ಕಳೆದ ಮೂರು ವರ್ಷಗಳಿಂದ ಅಭಿಷೇಕ್‌ ವಿವಾಹದ ವಿಷಯ ಆಗಾಗ ಕೇಳಿಬರುತ್ತಲೇ ಇದೆ. ಹುಡುಗಿ ಇದ್ರೆ ನನಗೂ ಹೇಳಿ, ನಾನೂ ನೋಡುತ್ತೇನೆ ಎಂದು ನಗುತ್ತಲೇ ಉತ್ತರಿಸಿದ ಸುಮಲತಾ 

ಮಂಡ್ಯ(ನ.25):  ಅಭಿಷೇಕ್‌ ಮದುವೆಯಾಗೋ ಹುಡುಗಿ ಇದ್ರೆ ನನಗೂ ತಿಳಿಸಿ, ನಾನೂ ನೋಡ್ತೇನೆ!. ಇದು ಪುತ್ರನ ಮದುವೆ ವಿಚಾರವಾಗಿ ಪ್ರಶ್ನಿಸಿದ ಪತ್ರಕರ್ತರಿಗೆ ಸಂಸದೆ ಸುಮಲತಾ ಅಂಬರೀಶ್‌ ಕೊಟ್ಟ ಉತ್ತರವಿದು.

ಮದ್ದೂರು ತಾಲೂಕು ದೊಡ್ಡರಸಿನಕೆರೆ ಗ್ರಾಮದಲ್ಲಿ ಗುರುವಾರ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಅಭಿಷೇಕ್‌ ವಿವಾಹದ ವಿಷಯ ಆಗಾಗ ಕೇಳಿಬರುತ್ತಲೇ ಇದೆ. ಹುಡುಗಿ ಇದ್ರೆ ನನಗೂ ಹೇಳಿ, ನಾನೂ ನೋಡುತ್ತೇನೆ ಎಂದು ನಗುತ್ತಲೇ ಸುಮಲತಾ ಉತ್ತರಿಸಿದರು. 

ಜೆಡಿಎಸ್‌ ಮೊದಲು ಬಹುಮತ ಪಡೆಯಲಿ: ಸಂಸದೆ ಸುಮಲತಾ ಅಂಬರೀಶ್‌

ಮದುವೆ ಕುರಿತಾದ ಪ್ರಶ್ನೆ ಅಭಿಷೇಕ್‌ ಕಡೆ ತೂರಿಬಂದಾಗ, ನಾನು ಸಿನಿಮಾದಲ್ಲಿ ಬ್ಯುಸಿಯಾಗಿದ್ದೇನೆ ಎಂದಷ್ಟೇ ಹೇಳಿ ಜಾರಿಕೊಂಡರು.