ಉಡುಪಿ(ಏ.18): ಲಾಕ್‌ಡೌನ್‌ನಿಂದ ಆಹಾರ - ನೀರು ಸಿಗದೆ ಕಂಗಾಲಾಗಿರುವ ಉಡುಪಿ ಜಿಲ್ಲೆಯ ಅನಾಥ ಬೀದಿ ನಾಯಿಗಳಿಗೆ ಪ್ರತಿದಿನ ಆಹಾರ ನೀಡುವಂತೆ ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾಡಳಿತ ಆದೇಶಿಸಿದೆ. ಅದಕ್ಕಾಗಿ ಪ್ರತಿ ಪಂಚಾಯಿತಿಗೂ ಅನುದಾನ ಬಿಡುಗಡೆ ಮಾಡಿದೆ.

ಲಾಕ್‌ಡೌನ್‌ನಿಂದ ಜಿಲ್ಲೆಯಲ್ಲಿ ಸಂಕಷ್ಟಕ್ಕೊಳಗಾಗಿದ್ದ 10 ಸಾವಿರಕ್ಕೂ ಅಧಿಕ ವಲಸೆ ಕಾರ್ಮಿಕರು ಮತ್ತು ಇತರ ಬಡ ನಿರ್ಗತಿಕರಿಗೆ ಜಿಲ್ಲಾಡಳಿತ ಮತ್ತು ದಾನಿಗಳು ಮಾಡಿರುವ ಊಟ ಮತ್ತು ವಸತಿ ವ್ಯವಸ್ಥೆ ಬಹಳ ಯಶಸ್ವಿಯಾಗಿದೆ. ಬೀದಿ ನಾಯಿಗಳಿಗೆ ಆಹಾರವನ್ನು ತಯಾರಿಸುವುದಕ್ಕೆ ಪ್ರತಿ ಪಂಚಾಯಿತಿಗೆ ಪ್ರತಿದಿನ 300 ರು. ಬಳಕೆ ಮಾಡಲು ಜಿ.ಪಂ. ಸಿಓಇ ಪ್ರೀತಿ ಗೆಹ್ಲೋಟ್‌ ಅವರು ಸೂಚಿಸಿದ್ದಾರೆ.

ಕ್ರಿಯಾ​ಯೋಜನೆ ಮೂಲಕ ಪಾವ​ತಿ:

ಈ ಬಗ್ಗೆ ಜಿಲ್ಲಾ ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ. ಹರೀಶ್‌ ತಾಮಣ್ಕರ್‌ ಕ್ರಿಯಾಯೋಜನೆ ಸಿದ್ಧಪಡಿಸಿದ್ದಾರೆ. ಅದರಂತೆ ಉಡುಪಿ ನಗರಸಭೆಗೆ ಪ್ರತಿದಿನ 10 ಸಾವಿರ ರು., ಕುಂದಾಪುರ, ಕಾರ್ಕಳ, ಕಾಪು ಪುರಸಭೆಗಳಿಗೆ ಪ್ರತಿದಿನ 600 ರು., ಸಾಲಿಗ್ರಾಮ ಪಟ್ಟಣ ಪಂಚಾಯತಿಗೆ ಪ್ರತಿದಿನ 400 ರು. ಮತ್ತು ಪ್ರತಿ ಪಂಚಾಯತಿಗೆ ಪ್ರತಿದಿನ 300 ರು.ಗಳನ್ನು ನೀಡಲಾಗುತ್ತಿದೆ.

