The Kashmir Files Free Download ಲಿಂಕ್‌ ಬಗ್ಗೆ ಸೈಬರ್‌ ತಜ್ಞರ ಎಚ್ಚರಿಕೆ!

'ಕಾಶ್ಮೀರ್ ಫೈಲ್ಸ್' ಫ್ರೀ ಡೌನ್ ಲೋಡ್ ಲಿಂಕ್ ಹೆಸರಲ್ಲಿ ದಾಳಿ ಮಾಡುವ ಕೆಲಸವನ್ನು ಸೈಬರ್ ಹ್ಯಾಕರ್ಸ್ ಆರಂಭಿಸಿದ್ದಾರೆ
 

Cyber Experts warn against The Kashmir Files free download links on WhatsApp and social media mnj

ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್. ಮಂಗಳೂರು

ಮಂಗಳೂರು (ಮಾ. 19): ಭಾರತದ ಟ್ರೆಂಡಿಂಗ್ ಸಿನಿಮಾ ದಿ ಕಾಶ್ಮೀರ್ ಫೈಲ್ಸ್ (The Kashmir Files) ಮೂಲಕ ಸೈಬರ್ ಹ್ಯಾಕರ್ಸ್ ದಾಳಿ ಆರಂಭಿಸಿದ್ದು, ಉಚಿತ ಸಿನಿಮಾ ನೋಡುವ ಆಸೆಗೆ ಬಿದ್ದರೆ ಸೈಬರ್ ದಾಳಿಗೆ ಒಳಗಾಗುವುದು ಫಿಕ್ಸ್ ಎಂದು ಮಂಗಳೂರಿನ ಸೈಬರ್ ತಜ್ಞ ಡಾ.ಅನಂತ ಪ್ರಭು ಎಚ್ಚರಿಕೆ ನೀಡಿದ್ದಾರೆ. 'ಕಾಶ್ಮೀರ್ ಫೈಲ್ಸ್' ಫ್ರೀ ಡೌನ್ ಲೋಡ್ ಲಿಂಕ್ ಹೆಸರಲ್ಲಿ ದಾಳಿ ಮಾಡುವ ಕೆಲಸವನ್ನು ಸೈಬರ್ ಹ್ಯಾಕರ್ಸ್ ಆರಂಭಿಸಿದ್ದಾರೆ. ಪರಿಣಾಮ ಸಾಮಾಜಿಕ ತಾಣಗಳಲ್ಲಿ 'ಕಾಶ್ಮೀರ್ ಫೈಲ್ಸ್' ಫ್ರೀ ಡೌನ್ ಲಿಂಕ್ ವೈರಲ್ ಆಗುತ್ತಿದೆ. ಡೌನ್ ಲೋಡ್ ಲಿಂಕ್ ಒತ್ತಿದ್ರೆ ಸೈಬರ್ ಹ್ಯಾಕರ್ಸ್ ವೈರಸ್ ದಾಳಿ ಫಿಕ್ಸ್ ಎಂದು ಸೈಬರ್ ತಜ್ಞ ಅನಂತ ಪ್ರಭು ಎಚ್ಚರಿಕೆ ನೀಡಿದ್ದಾರೆ. 

ಉಚಿತ ಸಿನಿಮಾ ಆಸೆಗೆ ಬಿದ್ರೆ ಬ್ಯಾಂಕ್ ಮಾಹಿತಿ ಲೀಕ್!:  ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಡಾ.ಅನಂತ ಪ್ರಭು, ಆಂಡ್ರಾಯ್ಡ್ ಫೋನ್ ಮತ್ತು ಲ್ಯಾಪ್ ಟಾಪ್ ಡಾಟಾ ಕದಿಯಲು 'ಕಾಶ್ಮೀರ್ ಫೈಲ್ಸ್' ಬಳಕೆ ಮಾಡಲಾಗುತ್ತಿದೆ. ಬ್ಯಾಂಕ್ ಮಾಹಿತಿ ಸೇರಿ ಎಲ್ಲಾ ಖಾಸಗಿ ಡಾಟಾಗಳು ಹ್ಯಾಕರ್ಸ್ ಪಾಲಾಗುವ ಸಾಧ್ಯತೆ ಇದೆ. ಉಚಿತವಾಗಿ 'ಕಾಶ್ಮೀರ್ ಫೈಲ್ಸ್' ನೋಡುವ ಆಸೆಗೆ ಬಿದ್ದರೆ ಅಪಾಯ ಫಿಕ್ಸ್. ಬ್ಯಾಂಕ್ ಅಕೌಂಟ್ ಮಾಹಿತಿ ಪಡೆದು ಹಣ ಲೂಟಿ ಸಾಧ್ಯತೆ ಎಂದು ಎಚ್ಚರಿಕೆ ನೀಡಿದ್ದಾರೆ. 

ಇದನ್ನೂ ಓದಿ: 7 ದಿನದಲ್ಲಿ ₹100 ಕೋಟಿ ಗಳಿಸಿದ ‘The Kashmir Files’: ₹15 ಕೋಟಿ ವೆಚ್ಚದ ಚಿತ್ರ ಈಗ ಬ್ಲಾಕ್‌ಬಸ್ಟರ್‌!

