ಮಂಗಳೂರು(ಜ.01): ಮಂಗಳೂರಿನ ತಲಪಾಡಿ ಟೋಲ್‌ ಗೇಟ್‌ನಲ್ಲಿ ಟೋಲ್‌ ಸಂಗ್ರಹ ಸ್ಥಗಿತಗೊಳಿಸಲಾಗಿದೆ. ಮಂಗಳೂರು ಫ್ಲೈ ಓವರ್ ಉದ್ಘಾಟನೆಯಾಗದ ಹಿನ್ನೆಲೆಯಲ್ಲಿ ಟೋಲ್ ಸಂಗ್ರಹ ನಿಲ್ಲಿಸುಂತೆ ನಳಿನ್ ಕುಮಾರ್ ಕಟೀಲ್ ಹೇಳಿದ್ದರು.

ಇಂದು ಸಂಜೆ 6 ಗಂಟೆಯವರೆಗೆ ತಲಪಾಡಿ ಟೋಲ್ ಗೇಟ್ ಬಂದ್ ಇರಲಿದೆ. ಮಂಗಳೂರು ಹೊರವಲಯದ ಕೇರಳ ಗಡಿ ಭಾಗದ ತಲಪಾಡಿಯಲ್ಲಿ ಬಿಜೆಪಿ ಕಾರ್ಯಕರ್ತರ ಅಡ್ಡಿ ಹಿನ್ನೆಲೆ ಟೋಲ್ ಸಂಗ್ರಹ ಸ್ಥಗಿತಗೊಳಿಸಲಾಗಿದೆ.

ಮೈಸೂರು: ನ್ಯೂ ಇಯರ್‌ ದಿನ ಪೆಟ್ರೋಲ್‌ಗಾಗಿ ಫೈಟ್‌..!

ನವಯುಗ ಸಂಸ್ಥೆಗೆ ಪ್ರತಿಭಟನೆ ಬಗ್ಗೆ ಮಾಹಿತಿ ನೀಡಿದ ಟೋಲ್ ಮ್ಯಾನೇಜರ್ ಸಂಜೆ 6 ಗಂಟೆವರೆಗೆ ಟೋಲ್ ಸ್ಥಗಿತಗೊಳಿಸಲು ಬಿಜೆಪಿ ಶಾಸಕರು ಸೂಚನೆ ನೀಡಿದ್ದಾರೆ. ಇಲ್ಲದೇ ಇದ್ದಲ್ಲಿ ಬಲವಂತವಾಗಿ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಟೋಲ್ ಗೇಟ್ ಸಂಜೆ 6ರವರೆಗೆ ಬಂದ್ ಇರಲಿದೆ ಎಂದಿದ್ದಾರೆ.

ಜ.31ರ ಒಳಗೆ ಪಂಪ್ ವೆಲ್ ಫ್ಲೈ ಓವರ್ ಮುಗಿಯದೇ ಇದ್ದರೆ ಟೋಲ್ ಸಂಪೂರ್ಣ ಬಂದ್ ‌ಮಾಡುವ ಎಚ್ಚರಿಕೆ ನೀಡಿದ್ದರು. ಮಂಗಳವಾರ ನಡೆದ ಸಭೆಯಲ್ಲಿ ಸಂಸದ ಳಿನ್ ಕುಮಾರ್ ಕಟೀಲ್ ಫ್ಲೈಓವರ್ ಪೂರ್ಣವಾಗದ ಹಿನ್ನೆಲೆ ಟೋಲ್ ಸ್ವೀಕರಿಸುವುದನ್ನು ನಿಲ್ಲಿಸಬೇಕು ಎಂದಿದ್ದರು.

ಗರ್ಭಿಣಿಯರ ತುತ್ತಿಗೂ ಕುತ್ತು, ಅಕ್ಕಿ ಕದಿಯುವ ಅಧಿಕಾರಿಗಳ ಗೋಲ್ಮಾಲ್