ಲೈಂಗಿಕ ಕ್ರಿಯೆಯಿಂದ ಕೊರೋನಾ ವೈರಸ್ ಹರಡದು!
ಜಗತ್ತಿನ ನಿದ್ದೆಗೆಡಿಸಿರುವ ಕೊರೋನಾ ನಿಯಂತ್ರಿಸಲು ನಾನಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೀಗಿರುವಾಗ ಅನೇಕ ಊಹಾ ಪೋಹಗಳು ಜನರನ್ನು ಭಯ ಭೀತರನ್ನಾಗಿಸಿವೆ. ಸದ್ದಿಲ್ಲದೇ ಹರಡುವ ಕೊರೋನಾ ತಮಗೂ ಬಾಧಿಸದಿರಲಿ ಎಂದು ಜನರು ಜಾಗರೂಕತೆಯಿಂದ ಇದ್ದಾರೆ. ಹೀಗಿರುವಾಗ ಅಮೆರಿಕದಲಲ್ಲಿ ನಡೆದ ಅಧ್ಯಯನದಲ್ಲಿ ಲೈಂಗಿಕ ಕ್ರಿಯೆ ನಡೆಸುವುದರಿಂದ ಕೊರೋನಾ ಸೋಂಕು ಹರಡುವುದಿಲ್ಲ ಎಂಬುವುದು ಸಾಬೀತಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ಇಲ್ಲಿದೆ.
ಲೈಂಗಿಕವಾಗಿ ಅಥವಾ ಪುರುಷನ ವೀರ್ಯದಿಂದ ಕೊರೋನಾ ವೈರಸ್ ಹರಡುವ ಸಾಧ್ಯತೆ ಇಲ್ಲ ಎಂದು ಅಧ್ಯಯನವೊಂದು ತಿಳಿಸಿದೆ.
ಅಮೆರಿಕದ ಫರ್ಟಿಲಿಟಿ ಆ್ಯಂಡ್ ಸ್ಟೆರಿಲಿಟಿ ಎಂಬ ಜರ್ನಲ್‌ನಲ್ಲಿ ಈ ಅಧ್ಯಯನ ವರದಿಯನ್ನು ಪ್ರಕಟಿಸಲಾಗಿದೆ.
ಇತ್ತೀಚೆಗೆ ಕೊರೋನಾ ವೈರಸ್‌ಗೆ ತುತ್ತಾದ ವ್ಯಕ್ತಿಯನ್ನು ಅಧ್ಯಯನಕ್ಕಾಗಿ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಈ ವೇಳೆ ಪುರುಷನ ವೀರ್ಯ ಅಥವಾ ವೃಷಣಗಳ ಮೂಲಕ ಕೊರೋನಾ ವೈರಸ್ ಹರಡುವುದಿಲ್ಲ ಎಂಬ ಸಂಗತಿ ತಿಳಿದುಬಂದಿದೆ.
ಒಂದು ವೇಳೆ ಕೊರೋನಾ ವೈರಸ್ ಲೈಂಗಿಕವಾಗಿ ವರ್ಗಾವಣೆ ಆಗುವುದಾಗಿದ್ದರೆ, ಅದು ರೋಗವನ್ನು ತಡೆಗಟ್ಟಲು ದೊಡ್ಡ ತೊಡಕಾಗುತ್ತಿತ್ತು.
ಪುರುಷನ ಸಂತಾನೋತ್ಪತ್ತಿಯ ಆರೋಗ್ಯದ ಮೇಲೂ ದೂರಗಾಮಿ ಪರಿಣಾಮವನ್ನು ಉಂಟು ಮಾಡುತ್ತಿತ್ತು ಎಂದು ಅಧ್ಯಯನ ವರದಿ ತಿಳಿಸಿದೆ.
ಲಾಕ್‌ಡೌನ್ ಆಗಿದ್ದು, ಲೈಂಗಿಕ ಕಾರ್ಯಕರ್ತೆಯರೂ ಸಾಕಷ್ಟು ಕಷ್ಟ ಅನುಭವಿಸುವಂತಾಗಿದೆ. ಮುಂಬೈ ಕಾಮಾಟಿಪುರದ ಕಾರ್ಯಕರ್ತಯರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಎದುರಾಗುತ್ತಿದೆ.
ಕೊರೋನಾ ಸೋಂಕು ಬಹುತೇಕ ಎಚ್‌ಐವಿಯಂತೆಯೇ ದೇಹದ ರೋಗ ನಿರೋಧಕ ಶಕ್ತಿಯನ್ನು ಕುಂದಿಸುವ ಲಕ್ಷಣ ಹೊಂದಿದ್ದು, ಲೈಂಗಿಕ ಸಂಪರ್ಕದಿಂದ ರೋಗ ಹಬ್ಬುತ್ತಿದೆ ಎಂದೇ ಕೆಲವರು ನಂಬಿದ್ದಾರೆ.