Asianet Suvarna News Asianet Suvarna News

ಲಾಕ್‌ಡೌನ್‌: ತಾಯಿ ನಾಯಿ ಸೇರಿ 7 ಮರಿಗಳು ಹಸಿವಿನಿಂದ ಸಾವು

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆಹಾರವಿಲ್ಲದೆ ಪುಟ್ಟ6 ಮರಿಗಳಿಗೆ ತಿಂಗಳ ಹಿದಷ್ಟೇ ಜನ್ಮ ನೀಡಿದ ನಾಯಿಯೊಂದು ಪುತ್ತೂರು ತಾಲೂಕಿನ ಕುಂಬ್ರ ಪೇಟೆಯಲ್ಲಿ ಸಾವನ್ನಪ್ಪಿದೆ. ತಾಯಿಯ ಹಾಲಿಲ್ಲದೆ 6 ಪುಟ್ಟಮರಿಗಳೂ ಮೃತಪಟ್ಟಿವೆ.

 

7 stray dogs found dead in mangalore due to hunger
Author
Bangalore, First Published Apr 14, 2020, 7:29 AM IST

ಮಂಗಳೂರು(ಏ.14): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆಹಾರವಿಲ್ಲದೆ ಪುಟ್ಟ6 ಮರಿಗಳಿಗೆ ತಿಂಗಳ ಹಿದಷ್ಟೇ ಜನ್ಮ ನೀಡಿದ ನಾಯಿಯೊಂದು ಪುತ್ತೂರು ತಾಲೂಕಿನ ಕುಂಬ್ರ ಪೇಟೆಯಲ್ಲಿ ಸಾವನ್ನಪ್ಪಿದೆ. ತಾಯಿಯ ಹಾಲಿಲ್ಲದೆ 6 ಪುಟ್ಟಮರಿಗಳೂ ಮೃತಪಟ್ಟಿವೆ.

ಬೀದಿ ಹೆಣ್ಣು ನಾಯಿಯೊಂದು ಆರು ಮರಿಗಳಿಗೆ ಒಂದು ತಿಂಗಳ ಹಿಂದೆ ಜನ್ಮ ನೀಡಿತ್ತು. ಅದಾಗಲೇ ಲಾಕ್‌ಡೌನ್‌ ಜಾರಿಗೆ ಬಂದಿತ್ತು. ಕುಂಬ್ರದ ಅಲ್‌ರಾಯಾ ಹೊಟೇಲ್‌ನಿಂದ ನೀಡುವ ಉಳಿದ ಆಹಾರವನ್ನು ತಿಂದು ಬದುಕುತ್ತಿದ್ದ ಈ ಹೆಣ್ಣು ನಾಯಿ ತನ್ನ ಆರು ಮರಿಗಳಿಗೆ ಹಾಲುಣಿಸುತ್ತಿತ್ತು.

ನಾಳೆಯಿಂದ ಸರಳ, ಸ್ಮಾರ್ಟ್‌ ಲಾಕ್‌ಡೌನ್‌?: ಯಾರಿಗೆಲ್ಲಾ ಇರುತ್ತೆ ರಿಯಾಯಿತಿ?

ಲಾಕ್‌ಡೌನ್‌ ಬಳಿಕ ಹೊಟೇಲ್‌ ಬಾಗಿಲು ಮುಚ್ಚಿದೆ. ಇದರಿಂದಾಗಿ ನಾಯಿಗೆ ಆಹಾರ ಸಿಗುತ್ತಿರಲಿಲ್ಲ. ಹೊಟೇಲ್‌ ಬಂದ್‌ ಆದ ಬಳಿಕ 10 ದಿನದಲ್ಲಿ ಮೂರು ಮರಿಗಳು ತಾಯಿ ಹಾಲು ದೊರೆಯದೆ ಸತ್ತು ಹೋದವು. ಆ ಬಳಿಕ ಉಳಿದ ಮೂರು ಅಸು ನೀಗಿದವು. ಆರು ಮರಿಗಳು ಸತ್ತ ಬಳಿಕ ಆಹಾರವಿಲ್ಲದೆ ಹಸಿವಿನಿಂದ ಒದ್ದಾಡಿ ತಾಯಿ ನಾಯಿ ಶನಿವಾರ ಪ್ರಾಣ ಬಿಟ್ಟಿದೆ.

Follow Us:
Download App:
  • android
  • ios