ಮಂಡ್ಯ(ಜು.19): ಮತ್ತೊಮ್ಮೆ ಮೋದಿ ಪ್ರಧಾನ ಮಂತ್ರಿ ಆಗಲಿ ಎಂದು ಮಂಡ್ಯದ ಬಿಜೆಪಿ ಕಾರ್ಯಕರ್ತರು ಹರಕೆ ಹೊತ್ತಿದ್ರು. ಇದೀಗ ಇಷ್ಟಾರ್ಥ ಈಡೇರಿದ್ದರಿಂದ ತಾಲೂಕು ಬಿಜೆಪಿ ಮೋರ್ಚಾ ಕಾರ್ಯಕರ್ತರು ಗುರುವಾರ ನಗರದಿಂದ ಕಾಶಿಯಾತ್ರೆ ಆರಂಭಿಸಿದರು.

ನಗರದ ಅಯ್ಯಪ್ಪ ದೇವಾಯಲದಲ್ಲಿ ಸೇರಿದ ಬಿಜೆಪಿ ಮೋರ್ಚಾದ ಉಪಾಧ್ಯಕ್ಷೆ ಪುಣ್ಯವತಿ ಮತ್ತು ಪ್ರಧಾನ ಕಾರ್ಯದರ್ಶಿ ವರದರಾಜು ನೇತೃತ್ವದ ತಂಡ 2019ರಲ್ಲಿ ನಡೆದ ಲೋಕಸಭಾ ಚುಣಾವಣೆಯಲ್ಲಿ ಮತ್ತೊಮ್ಮೆ ಮೋದಿ ಪ್ರಧಾನ ಮಂತ್ರಿಯಾದರೆ ವಾರಣಾಸಿಯ ಕಾಶಿಯಾತ್ರೆ ಕೈಗೊಳ್ಳುವ ಹರಕೆ ಹೊತ್ತಿದ್ದರು. ಇಂದು ಹರಕೆ ಈಡೇರಿದೆ ಭಕ್ತರೊಂದಿಗೆ ದೇವರ ದರ್ಶನ ಮಾಡಲು ಕಾಶಿಯಾತ್ರೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ಮೋದಿ ಸರ್ಕಾರದ ವಿರುದ್ಧ ಹೋರಾಟ; ಪ್ರಶಸ್ತಿ ತಿರಸ್ಕರಿಸಿದ ರಂಗಕರ್ಮಿ

ಪ್ರಧಾನಮಂತ್ರಿ ನರೇಂದ್ರ ಮೋದಿ ನೀಡಿದ ಜನರ ಪರ ಯೋಜನೆಗಳು ಪ್ರತಿಯೊಬ್ಬರಿಗೆ ಲಭಿಸಬೇಕು. ದೇಶದ ಜನ ಒಂದಲ್ಲ ಒಂದು ಯೋಜನೆಯ ಫಲಾನುಭವಿಗಳಾಗುತ್ತಿದ್ದಾರೆ, ಮತ್ತೆ ಮೋದಿ ಅವರೇ ಪ್ರಧಾನಮಂತ್ರಿ ಆದರೆ ಭಾರತ ದೇಶದ ಪ್ರಗತಿ ಮತ್ತಷ್ಟುವೃದ್ದಿಸುವುದು, ಸರ್ವ ಜನರು ಅಭಿವೃದ್ಧಿಯತ್ತ ಸಾಗುವರು ಎಂದು ತಿಳಿಸಿದರು.

ಕಾಶಿಯಾತ್ರೆಯಲ್ಲಿ ವಿವಿಧ ಗ್ರಾಮಗಳ ಆಸಕ್ತ ಭಕ್ತರಾದ ನಾಗಣ್ಣ, ಗೋಪಾಲ, ಸೋಮಾಚಾರಿ, ಲಲಿತಾ, ಚೆನ್ನಮ್ಮ,ನಾಗಮಣಿ, ಸರಸ್ವತಮ್ಮ, ಶಾರದಮ್ಮ, ಪುಟ್ಟತಾಯಮ್ಮ, ಜಯಮ್ಮ, ಮಂಗಳಮ್ಮ ಮತ್ತಿತರರಿದ್ದರು.