ಜೆಗೇರಿಸುವ ಯೋಜನೆಯನ್ನು ತಯಾರಿಸಿ ಕೈಗೆತ್ತಿಕೊಳ್ಳಲಾಗಿದ್ದು, ಸುಮಾರು 54.65 ಕೋಟಿ ರು.ಗಳ ಅನುದಾನದಲ್ಲಿ, ಮಾತೃಗಾಂಧಿ ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ ಇದ್ದ ಆಟದ ಮೈದಾನದಲ್ಲಿ. ನಡೆಸಲಾಗುತ್ತಿದ್ದ ಎಲ್ಲಾ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಅದನ್ನೂ ಸಹ ಒಳಾಂಗಣ ಕ್ರೀಡಾಂಗಣವನ್ನಾಗಿ ಪರಿವರ್ತಿಸಿ, ತುಮಕೂರು ಜಿಲ್ಲೆಯಲ್ಲಿ ಕ್ರೀಡಾಸಕ್ತರಿಗೆ ಮತ್ತು ಕ್ರೀಡಾಪಟುಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ನಗರದ ಎಲ್ಲಾ ಕ್ರೀಡಾಪಟುಗಳು ಮತ್ತು ಕ್ರೀಡಾಸಕ್ತರಿಂದ ತುಮಕೂರು ಸ್ಮಾರ್ಚ್‌ಸಿಟಿ ಲಿಮಿಟೆಡ್‌ ವತಿಯಿಂದ ನಿರ್ಮಿಸಿರುವ ಕ್ರೀಡಾಂಗಣವನ್ನು ಮೇಲ್ದರ್ಜೆಗೇರಿಸಿರುವ ದೂರದೃಷ್ಟಿಗೆ ಮೆಚ್ಚುಗೆ ವ್ಯಕ್ತವಾಗಿದ್ದು , ಕ್ರೀಡಾಂಗಣವು ಸಕಲ ನಿರ್ಮಾಣ ಕಾರ್ಯಗಳನ್ನು ಪೂರ್ಣಗೊಳಿಸಿ ಲೋಕಾರ್ಪಣೆಗೆ ಸಿದ್ಧವಾಗಿದೆ ಎಂದು ತಿಳಿಸಿದರು

ನಾನೇ ಬಿಜೆಪಿಯ ಅಭ್ಯರ್ಥಿ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನೇ ತುಮಕೂರು ನಗರದಿಂದ ಬಿಜೆಪಿ ಅಭ್ಯರ್ಥಿ ಎಂದು ಇದೇ ಸಂದರ್ಭದಲ್ಲಿ ಶಾಸಕ ಜ್ಯೋತಿ ಗಣೇಶ್‌ ಸ್ಪಷ್ಟಪಡಿಸಿದರು. ನಾನು ಬೇರೆ ಪಕ್ಷಕ್ಕೆ ಹೋಗುತ್ತೇನೆ ಎಂಬ ವದಂತಿಗಳು ಹರಡಿದ್ದು, ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವ ಆಲೋಚನೆ ಇಲ್ಲ ಎಂದು ಹೇಳಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ನಗರ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿಯಾಗಿರುತ್ತೇನೆ. ಏಪ್ರಿಲ… ವರೆಗೆ ಕಾದು ನೋಡಿ. ನನ್ನ ಅಭಿವೃದ್ಧಿ ಪರಿಗಣಿಸಿ ಪಕ್ಷ ಮುಖಂಡರು ನನಗೆ ಟಿಕೆಚ್‌ ನೀಡಲಿದ್ದಾರೆ. ಟಿಕೆಚ್‌ ನೀಡುವಾಗ ಯಾರು ಗೆಲ್ಲುತ್ತಾರೆ ಎಂಬುದನ್ನು ಸಹ ಪಕ್ಷ ಪರಿಗಣನೆಗೆ ತೆಗೆದುಕೊಳ್ಳಲಿದೆ. 2018ರಲ್ಲಿ ನನಗೆ ಟಿಕೆಚ್‌ ನೀಡುವಾಗ ಪ್ರತಿರೋಧ ಇದ್ದರೂ ಗೆದ್ದು ಬಂದಿದ್ದೇನೆ ಎಂದು ಟಿಕೆಚ್‌ ನೀಡುವುದನ್ನು ಸಮರ್ಥಿಸಿಕೊಂಡರು. 2018 ರಲ್ಲಿ ಯಡಿಯೂರಪ್ಪನವರು ಟಿಕೆಟ್‌ ಕೊಟ್ಟು ಆಶೀರ್ವಾದ ಮಾಡಿದರು. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಆಶೀರ್ವಾದದಿಂದ ಗೆದ್ದಿದ್ದೇನೆ. ಹಾಗೆಯೇ ಚುನಾವಣಾ ಸಂದರ್ಭದಲ್ಲಿ ಅಮಿತ್‌ ಷಾ, ಮೋದಿ ಅವರು ಬಂದು ನಮ್ಮನ್ನು ಟೇಕಾಫ್‌ ಮಾಡಿದ್ದರು. ಲೋಕಸಭೆಗೆ ಹೋಗುವಂತಹ ಯಾವುದೇ ಸನ್ನಿವೇಶವಿಲ್ಲ. ನನ್ನ ಇದುವರೆಗೆ ಯಾರೂ ಕೇಳಿಲ್ಲ. ಅಂತಹ ಯಾವುದೇ ಚರ್ಚೆ ಕೂಡ ಆಗಿಲ್ಲ ಎಂದರು. ಆ ರೀತಿಯಾಗಿದ್ದರೆ ನಾನೇ ಹೇಳುತ್ತಿದ್ದೆ. ನಾನು ಇಲ್ಲೇ ಇದ್ದು ನರೇಂದ್ರ ಮೋದಿ ಅವರನ್ನು ದೇಶದಲ್ಲಿ ಮತ್ತೆ ಅಧಿಕಾರಕ್ಕೆ ತರುವ ಕೆಲಸ ಮಾಡುವುದಾಗಿ ತಿಳಿಸಿದರು.

Latest Videos
Follow Us:
Download App:
  • android
  • ios