ಮಂಡ್ಯ [ಸೆ.20]: ರಾಜ್ಯದಲ್ಲಿ ಮೂರು ನಾಲ್ಕು ತಿಂಗಳಲ್ಲಿ ಮತ್ತೆ ಚುನಾವಣೆ ಎದುರಾಗಲಿದೆ ಎಂದು ಹೇಳಿರುವ ಕೋಡಿ ಮಠದ ಶ್ರೀಗಳಿಗೆ ಬಿಜೆಪಿ ಕಾರ್ಯಕರ್ತ ಸವಾಲು ಹಾಕಿದ್ದಾನೆ. 

ಮಂಡ್ಯದ ಶಿವಕುಮಾರ್ ಆರಾಧ್ಯ ಎನ್ನುವ ವ್ಯಕ್ತಿ ಕೋಡಿ ಮಠದ ಶ್ರೀಗಳು ಹೇಳಿದಂತೆ ನಾಲ್ಕು ತಿಂಗಳಲ್ಲಿ ಸರ್ಕಾರ ಪತನವಾದರೆ ಕೈ ಬೆರಳು ಕಟ್ ಮಾಡಿಕೊಂಡು ಪಾದಕ್ಕೆ ಅರ್ಪಿಸುವುದಾಗಿ ಹೇಳಿದ್ದಾರೆ.

ಒಂದು ವೇಳೆ ಶ್ರೀಗಳು ಹೇಳಿದ ಭವಿಷ್ಯ ಸುಳ್ಳಾದಲ್ಲಿ ಅವರು ನನ್ನು ಮಠದ ಶಿಷ್ಯನಾಗಿ ಸ್ವೀಕಾರ ಮಾಡಲು ಎಂದು ಸವಾಲು ಹಾಕಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜ್ಯದಲ್ಲಿ ಚುನಾವಣೆ ನಡೆದು 18 ತಿಂಗಳಷ್ಟೇ ಆಡಳಿಯ ನಡೆಯಲಿದ್ದು, ಮತ್ತೆ ಮಧ್ಯಂತರ ಚುನಾವಣೆ ಎದುರಾಗಲಿದೆ. ಬಿಜೆಪಿ ಸರ್ಕಾರಕ್ಕೆ 4 ತಿಂಗಳಷ್ಟೇ ಅಧಿಕಾರವಧಿ ಎಂದು ಶ್ರೀಗಳು ಹೇಳಿದ್ದರು.

ಚುನಾವಣೆ ಬಗ್ಗೆ ಕೋಡಿ ಶ್ರೀ ಭವಿಷ್ಯ : ಕೆಲವೇ ತಿಂಗಳಿದ್ಯಾ ಸರ್ಕಾರದ ಆಯುಷ್ಯ?

"