ಉತ್ತರ ಪ್ರದೇಶದಲ್ಲಿ ಹಲವಾರು ನಾಯಕರು  ಬಿಜೆಪಿ ಸೇರ್ಪಡೆ ಕರ್ನಾಟಕದಲ್ಲಿ ಒಂದು ವರ್ಷ ಚುನಾವಣೆ ಇರುವಾಗ ರಾಜ್ಯ ಕಾಂಗ್ರೆಸ್‌ನ ಹಲವಾರು ಮುಖಂಡರು ಬಿಜೆಪಿಗೆ 15 ಜನ ಕಾಂಗ್ರೆಸ್  ಶಾಸಕರನ್ನು ಕರೆದುಕೊಂಡು ಬಂದು ನಮ್ಮ ತಾಕತ್ತು ತೋರಿಸಿದ್ದೇವೆ -ಅಶೋಕ್

ಹಾಸನ (ಜು.01): ಉತ್ತರ ಪ್ರದೇಶದಲ್ಲಿ ಹಲವಾರು ನಾಯಕರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಕರ್ನಾಟಕದಲ್ಲಿ ಒಂದು ವರ್ಷ ಚುನಾವಣೆ ಇರುವಾಗ ರಾಜ್ಯ ಕಾಂಗ್ರೆಸ್‌ನ ಹಲವಾರು ಮುಖಂಡರು ಬಿಜೆಪಿ ಸೇರುತ್ತಾರೆ ಎಂದು ಸಚಿವ ಆರ್. ಅಶೋಕ್ ಹೇಳಿದರು.

ಬುಧವಾರ ಹಾಸನದಲ್ಲಿ ಮಾತನಾಡಿದ ಸಚಿವ ಅಶೋಕ್ ನಾವು 15 ಜನ ಕಾಂಗ್ರೆಸ್ ಶಾಸಕರನ್ನು ಕರೆದುಕೊಂಡು ಬಂದು ನಮ್ಮ ತಾಕತ್ತು ತೋರಿಸಿದ್ದೇವೆ ಎಂದರು.

ಸಚಿವರೆದುರೆ ಶಾಸಕರ ಟಾಕ್‌ವಾರ್ : ವೇದಿಕೆ ವಿಚಾರಕ್ಕೆ ಅಸಮಾಧಾನ ...

ಸರ್ಕಾರ ರಚಿಸಲು ರಮೇಶ್ ಜಾರಕಿಹೊಳಿ ಸಹ ಕಾರಣರಾಗಿದ್ದಾರೆ. ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಕೇಂದ್ರ ನಾಯಕರು ತಿರ್ಮಾನ ಮಾಡುತ್ತಾರೆ. 

ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಪಕ್ಷದ ಬಗ್ಗೆ ಮಾತನಾಡದಂತೆ ಸ್ಪಷ್ಟ ನಿರ್ಧಾರ ಮಾಡಿದ್ದಾರೆ. ಮಾತನಾಡಿದವರ ವಿರುದ್ಧ ಹೈ ಕಮಾಂಡ್‌ಗೆ ವರದಿ ಸಲ್ಲಿಸುತ್ತೇವೆ ಎಂದರು ಸಚಿವ ಅಶೋಕ್.