Asianet Suvarna News Asianet Suvarna News

4 ವರ್ಷದ ನಂತರ ಗಗನಚುಕ್ಕಿ ಜಲಪಾತೋತ್ಸವ..! ಸಂಭ್ರಮಕ್ಕೆ ದಿನಗಣನೆ..!

ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಗಗನಚುಕ್ಕಿ ಜಲಪಾತೋತ್ಸವ ಈ ಬಾರಿ ಮತ್ತೆ ನಡೆಯಲಿದೆ. ಉತ್ಸವಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳೂ ಈಗಾಗಲೇ ಆರಮಭವಾಗಿದೆ. ಜಲಪಾತೋತ್ಸವ ಜ.18 ಹಾಗೂ 19 ರಂದು ನಡೆಯಲಿದ್ದು, ಮುಂದಿನ ವೀಕೆಂಡ್‌ಗೆ ಪ್ಲಾನ್ ಮಾಡುತ್ತಿರುವವರಿಗೆ ಇದೊಂದು ಬೆಸ್ಟ್ ಡೆಸ್ಟಿನೇಶನ್.

Gaganachukki Falls fest in mandya after 4 years
Author
Bangalore, First Published Jan 11, 2020, 8:45 AM IST

ಮಂಡ್ಯ(ಜ.11):ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಕೊಂಡಿದ್ದ ಗಗನಚುಕ್ಕಿ ಜಲಪಾತೋತ್ಸವಕ್ಕೆ ಈಗ ಹೊಸ ರೂಪದೊಂದಿಗೆ ಉತ್ಸವ ಆಚರಣೆ ಮಾಡಲು ಭರದ ಸಿದ್ಧತೆ ಆರಂಭವಾಗಿವೆ.

ಜಲಪಾತೋತ್ಸವ ಜ.18 ಹಾಗೂ 19 ರಂದು ನಡೆಯಲಿದೆ. ಈ ಉತ್ಸವದ ಪೂರ್ವ ಸಿದ್ಧತೆ ಬಗ್ಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಸಭೆ ನಡೆಸಿ ಉತ್ಸವವನ್ನು ಅಚ್ಚುಕಟ್ಟಾಗಿ ಮಾಡಲು ಕೆಲವು ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದ್ದಾರೆ.

ಅತ್ಯಾಚಾರ: 3 ವರ್ಷದ ಕಂದಮ್ಮನಿಗೆ ನಿತ್ಯ ನರಕ ಯಾತನೆ

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೂರ್ವಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿಸಿ ವೆಂಕಟೇಶ್‌, ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತ ಈಗಲೂ ಧುಮ್ಮಿಕ್ಕಿ ಹರಿಯುತ್ತಿದೆ. ಇದು ರಾಜ್ಯದ ಹಾಗೂ ದೇಶದ ನಾನಾ ಮೂಲೆಗಳಿಂದ ಲಕ್ಷಾಂತರ ಸಂಖ್ಯೆಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯ ಹಾಗೂ ದೇಶಕ್ಕೆ ಪರಿಚಯ ಮಾಡಿಕೊಡುವ ಸಲುವಾಗಿ ಗಗನಚುಕ್ಕಿ ಜಲಪಾತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಮಹಿಳೆಯ ವಾಟ್ಸಪ್‌ಗೆ ಹಸ್ತ ಮೈಥುನ ವಿಡಿಯೋ!

ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮದ ರೂಪುರೇಷೆಗಳನ್ನು ವ್ಯವಸ್ಥಿತವಾಗಿ ರೂಪಿಸಬೇಕು. ಮೂಲ ಸೌಕರ್ಯಗಳಾದ ಒದಗಿಸಲು ಸೂಕ್ತ ಕ್ರಮಗಳನ್ನು ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಅಪರ ಜಿಲ್ಲಾಧಿಧಕಾರಿ ಟಿ. ಯೋಗೇಶ್‌, ಉಪವಿಭಾಗಾಧಿಕಾರಿ ಸೂರಜ್‌, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸಿದ್ಧತೆಗಳಾಗಬೇಕಿರುವುದು

* ಜಲಪಾತ್ಸೋವಕ್ಕೆ ಆಗಮಿಸುವ ಪ್ರವಾಸಿಗರ ಹಾಗೂ ಜನರ ಅನುಕೂಲಕ್ಕಾಗಿ ಕುಡಿಯುವ ನೀರಿನ ವ್ಯವಸ್ಥೆ, ವಾಹನ ನಿಲುಗಡೆ ಮಾಡಲು ಸ್ಥಳದ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದು ಸೇರಿದಂತೆ ನಾನಾ ಸೌಲಭ್ಯಗಳನ್ನು ಒದಗಿಸಿ ನೆರವಾಗಬೇಕು.

* ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮ ವಿಕ್ಷಿಸಲು ಹೆಚ್ಚು ಜನರು ಬರಬೇಕು. ಇದಕ್ಕಾಗಿ ಹೆಚ್ಚು ಪ್ರಚಾರ ಮಾಡಿ ಇಲ್ಲಿನ ನೈಸರ್ಗಿಕವಾದ ಸ್ಥಳವನ್ನು ದೇಶಕ್ಕೆ ಪರಿಚಯಿಸುವ ಕೆಲಸವಾಗಬೇಕು.

* ವೇದಿಕೆಯನ್ನು ಸಮರ್ಪಕವಾಗಿ ಹಾಗೂ ಗುಣಮಟ್ಟದಿಂದ ನಿರ್ಮಾಣ ಮಾಡಬೇಕು. ಜತೆಗೆ ವೇದಿಕೆ ಪಕ್ಕದಲ್ಲಿಆಹಾರ ಮೇಳದ ಸ್ಟಾಲ… ಗಳನ್ನು ತೆರೆಯಲು ಅಧಿಕಾರಿಗಳು ಕ್ರಮ ವಹಿಸಬೇಕು.

* ಹೆಚ್ಚಿನ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಪ್ರವಾಸಿಗರಿಗೆ ಅನುಕೂಲಕ್ಕಾಗಿ ನಿಯೋಜಿಸಬೇಕು.

* ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಮಿತಿಯನ್ನು ರಚಿಸಲಾಗುವುದು.

* ಜಲಪಾತಕ್ಕೆ ಹಾಗೂ ವೇದಿಕೆಗೆ ವಿದ್ಯುತ್‌ ಅಲಂಕಾರ ಮಾಡಬೇಕು.

* ವಿದ್ಯುತ್‌ ಅಡಚಣೆಯಾಗದಂತೆ ನೋಡಿಕೊಳ್ಳಬೇಕು.

* ಈ ಸಂದರ್ಭದಲ್ಲಿ ಜನರಿಗೆ ಜಲ ಸಾಹಸ ಕ್ರೀಡೆ, ಹೆಲಿಕಾಪ್ಟರ್‌ ರೈಡ್‌, ತೆಪೋತ್ಸವ, ಗಾಳಿಪಟ ಉತ್ಸವ, ಬೈಕ್‌ ರಾರ‍ಯಲಿ ಆಯೋಜಿಸಬೇಕು.

Follow Us:
Download App:
  • android
  • ios