ಸದ್ಯ ಗೂಗಲ್ ನಲ್ಲಿ 'ಕಾಶ್ಮೀರ್ ಫೈಲ್ಸ್' ಕೀ ವರ್ಡ್ ಟ್ರೆಂಡಿಂಗ್ ಆಗಿದೆ. ಜೊತೆಗೆ How to download Kashmir files ಸದ್ಯ ಭಾರತದಲ್ಲಿ ಟ್ರೆಂಡ್ ನಲ್ಲಿದೆ. ಗೂಗಲ್, ಟ್ವಿಟರ್ ಸೇರಿ ಸಾಮಾಜಿಕ ತಾಣಗಳಲ್ಲಿ 'ಕಾಶ್ಮೀರ್ ಫೈಲ್ಸ್' ಕೀ ವರ್ಡ್ ಹೊಸ ಹವಾ ಎಬ್ಬಿಸಿದೆ. ಹೀಗಾಗಿ ಈ ಟ್ರೆಂಡಿಂಗ್ ಮೇಲೆ‌ ಕಣ್ಣಿಟ್ಟು ಸೈಬರ್ ಹ್ಯಾಕರ್ಸ್ ದಾಳಿ ಮಾಡುತ್ತಿದ್ದಾರೆ. 

ಕಾಶ್ಮೀರ್ ಫೈಲ್ಸ್' ಹೆಸರಲ್ಲಿ ಸೈಬರ್ ದಾಳಿ: ಉಕ್ರೇನ್-ರಷ್ಯಾ ಯುದ್ಧದ ಟ್ರೆಂಡ್ ಬಳಿಕ 'ಕಾಶ್ಮೀರ್ ಫೈಲ್ಸ್' ಹೆಸರಲ್ಲಿ ಸೈಬರ್ ದಾಳಿ ನಡೆಯುತ್ತಿದ್ದು, 'ಕಾಶ್ಮೀರ್ ಫೈಲ್ಸ್' ಹೆಸರಿನ ಲಿಂಕ್ ಬಂದ್ರೆ ಒತ್ತುವ ಮುನ್ನ ಎಚ್ಚರ. ಅಂಥಹ ಲಿಂಕ್ ಬಂದ್ರೆ ಸೈಬರ್ ವೆಬ್ ಸೈಟ್ ಮೂಲಕ ಪರೀಕ್ಷಿಸಿ. ಲಿಂಕ್ ಕಾಪಿ ಮಾಡಿ VIRUSTOTAL.COM ಮೂಲಕ ಪರೀಕ್ಷಿಸಿ ಎಂದು ಡಾ.ಅನಂತ ಪ್ರಭು ಎಚ್ಚರಿಕೆ ನೀಡಿದ್ದಾರೆ. ಅಂತಾರಾಷ್ಟ್ರೀಯ ಸೈಬರ್ ತಜ್ಞರೂ ಆಗಿರೂ ಅನಂತ ಪ್ರಭು, ಪೊಲೀಸ್ ಇಲಾಖೆಗೂ ಸೈಬರ್ ತಂತ್ರಜ್ಞಾನದ ಬಗ್ಗೆ ತರಬೇತಿ ನೀಡುತ್ತಿದ್ದಾರೆ.

ಇದನ್ನೂ ಓದಿ: The Kashmir Files ಕನ್ನಡ ಅವತರಣಿಕೆಯಲ್ಲಿ ಬಿಡುಗಡೆ ಮಾಡಲು ರಾಜ್ಯ ಬಿಜೆಪಿ ಚಿಂತನೆ

ಮೊಬೈಲ್‌ನ ವಾಟ್ಸಪ್‌ ಜಾಲತಾಣದಲ್ಲಿ ಕಾಶ್ಮೀರ್‌ ಫೈಲ್ಸ್‌ ಚಿತ್ರದ ಫ್ರೀ ಡೌನ್‌ಲೋಡ್‌ ಲಿಂಕ್‌ ಹರಿದಾಡುತ್ತಿದ್ದು, ಅದನ್ನು ಒತ್ತಿದಲ್ಲಿ ವೈರಸ್‌ ದಾಳಿಗೆ ಒಳಗಾಗಬೇಕಾಗುತ್ತದೆ. ಡೌನ್‌ಲೋಡ್‌ ಲಿಂಕ್‌ ಹೆಸರಲ್ಲಿ ಸೈಬರ್‌ ಹ್ಯಾಕರ್ಸ್‌ ವೈರಸ್‌ ಕಳುಹಿಸುತ್ತಿದ್ದು ಅದರ ಮೂಲಕ ಆಂಡ್ರಾಯ್ಡ್ ಫೋನ್‌ ಅಥವಾ ಲ್ಯಾಪ್‌ ಟಾಪ್‌ನಲ್ಲಿ ಇರುವ ಮಾಹಿತಿಗಳನ್ನು ಕದಿಯುವ ಸಾಧ್ಯತೆ ಇರುತ್ತದೆ ಎಂದು ಡಾ.ಅನಂತ ಪ್ರಭು ಎಚ್ಚರಿಸಿದ್ದಾರೆ.

Latest Videos
Follow Us:
Download App:
  • android
  • ios