ಮಂಡ್ಯ(ಜ.11): ಮಂಡ್ಯ ವಿಶ್ವವಿದ್ಯಾಲಯವನ್ನು ಇದ್ದಕ್ಕಿದ್ದಂತೆ ಅಟೋನೋಮಸ್ ಕಾಲೇಜು ಎಂದು ಹೇಳಾಗಿದ್ದು, ಎಂದಿನಂತೆ ಅಟೋನೋಮಸ್‌ ಅಡಿಯಲ್ಲಿ ಕೆಲಸ ಮಾಡಿ ಎಂದು ಸಕರ್ಕಾರ ಆದೇಶ ನೀಡಿದೆ.

ಮಂಡ್ಯ ವಿವಿಯಲ್ಲಿ ಅಟೋನೋಮಸ್ ಕಿಡಿ ಹೊತ್ತಿಕೊಂಡಿದ್ದು, ಮಂಡ್ಯ ವಿವಿಗೆ ಸರ್ಕಾರ ಎಳ್ಳು ನೀರು ಬಿಟ್ಟಿತಾ ಎಂಬ ಪ್ರಶ್ನೆ ಮೂಡಿದೆ. ಯಾರೋ ಮಾಡಿದ ತಪ್ಪಿಗೆ ವಿದ್ಯಾರ್ಥಿಗಳಿಗೆ ಶಿಕ್ಷೆಯಾಗುತ್ತಿದ್ದು, ಒಂದು ವರ್ಷದ ಹಿಂದೆ ವಿಶ್ವವಿದ್ಯಾಲಯ ಈಗ ಅಟೋನೋಮಸ್ ಎಂದು ಬದಲಾಗಿದೆ.

ಸೋಷಿಯಲ್ ಮೀಡಿಯಾ ನೋಡಿ ಪ್ರತಿಭಟನೆಗೆ ಹೋಗಿದ್ದ ಫ್ರೀ ಕಾಶ್ಮೀರ ಪ್ಲಕಾರ್ಡ್ ಯುವತಿ

ಒಂದು ವರ್ಷದ ಹಿಂದೆ ಸರ್ಕಾರ ಮಂಡ್ಯ ವಿಶ್ವವಿದ್ಯಾಲಯ ಎಂದು ಘೋಷಣೆ ಮಾಡಿತ್ತು. ಈಗ ಎಂದಿನಂತೆ ಅಟೊನಾಮಸ್ ಅಡಿಯಲ್ಲಿ ಕೆಲಸ ಮಾಡಿ ಎಂದು ಆದೇಶ ನೀಡಿದೆ. ಮಂಡ್ಯ ವಿವಿಯಲ್ಲಿ ನಡೆದ ಅಕ್ರಮದಿಂದ ಸರ್ಕಾರ ವಿಶ್ವವಿದ್ಯಾಲಯವನ್ನೇ ರದ್ದು ಪಡಿಸಿದೆ.

ಮಂಡ್ಯ ವಿವಿ ವಿಶೇಷ ಅಧಿಕಾರಿಯಾಗಿದ್ದ ಮಹದೇವನಾಯಕ ಅವರು ಅಕ್ರಮವೆಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಕ್ರಮ ನೇಮಕಾತಿ ಹಾಗೂ ಕೋರ್ಸ್‌ಗಳನ್ನು ತೆರೆದಿದ್ದ ಮಹದೇವನಾಯಕ ಅವರನ್ನು ಸರ್ಕಾರ ಅಮಾನತುಗೊಳಿಸಿತ್ತು.

4 ವರ್ಷದ ನಂತರ ಗಗನಚುಕ್ಕಿ ಜಲಪಾತೋತ್ಸವ..! ಸಂಭ್ರಮಕ್ಕೆ ದಿನಗಣನೆ..!

ಇದರ ಬೆನ್ನಲ್ಲೇ ವಿಶ್ವವಿದ್ಯಾಲಯವನ್ನು ಸರ್ಕಾರ ರದ್ದು ಪಡಿಸಿದೆ. ಸರ್ಕಾರ ಹಾಗೂ ವಿವಿಯ ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಒಂದು ಸೆಮಿಸ್ಟರ್ ಪರೀಕ್ಷೇಯನ್ನು ವಿವಿ ನಿಯಮದಡಿ ಬರೆದಿರುವ ವಿದ್ಯಾರ್ಥಿಗಳು, ಈಗ ಅಟೋನೋಮಸ್ ಅಡಿಯಲ್ಲಿ ಪರೀಕ್ಷೆ ಬರಿಯುವುದಿಲ್ಲ ಎಂದಿದ್ದಾರೆ.

ಈಗ ಅಟೊನಾಮಸ್ ಅಡಿಯಲ್ಲಿ ಪರೀಕ್ಷೆ ಬರೆಯಿರಿ ಎಂದು ಆಡಳಿತ ವರ್ಗ ವಿದ್ಯಾರ್ಥಿಗಳನ್ನು ಒತ್ತಾಯಿಸುತ್ತಿದ್ದಾರೆ. ನಾವು ಅಟೊನಾಮಸ್‌ನಲ್ಲಿ ಪರೀಕ್ಷೆ ಬರೆಯಲ್ಲಾ,ನಾವು ವಿಶ್ವವಿದ್ಯಾಲಯಕ್ಕೆ ಸೇರ್ಪಡೆಯಾಗಿರೋದು. ನಾವು ವಿವಿಗೆ ಪರೀಕ್ಷೆ ಬರೆಯೋದು ಎಂದು ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆಯನ್ನೇ ಬಹಿಷ್ಕಾರ ಮಾಡಿದ್ದಾರೆ. ನಾವು ಮಂಡ್ಯ ವಿಶ್ವವಿದ್ಯಾಲಯ ಆಗುವವರೆಗೂ ಪರೀಕ್ಷೆ ಬರೆಯಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.