ಮಂಡ್ಯ(ಜ.31): ಸಿಎಂ ಬಿ. ಎಸ್. ಯಡಿಯೂರಪ್ಪ ಅವರಿಗೆ ಮಿಣಿ ಮಿಣಿ ಕಣ್ಣು ತಾಗದಿರಲೆಂದು ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸುಗಮವಾಗಿ ಬಿಎಸ್‌ವೈ ಆಡಳಿತ ನಡೆಸಬೇಕು ಎಂದು ಕಾರ್ಯಕರ್ತರು ಪ್ರಾರ್ಥಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆಯ ಗೊಂದಲ ನಿವಾರಣೆಗಾಗಿ ಪೂಜೆ ಸಲ್ಲಿಸಲಾಗಿದ್ದು, ಕಂಟಕಗಳು ಕಳೆದು ಸುಗಮವಾಗಿ ಸಂಪುಟ ವಿಸ್ತರಣೆ ಆಗಲೆಂದು ಪೂಜೆ ಸಲ್ಲಿಸಿದ್ದಾರೆ. ಮಂಡ್ಯದಲ್ಲಿ ಯಡಿಯೂರಪ್ಪ ಅಭಿಮಾನಿಗಳಿಂದ ಪೂಜೆ ನಡೆದಿದೆ.

'ಮಿಣಿ ಮಿಣಿ ಕುಮಾರಸ್ವಾಮಿ ಸ್ವಯಂ ಪ್ರಸಿದ್ಧಿ'

ಮಂಡ್ಯದ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ವಿಷೇಶ ಪೂಜೆ ಸಲ್ಲಿಕೆಯಾಗಿದ್ದು, ಯಡಿಯೂರಪ್ಪ ಅವರ ಮೇಲೆ ಯಾರ ಕಣ್ಣು ಬೀಳಬಾರದು. ನಿಂಬೆಹಣ್ಣು, ಟಗರು, ಸರ್ಪಯಾಗ, ಮಿಣಿ ಮಿಣಿ ಕಣ್ಣು, ತಮ್ಮೊಳಗಿನ ಶತ್ರುಗಳಿಂದ ಯಾವುದೇ ತೊಂದರೆಯಾಗಬಾರದು ಎಂದು ಪ್ರಾರ್ಥಿಸಲಾಗಿದೆ.

ಬೆರಳ ತುದಿಯಲ್ಲೇ ಇದೆ ಭಾರೀ ಸಮಸ್ಯೆ!

ಉಳಿದ ಮೂರು ವರ್ಷ ಬಿಎಸ್‌ವೈ ಸುಗಮವಾಗಿ ಸರ್ಕಾರ ನಡೆಸಬೇಕೆಂದು ಪ್ರಾರ್ಥಿಸಿದ ಅಭಿಮಾನಿಗಳು ದೇವಾಲಯದ ಸುತ್ತ ಉರುಳು ಸೇವೆ ಸಲ್ಲಿಸಿದ್ದಾರೆ. ಪೂಜೆ ಮೂಲಕ ಯಡಿಯೂರಪ್ಪ ಅಭಿಮಾನಿಗಳು ಕುಮಾರಸ್ವಾಮಿ, ದೇವೇಗೌಡ, ಸಿದ್ದರಾಮಯ್ಯ, ರೇವಣ್ಣಗೆ ಟಾಂಗ್ ಕೊಟ್ಟಿದ್ದಾರೆ.