ಮಂಡ್ಯ[ಜ. 09]  ತಿನ್ನಲು ಕಡಲೆಕಾಯಿಕೊಟ್ಟು ಆಟವಾಡಿಸುವ ನೆಪದಲ್ಲಿ ಮನೆಗೆ ಕರೆದೊಯ್ದು ಮೂರುವರೆ ವರ್ಷದ ಮಗುವಿನ ಮೇಲೆ ಅಪ್ರಾಪ್ತ ಬಾಲಕನೊಬ್ಬ ಅತ್ಯಾಚಾರ ಮಾಡಿದ್ದ. ಇದೀಗ ಸಂತ್ರಸ್ತ ಮಗುವಿನ ಸ್ಥಿತಿ ದಾರುಣವಾಗಿದೆ.

ಆಗಸ್ಟ್17ರಂದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ವರಾಹಸಂದ್ರ ಗ್ರಾಮದಲ್ಲಿ ನಡೆದಿದ್ದ ಘಟನೆ ಈಗ ಮತ್ತೊಂದು ಮುಖ ಪಡೆದುಕೊಂಡಿದೆ.

ವರಾಹಸಂದ್ರ ಗ್ರಾಮದ ಚಂದ್ರೇಗೌಡ ಎಂಬುವರ ಮಗ ಮುನೇಶ (16) ಅತ್ಯಾಚಾರವೆಸಗಿದ್ದ. ಮೂರುವರೆವರ್ಷದ ಬಾಲಕಿಯನ್ನು ವರಾಹಸಂದ್ರ ಗ್ರಾಮಕ್ಕೆ ಕರೆತಂದು ಬಾಲಕಿಯ ಸೋದರತ್ತೆ ಸಾಕಿಕೊಂಡಿದ್ದರು

ಪ್ರತಿನಿತ್ಯದಂತೆ ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕಿಗೆ ತಿನ್ನಲು ಕಡಲೆಕಾಯಿಕೊಟ್ಟು ಆಟವಾಡಿಸುವ ನೆಪದಲ್ಲಿ ಪುಸಲಾಯಿಸಿ ತನ್ನ ಮನೆಗೆ ಕರೆದುಕೊಂಡು ಹೋದ ಮುನೇಶ ಅತ್ಯಾಚಾರ ಮಾಡಿದ್ದ.

ರೇಪ್ ಮಾಡಿ ಮದುವೆ ಆಗ್ತೇನೆ ಎಂದು ಯುವತಿ ಕಾಲಿಗೆ ಬಿದ್ದ ಟೆಕ್ಕಿ

ರಕ್ತಸ್ರಾವದಿಂದ ಬಳಲುತ್ತಿದ್ದ ಬಾಲಕಿಯನ್ನು ಮನೆಯ ಪೋಷಕರು ವಿಚಾರಿಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿತ್ತು. ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೊಳಪಡಿಸಿ ಚಿಕಿತ್ಸೆಗೆ ದಾಖಲಿಸಲಾಗಿತ್ತು

ಬಾಲಕಿಯ ಪೋಷಕರು ನೀಡಿರುವ ದೂರಿನನ್ವಯ ಆರೋಪಿ ಮುನೇಶನ ವಿರುದ್ಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಐಪಿಸಿ 376 ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆತನನ್ನು ಪೋಲಿಸರು ಬಂಧಿಸಿದ್ದರು. ಒಂದು ವಾರದಲ್ಲೇ ಜಾಮೀನಿನ ಮೇಲೆ ಆರೋಪಿ ಬಿಡುಗಡೆಯಾಗಿದ್ದ.

ಈಗ ಅತ್ಯಾಚಾರಕ್ಕೊಳಗಾದ ಮಗುವಿನ ಪರಿಸ್ಥಿತಿ ಗಂಭೀರವಾಗಿದೆ. ಗುಪ್ತಾಂಗದಲ್ಲಿ ಆಗಿದ್ದ ಗಾಯ ಉಲ್ಬಣಗೊಂಡು ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಯ ICUನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮಗುವಿಗೆ ಚಿಕಿತ್ಸೆ ಕೊಡಿಸಲು ಬಡ ಪೋಷಕರ ಪರದಾಟ ನಡೆಸುವಂತಾಗಿದೆ. 

ಈಗಾಗಲೇ ಲಕ್ಷಾಂತರ ರೂ. ಖರ್ಚು ಮಾಡಿ ಮಗುವಿಗೆ ಚಿಕಿತ್ಸೆ  ಕೊಡೊಸಲಾಗಿದೆ.  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 10ಸಾವಿರ ಬಿಟ್ರೆ ಸರ್ಕಾರದಿಂದ ಇನ್ನಾವುದೆ ಸಹಾಯ ಆಗಿಲ್ಲ.