ಗಂಡ ತನಗಿಂತ ಹೆಚ್ಚಾಗಿ ಸಾಕು ಬೆಕ್ಕನ್ನು ಪ್ರೀತಿಸುತ್ತಾನೆ ಎಂದು ಆರೋಪಿಸಿ ಪತ್ನಿ ವರದಕ್ಷಿಣೆ ಕೇಸ್ ಹಾಕಿದ್ದಳು. ಈ ಪ್ರಕರಣದಲ್ಲಿ ಹೈಕೋರ್ಟ್ ಪತ್ನಿಯ ಮೇಲೆ ಕಿಡಿಕಾರಿದ್ದು, ಪತಿಯ ಮೇಲಿನ ತನಿಖೆಗೆ ತಡೆ ನೀಡಿದೆ.

ಬೆಂಗಳೂರು (ಡಿ.13): ಗಂಡ ತನಗಿಂತ ಜಾಸ್ತಿ ತಾನು ಸಾಕಿದ ಬೆಕ್ಕನ್ನೇ ಪ್ರೀತಿ ಮಾಡ್ತಾನೆ ಎನ್ನುವ ಕಾರಣ ನೀಡಿ ವರದಕ್ಷಿಣೆ ಕೇಸ್‌ ಹಾಕಿದ್ದ ಮಹಿಳೆಯ ಮೇಲೆ ಕರ್ನಾಟಕ ಹೈಕೋರ್ಟ್‌ ಕಿಡಿಕಾರಿದೆ. ಪತ್ನಿ ಮಾಡಿದ ಪ್ರಾಥಮಿಕ ಆರೋಪವನ್ನು ಗಮನಿಸಿದ ಹೈಕೋರ್ಟ್‌, ಪತಿಯ ಮೇಲಿನ ಮುಂದಿನ ಎಲ್ಲಾ ರೀತಿಯ ತನಿಖೆಗೆ ತಡೆ ನೀಡಿದೆ. ದಂಪತಿ ಬೆಂಗಳೂರಿನವರಾಗಿದ್ದು, ತನ್ನ ವಿರುದ್ಧ ಪತ್ನಿ ಸಲ್ಲಿಸಿದ್ದ ಐಪಿಸಿ ಸೆಕ್ಷನ್‌ 498ಎ (ವರದಕ್ಷಿಣೆ ಕಿರುಕುಳ) ಅಡಿಯಲ್ಲಿನ ವಿಚಾರಣೆಯನ್ನು ಪತಿ ಪ್ರಶ್ನೆ ಮಾಡಿದ್ದರು.

ಯುವತಿ ನೀಡಿರುವ ದೂರು ಮದುವೆ ಮತ್ತು ಒಟ್ಟಿಗೆ ವಾಸಿಸುವ ಬಗೆಗಿನ ನಿರೂಪಣೆಯಾಗಿದೆ. ಆದರೆ, ಆಕೆ ಮಾಡಿರುವ ಆಪಾದನೆ ಏನೆಂದರೆ, ಗಂಡನ ಮನೆಯಲ್ಲಿ ಇರುವ ಸಾಕು ಬೆಕ್ಕಿನ ಜಗಳದ ಮೇಲೆ ಆಧಾರವಾಗಿದೆ. ಗಂಡ ತನಗಿಂತ ಮೆದ್ದಾಗಿ ಬೆಕ್ಕನ್ನೇ ಮುದ್ದು ಮಾಡುತ್ತಾನೆ ಅನ್ನೋದೇ ಆಕೆಯ ಪ್ರಾಥಮಿಕ ಆರೋಪವಾಗಿದೆ. ಇದನ್ನು ಪತ್ನಿ ಬೊಟ್ಟು ಮಾಡಿದಾಗಲೆಲ್ಲ ಇಬ್ಬರ ನಡುವೆ ವಾಗ್ವಾದ ನಡೆದು ದೌರ್ಜನ್ಯ ಎಸಗಿದ್ದಾರೆ ಎಂದು ಆಕೆ ದೂರಿದ್ದಾಳೆ. ದೂರಿನ ಬಹುತೇಕ ಪ್ಯಾರಾಗಳಲ್ಲಿ ಅದನ್ನೇ ನಿರೂಪಿಸಲಾಗಿದೆ. ಆದ್ದರಿಂದ, ವಿಷಯವು ವರದಕ್ಷಿಣೆ ಬೇಡಿಕೆ ಅಥವಾ ವರದಕ್ಷಿಣೆಯ ಬೇಡಿಕೆಯ ಮೇಲೆ ಹಲ್ಲೆ ಅಥವಾ ಪತಿಯಿಂದ ಕ್ರೌರ್ಯಕ್ಕೆ ಸಂಬಂಧಿಸಿದ್ದಲ್ಲ. ಇದು ಸಾಕು ಬೆಕ್ಕು ಹಾಗೂ ಆ ಬೆಕ್ಕು ಆಕೆಯ ಮೇಲೆ ದಾಳಿ ಮಾಡಿ, ಆಕೆಯನ್ನು ಪರಚಿದ್ದರ ಸಮಸ್ಯೆಯಾಗಿದೆ' ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಹೇಳಿದರು.

Justice is Due ಎಂದು ಬರೆದು ಸಾವಿಗೆ ಶರಣಾದ ಯುವಕನ 12 ಕೊನೆಯ ಆಸೆ, ಈಡೇರಿಸುತ್ತಾ ನಮ್ಮ ಸಮಾಜ?

ಅದರೊಂದಿಗೆ ಯುವತಿ ಮಾಡಿರುವ ದೂರಿನಲ್ಲಿನ ದುರುದ್ದೇಶವನ್ನು ಕೂಡ ಕೋರ್ಟ್‌ ಗಮನಿಸಸಿದೆ. IPC 498A ಅಡಿಯಲ್ಲಿ ಅಪರಾಧಕ್ಕೆ ಅಗತ್ಯವಾದ ಯಾವುದೇ ಅಂಶಗಳು ಈ ಪ್ರಕರಣದಲ್ಲಿ ದೂರದ ಅರ್ಥದಲ್ಲಿಯೂ ಇರುವುದಿಲ್ಲ ಎಂದು ಹೇಳಿದೆ. "ಇಂತಹ ಕ್ಷುಲ್ಲಕ ಪ್ರಕರಣಗಳು ಇಂದು ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಮುಚ್ಚಿಹಾಕಿವೆ ಮತ್ತು ಪ್ರಸ್ತುತ ಪ್ರಕರಣದಲ್ಲಿ ತನಿಖೆಗೆ ಅನುಮತಿ ನೀಡಿದರೆ ಅದು ಈಗಾಗಲೇ ಮುಚ್ಚಿಹೋಗಿರುವ ನ್ಯಾಯ ವ್ಯವಸ್ಥೆಗೆ ಮತ್ತೊಂದು ಪ್ರಕರಣವನ್ನು ಸೇರಿಸುತ್ತದೆ" ಎಂದು ನ್ಯಾಯಾಲಯ ಹೇಳಿದೆ.

JUSTICE IS DUE ಹೆಣ್ಣು ಮಕ್ಕಳಿಗೆ ಇರೋ ನ್ಯಾಯ ಗಂಡಸರಿಗೆ ಯಾಕಿಲ್ಲ!