Asianet Suvarna News Asianet Suvarna News

ಅಶ್ವಥ ನಾರಾಯಣ ಒಕ್ಕಲಿಗ ನಾಯಕ, ಜನಾಭಿನಂದನ ಹೆಸರಲ್ಲಿ ಶುರುವಾಯ್ತು ಪಟ್ಟಾಭಿಷೇಕ

ಮಂಡ್ಯ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಒಕ್ಕಲಿಗರನ್ನ ತನ್ನತ್ತ ಸೆಳೆಯಲು ಪ್ಲಾನ್ ರೂಪಿಸಿರುವ ಕಮಲಪಾಳಯ, ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ಸರಿಸಮನಾಗಿ ಮತ್ತೊಬ್ಬ ಒಕ್ಕಲಿಗ ನಾಯಕನನ್ನು ರೂಪಿಸಲು ಹೊರಟಿದೆ. ಅದರಂತೆ  ಸಚಿವ ಅಶ್ವಥ ನಾರಾಯಣಗೆ ಜನಾಭಿನಂದನೆ ಹೆಸರಲ್ಲಿ ಪಟ್ಟಾಭಿಷೇಕ ಶುರುವಾಗಿದೆ.

Mandya people coronation event for vokkaliga leader minister Ashwath Narayan gow
Author
First Published Dec 13, 2022, 11:39 AM IST

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್

ಮಂಡ್ಯ (ಡಿ.13): ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ಪಕ್ಷಗಳು ತಮ್ಮ ಕಾರ್ಯತಂತ್ರ ರೂಪಿಸಲು ಆರಂಭಿಸಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಸದೃಢವಾಗಿರುವ ಬಿಜೆಪಿ ಈ ಬಾರಿ ಹಳೇ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿದ್ದು, ಒಕ್ಕಲಿಗ ಕೋಟೆ ಭೇದಿಸಲು ಒಕ್ಕಲಿಗ ಪ್ಲೇ ಕಾರ್ಡ್ ಬಳಸಲು ಮುಂದಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಒಕ್ಕಲಿಗರನ್ನ ತನ್ನತ್ತ ಸೆಳೆಯಲು ಪ್ಲಾನ್ ರೂಪಿಸಿರುವ ಕಮಲಪಾಳಯ, ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ಸರಿಸಮನಾಗಿ ಮತ್ತೊಬ್ಬ ಒಕ್ಕಲಿಗ ನಾಯಕನನ್ನು ರೂಪಿಸಲು ಹೊರಟಿದೆ. ಅದರಂತೆ ಉನ್ನತ ಶಿಕ್ಷಣ ಸಚಿವ ಅಶ್ವಥ ನಾರಾಯಣಗೆ ಜನಾಭಿನಂದನೆ ಹೆಸರಲ್ಲಿ ಪಟ್ಟಾಭಿಷೇಕ ಶುರುವಾಗಿದೆ.

ಕೆಂಪೇಗೌಡರ ಪ್ರತಿಮೆಗೆ ಶ್ರಮಿಸಿದ ಅಶ್ವಥ್ ನಾರಾಯಣಗೆ ಅಭಿನಂದನೆ
ಬೆಂಗಳೂರು ನಿರ್ಮಾತೃ ಕೆಂಪೇಗೌಡರ 108 ಅಡಿ ಪ್ರತಿಮೆ ನಿರ್ಮಿಸಲು ಶ್ರಮಿಸಿದ ಕಾರಣಕ್ಕೆ ಸಚಿವ ಅಶ್ವಥ ನಾರಾಯಣ ಅವರನ್ನು ಅಭಿನಂದಿಸಲಾಗ್ತಿದೆ. ಕೆಂಪೇಗೌಡರ ಅಭಿಮಾನಿ ಬಳಗ ಹಾಗೂ ಬಿಜೆಪಿ ಮುಖಂಡರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗ್ತಿದೆ. ಮಂಡ್ಯ ಜಿಲ್ಲೆಯ ಮದ್ದೂರು, ಮಳವಳ್ಳಿಯಲ್ಲಿ ಜನಾಭಿನಂದನಾ ಕಾರ್ಯಕ್ರಮ ನಡೆದಿದ್ದು ಎಲ್ಲಾ ತಾಲೂಕುಗಳಲ್ಲೂ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ.

