ಬೆಳಗಾವಿ ಬೈಎಲೆಕ್ಷನ್‌: ಟೆಂಪಲ್ ರನ್ ಆರಂಭಿಸಿದ ಮಂಗಳಾ ಅಂಗಡಿ

ಬೆಳಗಾವಿ ನಗರದ ದೇವಸ್ಥಾನ, ಮಠ-ಮಂದಿರಗಳಿಗೆ ಭೇಟಿ ನೀಡಿದ ಮಂಗಳಾ ಅಂಗಡಿ ಕುಟುಂಬಸ್ಥರು| ಹುಕ್ಕೇರಿ ಹಿರೇಮಠ, ಕಾರಂಜಿ ಮಠ, ಗಣಪತಿ ಮಂದಿರದಲ್ಲಿ ವಿಶೇಷ ಪೂಜೆ| ಮಂಗಳಾ ಅಂಗಡಿಗೆ ಬೆಳಗಾವಿಯ ಮಠಾಧೀಶರ ಅಭಯ| 

Mangala Angadi Started Temple Run at Belagavi grg

ಬೆಳಗಾವಿ(ಮಾ.26): ದಿ. ಸುರೇಶ್‌ ಅಂಗಡಿ ಪತ್ನಿ ಮಂಗಳಾ ಅಂಗಡಿ ಅವರಿಗೆ ಬೆಳಗಾವಿ ಲೋಕಸಭಾ ಬಿಜೆಪಿ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಅಂಗಡಿ ಕುಟುಂಬಸ್ಥರು ಟೆಂಪಲ್ ರನ್ ಆರಂಭಿಸಿದ್ದಾರೆ. ಇಂದು(ಶುಕ್ರವಾರ) ಬೆಳಗ್ಗೆಯಿಂದ ಮಂಗಳಾ ಅಂಗಡಿ ಸೇರಿದಂತೆ ಅವರ ಕುಟುಂಬಸ್ಥರು ಬೆಳಗಾವಿ ನಗರದ ದೇವಸ್ಥಾನ, ಮಠ-ಮಂದಿರಗಳಿಗೆ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ನಗರದ ಹುಕ್ಕೇರಿ ಹಿರೇಮಠ, ಕಾರಂಜಿ ಮಠಗಳಿಗೆ ಮಂಗಳಾ ಅಂಗಡಿ, ಪುತ್ರಿ ಶ್ರದ್ಧಾ ಶೆಟ್ಟರ್ ಭೇಟಿ ನೀಡಿದ್ದಾರೆ. ಈ ವೇಳೆ ಮಂಗಳಾ ಅಂಗಡಿಗೆ ಬೆಳಗಾವಿಯ ಮಠಾಧೀಶರೆಲ್ಲರೂ ನಿಮ್ಮ ಬೆಂಬಲಕ್ಕೆ ಇರುತ್ತೇವೆ ಎಂದು ಸ್ವಾಮೀಜಿಗಳು ಅಭಯ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಅಂಗಡಿಯವರ ಕನಸನ್ನು ನನಸು ಮಾಡುವುದೇ ನನ್ನ ಗುರಿ: ಸುವರ್ಣ ನ್ಯೂಸ್ ಜೊತೆ ಮಂಗಳಾ ಅಂಗಡಿ

ಮಂಗಳಾ ಅಂಗಡಿ ಅವರ ಕುಟುಂಬ ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಾರಂಜಿ ಮಠದ ಗುರುಸಿದ್ದ ಸ್ವಾಮೀಜಿಯವರ ಆಶೀರ್ವಾದವನ್ನ ಪಡೆದುಕೊಂಡಿದ್ದಾರೆ. ಇದಲ್ಲದೆ ಬೆಳಗ್ಗೆ ನಗರದ ಚೆನ್ನಮ್ಮ ವೃತ್ತದಲ್ಲಿರುವ ಗಣಪತಿ ಮಂದಿರಕ್ಕೂ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
 

Latest Videos
Follow Us:
Download App:
  • android
  • ios