ಮೈಸೂರು(ಜ.11): ಮೈಸೂರಿನಲ್ಲಿ ಫ್ರೀ ಕಾಶ್ಮೀರ್ ಪ್ಲಕಾರ್ಡ್ ಹಿಡಿದ ಮೈಸೂರು ವಿಶ್ವವಿದ್ಯಾಲಯದ ಹಿರಿಯ ವಿದ್ಯಾರ್ಥಿನಿ ತನ್ನ ಪ್ರತಿಕ್ರಿಯೆಯನ್ನು ಕೊಟ್ಟಿದ್ದಾಳೆ. ಸೋಷಿಯಲ್ ಮೀಡಿಯಾ ನೋಡಿ ಪ್ರತಿಭಟನೆಗೆ ಹೋದೆ, ಸಂಘಟನೆಗಳಿಗೂ ನನಗೂ ಸಂಬಂಧ ಇಲ್ಲ ಎಂದು ಆಕೆ ಸ್ಪಷ್ಟಪಡಿಸಿದ್ದಾಳೆ.

ಪ್ಲ ಕಾರ್ಡ್ ಹಿಡಿದಿದ್ದ ಮೈಸೂರು ವಿವಿ ಹಿರಿಯ ವಿದ್ಯಾರ್ಥಿನಿ ನಳಿನಿ ಬಾಲಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಯುವತಿ ಸುವರ್ಣ ನ್ಯೂಸ್ ಜೊತೆ ಮೊದಲ ಪ್ರತಿಕ್ರಿಯೆ ಹಂಚಿಕೊಂಡಿದ್ದು, ತಾನು ಯಾವುದೇ ಸಂಘಟನೆಗೆ ಸೇರಿದವಳಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ.

ಮೈಸೂರಿನಲ್ಲಿ ಫ್ರೀ ಕಾಶ್ಮೀರ ಪೋಸ್ಟರ್: ಮೋದಿ ಸರ್ಕಾರದ ವಿರುದ್ಧ ಚೀನಾ - ಪಾಕಿಸ್ತಾನ ಪಿತೂರಿ!

ನಾನು ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿಭಟನೆ ಬಗ್ಗೆ ತಿಳಿದುಕೊಂಡು ಹೋಗಿದ್ದೆ.ಪ್ರತಿಭಟನೆಯಲ್ಲಿ ಆರಂಭದಿಂದ ಕೊನೆವರೆಗೂ ಪ್ಲ ಕಾರ್ಡ್ ಹಿಡಿದಿದ್ದೆ, ಇದರ ಬಗ್ಗೆ ಯಾರೂ ಕೇಳಲಿಲ್ಲ.ಕಳೆದ 5 ತಿಂಗಳಿಂದ ಕಾಶ್ಮೀರದಲ್ಲಿ ಇಂಟರ್ನೆಟ್ ಸ್ಥಗಿತವಾಗಿದೆ.ಜನರಿಗೆ ಅದರಿಂದ ರಿಲ್ಯಾಕ್ಸ್ ನೀಡಿ ಎನ್ನುವ ಅರ್ಥದಲ್ಲಿ ನಾನು ಫ್ರಿ ಕಾಶ್ಮೀರ ಪ್ಲ ಕಾರ್ಡ್ ಪ್ರದರ್ಶನ ಮಾಡಿದೆ ಎಂದು ಹೇಳಿದ್ದಾರೆ.

"

ಅದರಿಂದ ಆಗಿರುವ ಗೊಂದಲಕ್ಕೆ ನಾನು ಕ್ಷಮೆ ಕೇಳುತ್ತೇನೆ. ಅದಕ್ಕೂ ಪ್ರತಿಭಟನೆ ನಡೆಸುತ್ತಿದ್ದವರಿಗೂ ಯಾವುದೇ ಸಂಭಂದವಿಲ್ಲ. ಭಾರತ ದೊಡ್ಡ ಪ್ರಜಾಪ್ರಭುತ್ವ ದೇಶ, ಇಲ್ಲಿ ಎಲ್ಲರಿಗೂ ವಾಕ್ ಸ್ವಾತಂತ್ರ್ಯ ಬೇಕು.ಇದೇ ಅರ್ಥದಲ್ಲಿ ನಾನು ಪ್ಲಕಾರ್ಡ್ ಪ್ರದರ್ಶನ ಮಾಡಿದ್ದೆ.ಪ್ಲ ಕಾರ್ಡ್ ನಲ್ಲಿ FREE KASHMIR ಜೊತೆಗೆ ಎಜುಕೇಟ್, ಅಜಿಟೇಟ್ ಆರ್ಗನೈಸ್ ಎಂದು ಬರೆದಿದ್ದೆ ಎಂದು ಹೇಳಿದ್ದಾರೆ.

ಫ್ರೀ ಕಾಶ್ಮಿರ ಪ್ಲೆಕಾರ್ಡ್: ಸ್ವಯಂ ಪ್ರೇರಿತ ದೂರು ದಾಖಲು