ಬಿಜೆಪಿಗರು ಪುಣ್ಯಾತ್ಮರು, ಕುಡ್ಲು, ಮಚ್ಚು ಹಿಡಿಯೋರಲ್ಲ: ಕೆ.ಸಿ.ನಾರಾಯಣಗೌಡ

ಅಶ್ವಥ ನಾರಾಯಣಗೆ ಅದ್ದೂರಿ ಸ್ವಾಗತ
ಮಂಡ್ಯದ ಮದ್ದೂರಿನಲ್ಲಿ ನಡೆದ ಜನಾಭಿನಂದನಾ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವ ಅಶ್ವಥ ನಾರಾಯಣ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಕ್ರೇನ್ ಮೂಲಕ ಬೃಹತ್ ಹೂವಿನ ಹಾರ ಹಾಕಿದ ಅಭಿಮಾನಿಗಳು, ಪುಷ್ಪವೃಷ್ಠಿ ಸುರಿಸಿ ಸಚಿವರನ್ನು ಬರಮಾಡಿಕೊಂಡರು. ತೆರದ ವಾಹನದಲ್ಲಿ ಜಿಲ್ಲಾ ಬಿಜೆಪಿ ಮುಖಂಡರ ಜೊತೆ ರ‌್ಯಾಲಿ ನಡೆಸಿದ ಸಚಿವರು ಜನಾಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾದರು.

ಇಂದು ಚಾಮರಾಜನಗರದಲ್ಲಿ ಬೊಮ್ಮಾಯಿ ಪ್ರವಾಸ, ಕಾಂಗ್ರೆಸ್ ಕ್ಷೇತ್ರಗಳ ಮೇಲೆ ಕಣ್ಣಿಟ್ಟ ಕೇಸರಿ

DK, HDK ರೀತಿ ಸಮುದಾಯದ ಬೆಂಬಲ ಕೇಳಿದ ಅಶ್ವಥ ನಾರಾಯಣ
ಎಚ್‌ಡಿ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ಈಗಾಗಲೇ ಒಕ್ಕಲಿಗ ಸಮುದಾಯ ಬಲಿಷ್ಠ ನಾಯಕರಾಗಿ ಹೊರಹೊಮ್ಮಿದ್ದಾರೆ. ಬಿಜೆಪಿಯಲ್ಲಿ ಒಕ್ಕಲಿಗ ನಾಯಕನ ಕೊರತೆ ನೀಗಿಸಲು ಸಚಿವ ಅಶ್ವಥ ನಾರಾಯಣಗೆ ಶಕ್ತಿ ನೀಡುವ ಕೆಲಸ ಆರಂಭಿಸಲಾಗಿದೆ. ಕುಮಾರಸ್ವಾಮಿ, ಡಿಕೆ ಶಿವಕುಮಾರ್ ರೀತಿ ಅಶ್ವಥ ನಾರಾಯಣ ಕೂಡ ಜನಾಭಿನಂದನಾ ಕಾರ್ಯಕ್ರಮಗಳಲ್ಲಿ ಒಕ್ಕಲಿಗರ ಬೆಂಬಲ ಕೇಳ್ತಿದ್ದಾರೆ. ಮ ತಮಗೆ ಶಕ್ತಿ ತುಂಬಿ ಎಂದು ಮನವಿ ಮಾಡ್ತಿದ್ದಾರೆ. ಈ ಮೂಲಕ ಒಕ್ಕಲಿಗ ವೋಟ್ ಗಳಿಸಿ ಚುನಾವಣೆ ಗೆಲ್ಲಲು ಬಿಜೆಪಿ ಪ್ಲಾನ್ ಮಾಡಿದೆ.

 

Follow Us:
Download App:
  • android
  • ios