ಲಾಕ್‌ಡೌನ್‌: ತಾಯಿ ನಾಯಿ ಸೇರಿ 7 ಮರಿಗಳು ಹಸಿವಿನಿಂದ ಸಾವು

ಈಗಾಗಲೇ 2 ವಾರಗಳಿಂದ ಪ್ರತಿ ಪಂಚಾಯಿತಿಗಳೂ ತಂತಮ್ಮ ವ್ಯಾಪ್ತಿಯಲ್ಲಿರುವ ಬೀದಿನಾಯಿಗಳಿಗೆ ಆಹಾರ ನೀರು ಪೂರೈಸುತ್ತಿವೆ. ಅದಕ್ಕಾಗಿ ಅಕ್ಷರ ದಾಸೋಹ ಕಾರ್ಯಕರ್ತೆಯರಿಂದ ಸುಮಾರು 7-10 ಕೆ.ಜಿ.ಯಷ್ಟುಅಕ್ಕಿಯಿಂದ ಅನ್ನ ತಯಾರಿಸಲಾಗುತ್ತಿದೆ. ಬೀದಿ ನಾಯಿಗಳು ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಆಹಾರವನ್ನು ನೀಡಲಾಗುತ್ತಿದೆ.

ಕೊರೋನಾ ಲಾಕ್‌ಡೌನ್; ಏ.20ರ ಬಳಿಕ ಕರ್ನಾಟಕದಲ್ಲಿ ಹೊಸ ನಿಯಮ!

ಪ್ರತಿ ಪಂಚಾಯತಿಗಳಲ್ಲಿ ಪ್ರತಿದಿನ 20 - 30 ನಾಯಿಗಳಿಗೆ ಆಹಾರ ನೀಡಲಾಗುತ್ತಿವೆ. ಅಂದಾಜು ಪ್ರಕಾರ ಉಡುಪಿ ನಗರಸಭೆ, ಪುರಸಭೆಯಲ್ಲಿ ಸುಮಾರು 5 ಸಾವಿರ ನಾಯಿಗಳಿಗೆ, ಪಂಚಾಯಿತಿಗಳಲ್ಲಿ ಸುಮಾರು 3 ಸಾವಿರ ನಾಯಿಗಳಿಗೆ ಆಹಾರ ನೀಡಲಾಗುತ್ತಿದೆ.

ಮೂಕ ಪ್ರಾಣಿಗಳ ಹಸಿವಿಗೆ ಸ್ಪಂದಿಸಿದ ರಾಗಿಣಿ, ಇವರ ಕಷ್ಟ ಕೇಳುವರು ಯಾರು?

ಸರ್ಕಾರದಿಂದಲೇ ಬೀದಿ ನಾಯಿಗಳಿಗೆ ಆಹಾರಕ್ಕೆ ವ್ಯವಸ್ಥೆ ಮಾಡುವಂತೆ ಸೂಚನೆ ಬಂದಿದೆ. ಅದಕ್ಕೆ ತಗಲುವ ವೆಚ್ಚವನ್ನೂ ಕೂಡ ಸರ್ಕಾರವೇ ನೀಡಲಿದೆ. ಉಡುಪಿಯ ಎಲ್ಲಾ ಪಂಚಾಯಿತಿಗಳು ತಮ್ಮಲ್ಲಿರುವ ಬೀದಿನಾಯಿಗಳಿಗೆ ಆಹಾರ ನೀಡುತ್ತಿವೆ.

ಲಾಕ್‌ಡೌನ್: ಬಡವಾಗಿದ್ದ ಬೀದಿ ನಾಯಿಗಳಿಗೆ ಹೊಟ್ಟೆ ತುಂಬಾ ಆಹಾರ, ನೀರು..!

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಮಾತ್ರ ಎನ್‌ಜಿಒಗಳು ಮತ್ತು ಸಾರ್ವಜನಿಕರು ತಾವಾಗಿಯೇ ಮುಂದೆ ಬಂದು ಬೀದಿ ನಾಯಿಗಳಿಗೆ ಆಹಾರ ನೀಡುತ್ತಿವೆ ಎಂದು ಜಿಪಂ ಸಿಇಓ ಪ್ರೀತಿ ಗೆಹ್ಲೋಟ್‌ ತಿಳಿಸಿದ್ದಾರೆ.