ಮಂಗಳೂರು(ಮೇ.02): ಕೊರೋನಾ ಕಾಟ ನವ ವಿವಾಹಿತನನ್ನೂ ಬಿಟ್ಟಿಲ್ಲ. ಲಾಕ್‌ಡೌನ್‌ ನಡುವೆಯೇ ಸಿಂಪಲ್ ಮದುವೆಯಾದ ಯುವಕನಿಗೆ ಫಸ್ಟ್‌ನೈಟ್ ಕ್ಯಾನ್ಸಲ್ ಆಗಿದೆ. ಕಾರಣ ಕೊರೋನಾ ಭೀತಿ. ಸಂಜೆ ಮದುವೆ ಮುಗಿಸಿ ಬಂದ ವರನನ್ನು ಕ್ವಾರೆಂಟೈನ್‌ನಲ್ಲಿಡಲಾಗಿದೆ.

ಕೊರೋನಾ ಲಾಕ್ ಡೌನ್ ಹಿನ್ನೆಲೆ ನವ ವಿವಾಹಿತನಿಗೆ ಹೋಂ ಕ್ವಾರಂಟೈನ್‌ಗೆ ನಿಗದಿ ಮಾಡಲಾಗಿದೆ. ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನಲ್ಲಿ ಘಟನೆ ನಡೆದಿದ್ದು, ಕಾರ್ಕಳದ ಬೋಳ ಗ್ರಾಮದ ನವ ವಿವಾಹಿತನಿಗೆ ಫಸ್ಟ್‌ ನೈಟ್‌ ಕ್ಯಾನ್ಸಲ್ ಆಗಿದೆ.

ಸ್ನೇಹಿತನ ಮೊದಲ ರಾತ್ರಿಗೆ ಸ್ನೇಹಿತರ ವಿಶ್ ! ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಮಂಗಳೂರನಲ್ಲಿ ಖಾಸಗಿ ಉದ್ಯೋಗಿಯಾಗಿರುವ ವರನ ಮದುವೆ ಕಾಪು ತಾಲೂಕು ಕುತ್ಯಾರಿನಲ್ಲಿ ನಡೆದಿತ್ತು. ಮದುವೆ ಮುಗಿಸಿ ಸಂಜೆ ಮನೆಗೆ ಬಂದ‌ ವಿವಾಹಿತನಿಗೆ ಕ್ವಾರಂಟೈನ್ ವಿಧಿಸಲಾಗಿದೆ.

ವಿವಿಧ ಪ್ರಕರಣಗಳಲ್ಲಿ 26ಮಂದಿಗೆ ಹೋಂ ಕ್ವಾರಂಟೈನ್ ನೀಡಲಾಗಿದೆ. ಉಡುಪಿ ಜಿಲ್ಲಾ ಗಡಿ ಸಂಪೂರ್ಣ‌ ಬಂದ್ ಮಾಡಲಾಗಿದ್ದು, ದ.ಕಜಿಲ್ಲೆಯ ಜನರು ಒಳದಾರಿಯಿಂದ ಆಗಮಿಸುತ್ತಿದ್ದಾರೆ.

ಲೈಂಗಿಕ ಕ್ರಿಯೆಯಿಂದ ಕೊರೋನಾ ವೈರಸ್ ಹರಡದು!

ಕಾರ್ಕಳ ತಾಲೂಕಿನ ಹಲವೆಡೆಗಳಲ್ಲಿ ಕ್ವಾರಂಟೈನ್ ಮಾಡಿದ ಆರೋಗ್ಯ ಇಲಾಖೆ ಕಾರ್ಕಳಕ್ಕೆ ಆಗಮಿಸಿದ‌ ಹೊರ‌ಜಿಲ್ಲೆಯ ಜನರಿಗೆ ಕ್ವಾರಂಟೈನ್ ವಿಧಿಸಿದೆ. ಬೆಂಗಳೂರು, ಮಂಗಳೂರು, ದಾವಣಗೆರೆ, ಬಂಟ್ವಾಳದಿಂದ ಬಂದಿದ್ದ ಒಟ್ಟು 20 ಜನಕ್ಕೆ ಗೃಹ ದಿಗ್ಬಂಧನ ಮಾಡಲಾಗಿದೆ. ಆಶಾ ಕಾರ್ಯಕರ್ತೆಯರು ಪರಿಸರದ ಜನರಿಂದ‌ ಮಾಹಿತಿ ಪಡೆದಿದ್ದಾರೆ. ಅಜೆಕಾರಿನಲ್ಲಿ ಮಂಗಳೂರಿಗೆ ಮದುವೆಗೆ ಹೋಗಿದ್ದ 8 ಮಂದಿಗೂ ಕ್ವಾರಂಟೈನ್ ವಿಧಿಸಲಾಗಿದೆ.